ಬಳಿಕ, ಈಗ ರಸ್ತೆಗೆ ‘ಶ್ರೀ.ಪುನೀತ್ ರಾಜ್ಕುಮಾರ್ ರಸ್ತೆ’ ಎಂದು ನಾಮಕರಣ ಮಾಡಬಹುದು ಎಂದು ಈ ರಸ್ತೆಯ ಸಮೀಪದ ಬಡಾವಣೆಗಳಿಗೆ ಸೇರಿರುವ 8 ಸಂಘಸಂಸ್ಥೆಗಳ 700ಕ್ಕೂ ಹೆಚ್ಚು ಜನ ಒಪ್ಪಿಗೆ ಸೂಚಿಸಿದ್ದು, ಸಹಿ ಕೂಡಾ ಹಾಕಿದ್ದಾರೆ. ಆದರೆ, ಈ ರಸ್ತೆಗೆ ಅಪ್ಪು ಹೆಸರಿಡಲು ನಟ ಅಂಬರೀಷ್ ಅಭಿಮಾನಿಗಳು ಮಾತ್ರ ಆಕ್ಷೇಪ ಸಲ್ಲಿಸಿ ಬಹಳಷ್ಟು ಚರ್ಚೆಗೆ ಕಾರಣರಾದರು. ಆದರೆ, ಬಿಬಿಎಂಪಿ ಈಗ ರಸ್ತೆಗೆ ‘ಪುನೀತ್ ರಾಜ್ಕುಮಾರ್ ರಸ್ತೆ’ ಎಂದು ನಾಮಕರಣ ಮಾಡಲು ಅನುಮೋದನೆ ನೀಡಿದೆ. ಬಿಬಿಎಂಪಿ ಈಗ ಪುನೀತ್ ಹೆಸರನ್ನು ರಸ್ತೆಗೆ ಇಡುವ ನಿರ್ಧಾರವನ್ನು ತೆಗೆದುಕೊಂಡಿದ್ದು, ಇದೀಗ ಎಲ್ಲರೂ ಇದನ್ನು ಸ್ವಾಗತಿಸಲಿದ್ದಾರೆ ಎಂಬ ಆಶಯ ಅಪ್ಪು ಅಭಿಮಾನಿಗಳದ್ದಾಗಿದೆ. ಈಗಾಗಲೇ ರಾಜ್ಯದ ಹಲವು ಪಟ್ಟಣ, ನಗರ, ಗ್ರಾಮಗಳಲ್ಲಿ ರಸ್ತೆಗಳಿಗೆ, ವೃತ್ತಗಳಿಗೆ ಅಪ್ಪು ಅವರ ಹೆಸರು ಇಡಲಾಗಿದೆ. ಪುನೀತ್ ರಾಜ್‌ಕುಮಾರ್ ಪುತ್ಥಳಿಗಳನ್ನು ಬೀದಿಗಳಲ್ಲಿ ಇರಿಸಲಾಗಿದೆ. ಈಗ, ಬಿಬಿಎಂಪಿಯ ಈ ನಿರ್ಧಾರದಿಂದ ಗೂಗಲ್ ನಕ್ಷೆಯಲ್ಲಿ ಎಲ್ಲೆಲ್ಲೂ ಅಪ್ಪು ಹೆಸರಿನದ್ದೇ ಹವಾ ಎಂದು ಹೇಳಬೇಕು.