ಅಪ್ಪು ಪುಣ್ಯಸ್ಮರಣೆ ಅಂಗವಾಗಿ ವೃದ್ಧಾಶ್ರಮ ನಿರ್ಮಾಣಕ್ಕೆ ಮುಂದಾದ ಅಭಿಮಾನಿಗಳು..

guddali pooje
Published on

ಕೊಪ್ಪಳ: ಶನಿವಾರ ಪುನೀತ್​​ ರಾಜ್​​ಕುಮಾರ್ ​​ಅವರ ಒಂದು ವರ್ಷದ ಪುಣ್ಯಸ್ಮರಣೆಯ ಅಂಗವಾಗಿ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಅಪ್ಪು ಹೆಸರಿನಲ್ಲಿ ಸಾವಿರಾರು ಅಭಿಮಾನಿಗಳು ವಿವಿಧ ಬಗೆಯ ಕಾರ್ಯಕ್ರಮಗಳು ಹಾಗೂ ದಾನಗಳನ್ನು ಮಾಡಿದರು. ಆದರೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹೊಸಳ್ಳಿಯಲ್ಲಿ ಅಪ್ಪುವಿನ ಪುಣ್ಯಸ್ಮರಣೆಯನ್ನು ವಿಶೇಷ ರೀತಿ ಮಾಡುವುದಕ್ಕಾಗಿ ಅಭಿಮಾನಿಗಳು ವೃದ್ಧಾಶ್ರಮ‌ ನಿರ್ಮಾಣಕ್ಕೆ ಮುಂದಾಗುವ ಮೂಲಕ ಸಮಾಜಕ್ಕೆ ಮಾದರಿಯಾಗುವ ಕೆಲಸ ಮಾಡಿದ್ದಾರೆ.

ಅಪ್ಪು ಅಭಿಮಾನಿಗಳು ಶನಿವಾರ ಹೊಸಳ್ಳಿ ರಸ್ತೆಯಲ್ಲಿರುವ ಎಲ್​​​ವಿಟಿ ಕಾಲನಿಯಲ್ಲಿ ವೃದ್ಧಾಶ್ರಮ ನಿರ್ಮಾಣಕ್ಕಾಗಿ ಭೂಮಿ ಪೂಜೆ ನೆರವೇರಿಸಿದರು. ಈ ವೇಳೆ ಭೂಮಿ ಪೂಜೆಗೆ ಆಗಮಿಸಿದ ಶಾಸಕ ಪರಣ್ಣ ಮುನವಳ್ಳಿ ಪುನೀತ್​ ಅವರ ಕಾರ್ಯಗಳನ್ನು ಸ್ಮರಿಸಿ, ಅಭಿಮಾನಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಅಪ್ಪು ನಮ್ಮನ್ನೆಲ್ಲಾ ಅಗಲಿ ಒಂದು ವರ್ಷಗಳಾದರೂ ಅಭಿಮಾನಿಗಳ ಮನಸ್ಸಿನಲ್ಲಿ ಮಾತ್ರ ಅಪ್ಪು ಎಂದೆಂದಿಗೂ ಅಜರಾಮರ ಎಂಬುದಕ್ಕೆ ಈ ಕೆಲಸ ಸಾಕ್ಷಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net