ಇನ್ನು, ನಿನ್ನೆ ಅಂತು ಸಿನಿಮಾ ಟಿಕೆಟ್ ಸಿಗದ ಕಾರಣ ಹಲವು ಜೂ.ಎನ್ಟಿಆರ್, ರಾಮ್ ಚರಣ್ ತೇಜ್ ಅಭಿಮಾನಿಗಳು ರಾಯಚೂರಿನ ಪೂರ್ಣಿಮಾ ಚಿತ್ರಮಂದಿದ ಬಾಗಿಲು, ಕಿಟಕಿ, ಪೈಪ್ ಮುರಿದು ಒಳನುಗ್ಗಿರುವ ದೃಶ್ಯಗಳು ವೈರಲ್ ಆಗಿದ್ದವು. ಕೇವಲ ಕರುನಾಡಲ್ಲಿ ಮಾತ್ರವಲ್ಲದೇ, ಆಂಧ್ರ-ತೆಲಂಗಾಣದ ಹಲವು ಭಾಗಗಳಲ್ಲಿಯೂ ಈ ರೀತಿಯ ಘಟನೆಗಳು ನಡೆದಿವೆ. ಆಂಧ್ರದ ಹಲವು ಪಟ್ಟಣಗಳಲ್ಲಿ ರಾತ್ರಿ ಶೋ ಹಾಕಲು ತಡವಾಗಿದ್ದರಿಂದ ಕಾಂಪೌಂಡ್ ಹಾರಿ ಚಿತ್ರಮಂದಿರದ ಬಾಗಿಲು ಮುರಿದು ಪ್ರೇಕ್ಷಕರು ಚಿತ್ರಮಂದಿದ ಒಳನುಗ್ಗಿದ್ದಾರೆ. ತೆಲಂಗಾಣದಲ್ಲಿ ಸಹ ಹಲವು ಕಡೆ ಶೋ ತಡ ಮಾಡಿದ್ದಕ್ಕೆ, ಚಿತ್ರಮಂದಿರಗಳ ಗಾಜುಗಳನ್ನು ಪುಡಿ ಮಾಡಿದ್ದಾರೆ ಎನ್ಟಿಆರ್, ರಾಮ್ ಚರಣ್ ಅಭಿಮಾನಿಗಳು.