ಅರ್ಜುನ್-ಮಲೈಕಾ ದೂರ ದೂರ?; ಬಾಲಿವುಡ್​ನಲ್ಲೀಗ ಮತ್ತೊಂದು ಬ್ರೇಕಪ್ ವದಂತಿ

Malaika
Published on

ಅವರಿಬ್ಬರೂ ಒಂದಲ್ಲ ಒಂದು ದಿನ ದೂರಾಗುತ್ತಾರೆ, ಎಷ್ಟೋ ಅನ್ಯೋನ್ಯತೆ ಇದ್ದರೂ ಇಬ್ಬರ ನಡುವೆ ಬ್ರೇಕಪ್ ಆಗುತ್ತದೆ ಎಂಬ ಮಾತು ನಾಲ್ಕು ವರ್ಷಗಳಿಂದಲೂ ಇತ್ತು. ಅದೀಗ ನಿಜವಾಗಿದೆ ಎಂದು ಹೇಳಲಾಗುತ್ತಿದೆ. ಬಾಲಿವುಡ್​ನ ಅತ್ಯಂತ ಚರ್ಚಾಸ್ಪದ ಜೋಡಿಯಾಗಿದ್ದ ಅರ್ಜುನ್ ಕಪೂರ್ ಮತ್ತು ಮಲೈಕಾ ಅರೋರಾ ದೂರಾಗಿದ್ದಾರಂತೆ. ಹಾಗಂತ ಬಾಲಿವುಡ್ ಮಾತನಾಡಿಕೊಳ್ಳುತ್ತಿದೆ.

ಅರ್ಜುನ್ ಮತ್ತು ಮಲೈಕಾ ನಾಲ್ಕು ವರ್ಷಗಳ ಹಿಂದೆ ಪರಸ್ಪರ ಹತ್ತಿರವಾಗಿದ್ದರು. ಅರ್ಜುನ್​ಗೂ ಮುನ್ನ ಮಲೈಕಾಗೆ ಅರ್ಬಾಜ್ ಖಾನ್ ಜತೆಗೆ ಮದುವೆಯಾಗಿತ್ತು. ಈ ದಂಪತಿಗೊಬ್ಬ ಬೆಳೆದು ಇಂತ ಮಗನೂ ಇದ್ದಾನೆ. ಈ ನಡುವೆ ಅರ್ಬಾಜ್ ಮತ್ತು ಮಲೈಕಾ, ಕಾರಣಾಂತರಗಳಿಂದ ದೂರವಾಗಿ ಡಿವೋರ್ಸ್ ಪಡೆದರು. ಈ ಸಂದರ್ಭದಲ್ಲಿ ಮಲೈಕಾಗೆ ಅರ್ಜುನ್ ಹತ್ತಿರವಾದರಂತೆ. ಮೊದಮೊದಲು ತಾವಿಬ್ಬರೂ ಗೆಳೆಯರು ಎಂದು ಹೇಳಿಕೊಂಡು ಓಡಾಡುತ್ತಿದ್ದ ಅರ್ಜುನ್ ಮತ್ತು ಮಲೈಕಾ, ಎರಡು ವರ್ಷಗಳ ಹಿಂದೆ ಪರಸ್ಪರ ಪ್ರೀತಿಸುತ್ತಿರುವುದಾಗಿ ಹೇಳಿಕೊಂಡಿದ್ದರು. ಅವರಿಬ್ಬರ ನಡುವೆ ವಯಸ್ಸಿನ ಅಂತರವಿರುವುದರಿಂದ, ಅವರಿಬ್ಬರೂ ಹೆಚ್ಚು ದಿನಗಳ ಕಾಲ ಜತೆಗೆ ಇರುವುದಿಲ್ಲ ಎಂದು ಹೇಳಲಾಗಿತ್ತು.

ಈಗ ನಾಲ್ಕು ವರ್ಷಗಳ ನಂತರ ಅವರಿಬ್ಬರೂ ದೂರವಾಗಿರುವ ಸುದ್ದಿ ಇದೆ. ಆದರೆ, ಇದು ಸುಳ್ಳುಸುದ್ದಿ ಎಂದು ಅರ್ಜುನ್ ಹೇಳಿಕೊಂಡಿದ್ದಾರೆ. ಲಾಕ್​ಡೌನ್ ಸಮಯದಲ್ಲಿ ಏನೇನೋ ನಂಬಬೇಡಿ ಎಂದು ಹೇಳಿದ್ದಾರೆ. ನಿಜಕ್ಕೂ ಅರ್ಜುನ್ ಮತ್ತು ಮಲೈಕಾ ದೂರವಾಗಿದ್ದಾರಾ? ಉತ್ತರಕ್ಕಾಗಿ ಇನ್ನಷ್ಟು ಸಮಯ ಕಾಯಬೇಕು. ಏಕೆಂದರೆ ಬೆಂಕಿ ಇಲ್ಲದೆ ಹೊಗೆಯಾಡಲ್ಲ! -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net