ಅಶ್ವಿನಿಗಾಗಿ ಅಪ್ಪು ಭಾವಚಿತ್ರವಿರುವ ವಿಶೇಷ ಸೀರೆ ಮಾಡಿಸಿ ತಂದ ಅಭಿಮಾನಿಗಳು; ಭಾವುಕರಾದ ರಾಘಣ್ಣ.

ಅಅಪು
Published on

ಚಿಕ್ಕಬಳ್ಳಾಪುರ: ಶನಿವಾರ ಅಶ್ವಿನಿ ಪುನೀತ್​ ರಾಜ್​ಕುಮಾರ್​ಗೆ ಉಡುಗೊರೆ ನೀಡಲು ಅಪ್ಪು ಅಭಿಮಾನಿಗಳು ವಿಶೇಷವಾದ ರೇಷ್ಮೆ ಸೀರೆಯೊಂದನ್ನು ತಯಾರಿಸಿ ತಂದಿದ್ದಾರೆ. ಅಪ್ಪು ಭಾವಚಿತ್ರವಿರುವ ರೇಷ್ಮೆ ಸೀರೆ ಇದಾಗಿದ್ದು, ಚಿಕ್ಕಬಳ್ಳಾಪುರದ ರೇಷ್ಮೆ ಡಿಸೈನರ್ಸ್​​​​ ಕಡೆಯಿಂದ ಅಶ್ವಿನಿ ಪುನೀತ್​ ರಾಜ್​ಕುಮಾರ್​ರಿಗಾಗಿಯೇ ವಿಭಿನ್ನವಾಗಿ ತಯಾರಿಸಲಾಗಿದೆ.

ಪುನೀತ್​ರಾಜ್​​ಕುಮಾರ್​​ ಸಮಾಧಿಯ ಬಳಿ ಆಗಮಿಸಿದ ಸಂದರ್ಭದಲ್ಲಿ ಅಪ್ಪು ಅಭಿಮಾನಿಗಳು ಈ ವಿಶೇಷ ಸೀರೆಯನ್ನು ಅಶ್ವಿನಿ ಪುನೀತ್​ರಿಗೆ ನೀಡಬೇಕೆಂದಿದ್ದರು. ಆದರೆ ಜನಸಂದಣಿಯ ಕಾರಣ ಈ ಸೀರೆಯನ್ನು ಅವರಿಗೆ ನೀಡಲಾಗದೇ ತಮ್ಮ ಬಳಿಯೇ ಇಟ್ಟುಕೊಂಡಿದ್ದರು. ಆದರೆ ಶನಿವಾರ ರಾಘಣ್ಣ ಚಿಕ್ಕಬಳ್ಳಾಪುರಕ್ಕೆ ಆಗಮಿಸಿದ ವೇಳೆ ಈ ಸೀರೆಯನ್ನು ಅವರ ಬಳಿ ನೀಡಿದ್ದಾರೆ.

ಗೋಲ್ಡನ್​ ಬಣ್ಣದ ಈ ರೇಷ್ಮೆ ಸೀರೆಯಲ್ಲಿ ಅಪ್ಪು ಭಾವಚಿತ್ರವನ್ನು ನೀಲಿ ಬಣ್ಣದಿಂದ ಮಾಡಲಾಗಿದೆ. ಹಾಗೂ ಸೀರೆಯ ಕೆಳಭಾಗದಲ್ಲಿ ಡಾ.ಪುನೀತ್​​ ರಾಜ್​ಕುಮಾರ್​ ಎಂಬ ಹೆಸರನ್ನು ಸಾಲಾಗಿ ಚಿತ್ರಿಸಲಾಗಿದೆ. ಅಭಿಮಾನಿಗಳು ಕೊಟ್ಟ ಈ ಸೀರೆಯನ್ನು ಸ್ವೀಕರಿಸಿದ ರಾಘಣ್ಣ ಕೆಲಕ್ಷಣ ಭಾವುಕರಾದರು. ನಂತರ ಅಶ್ವಿನಿ ಅವರಿಗೆ ನೀಡುವುದಾಗಿ ತಿಳಿಸಿ ತಾವೇ ಆ ಸೀರೆಯನ್ನು ಪಡೆದುಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net