ಹಿಮಾಚಲ ಪ್ರದೇಶದ ಮಣಿಕರಣ್ದಿಂದ ಆರಂಭಿಸಿ ಕರ್ನಾಟಕದ ಬೆಂಗಳೂರಿನಲ್ಲಿರುವ ಅಪ್ಪು ಸಮಾಧಿಯವರೆಗೆ ‘ಮೌಂಟ್ನೇರ್ ಗುರುಪ್ರಕಾಶ್‘ರ ಅಭಿಮಾನದ ಬೈಸಿಕಲ್ ಯಾತ್ರೆ ಯಶಸ್ವಿಯಾಗಿ ನಡೆದಿದೆ. ಅಪ್ಪು ಸಮಾಧಿಗೆ ಭೇಟಿ ನೀಡಿದ ಗುರು ಅವರನ್ನು ಸ್ವಾಗತಿಸಿ ದೊಡ್ಮನೆ ಕುಟುಂಬದ ಶಿವಣ್ಣ, ರಾಘಣ್ಣ ಅವರು ಸನ್ಮಾನಿಸಿದ್ದರು. ಬಳಿಕ, ಗುರು ಪ್ರಕಾಶ್ ಗೌಡ ಅವರನ್ನು ತಮ್ಮ ಮನೆಯ ಬಳಿ ಭೇಟಿ ಮಾಡಿದ ನಟ ಧ್ರುವ ಸರ್ಜಾ ಅವರು ಕೂಡ, ಅಪ್ಪು ಅವರ ಈ ಅಪರೂಪದ ಅಭಿಮಾನಿಯನ್ನು ಅಭಿನಂದಿಸಿದ್ದಾರೆ.