'ಗೂಢಚಾರಿ 2' ಚಿತ್ರದಲ್ಲಿ ಅಡಿವಿಶೇಷ್​ಗೆ ಜೋಡಿಯಾದ ಬಾಲಿವುಡ್​ ನಟಿ ಯಾರು ಗೊತ್ತಾ?

Banitha Sandhu (10)
Published on

ಬಾಲಿವುಡ್‌ನ ‘ಅಕ್ಟೋಬರ್’ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ನಟಿ ಬನಿತಾ ಸಂಧು, ನಂತರ ‘ಸರ್ದಾರ್ ಉದ್ಧಮ್’, ತಮಿಳಿನ ‘ಆದಿತ್ಯ ವರ್ಮಾ’, ಹಾಲಿವುಡ್‌ನ ‘ಎಟರ್ನಲ್ ಲವ್’ ಚಿತ್ರಗಳಲ್ಲಿ ಮಿಂಚಿದ್ದಾರೆ. ಈಗ ತೆಲುಗು ಚಿತ್ರರಂಗಕ್ಕೂ ಪದಾರ್ಪಣೆ ಮಾಡಲು ರೆಡಿಯಾಗಿದ್ದಾರೆ ಬನಿತಾ ಸಂಧು. ಹೌದು, ಟಾಲಿವುಡ್‌ನ ‘ಮೇಜರ್’, ‘ಹಿಟ್’ ಸಿನಿಮಾಗಳ ಖ್ಯಾತಿಯ ಅಡಿವಿಶೇಷ್ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ ಚಿತ್ರವಿದು.

Banita Sandhu New Latest HD Photos | Aditya Varma Movie Heroine Banita Sandhu Photo Shoot Images
Banita Sandhu New Latest HD Photos | Aditya Varma Movie Heroine Banita Sandhu Photo Shoot Images

2018ರಲ್ಲಿ ತೆರೆಕಂಡ ‘ಗೂಢಾಚಾರಿ’ ಚಿತ್ರದ ಸೀಕ್ವಲ್ ‘ಗೂಢಾಚಾರಿ 2’ಗೆ ಬನಿತಾ ನಾಯಕಿಯಾಗಿ ಚಿತ್ರತಂಡ ಸೇರಿದ್ದಾರೆ. ಈ ಬಗ್ಗೆ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಅಡಿವಿಶೇಷ್, ‘ಎಲ್ಲರಿಗೂ ಒಂದು ಸರ್‌ಪ್ರೈಸ್! ಹಿಂದಿ, ಇಂಗ್ಲಿಷ್ ಆಯಿತು. ಬನಿತಾ ತೆಲುಗು ಸಿನಿಮಾ ಮಾಡುತ್ತಿದ್ದಾರೆ. ‘ಗೂಢಚಾರಿ’ ಬಳಗಕ್ಕೆ ಸ್ವಾಗತ ಅವರಿಗೆ’ ಎಂದು ಅಕ್ಕರೆಯ ಸ್ವಾಗತಕೋರಿದ್ದಾರೆ.

ವಿಶೇಷ ಎಂದರೆ ಮೊದಲ ತೆಲುಗು ಸಿನಿಮಾ ಜತೆಗೆ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಎನ್ನುವ ಖುಷಿಯಲ್ಲಿದ್ದಾರೆ ಬನಿತಾ. ಅಂದಹಾಗೆ, ಈ ಚಿತ್ರಕ್ಕೆ ‘ಮೇಜರ್’ ಸಿನಿಮಾದ ಸಂಕಲನಕಾರ ವಿನಯ್ ಕುಮಾರ್ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net