'ನಾನು ನಿನ್ನೆ ಯಮರಾಜನನ್ನು ಭೇಟಿಯಾದೆ...ಮೂರ್ಖ ಭಕ್ತರಿಗಾಗಿ ಭೂಮಿಗೆ ಬಂದೆ': ಅನುರಾಗ್ ಕಶ್ಯಪ್​

Anuragh Kashyap
Published on

ಮುಂಬೈ: ಬಾಲಿವುಡ್​ ನಿರ್ದೇಶಕ ಅನುರಾಗ್​ ಕಶ್ಯಪ್​ ಅವರು ಸದಾ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿರುತ್ತಾರೆ. ಅದೂ ಕಾಂಟ್ರವರ್ಸಿಗಳೇ ಜಾಸ್ತಿ. ಅನುರಾಗ್​ ಕಶ್ಯಪ್​ ಮೃತಪಟ್ಟಿದ್ದಾರೆ...ಆದರೆ ಸದಾ ನೆನಪಾಗಿ ನಮ್ಮೊಂದಿಗೆ ಉಳಿಯುತ್ತಾರೆ ಎಂಬ ಟ್ವೀಟ್ ನಿನ್ನೆ ಕೆಆರ್​ಕೆ ಬಾಕ್ಸ್​ಆಫೀಸ್​ ಹೆಸರಿನ ಅಕೌಂಟ್​​ನಲ್ಲಿ ಪೋಸ್ಟ್ ಆಗಿತ್ತು.

ಬಾಲಿವುಡ್​ ನ್ಯೂಸ್​ ಮತ್ತು ಟ್ರೇಡ್​ ಅನಾಲಿಸಿಸ್​ಗಾಗಿ ನಟ, ವಿಮರ್ಶಕ, ನಿರ್ಮಾಪಕ, ಲೇಖಕ ಕಮಲ್ ಆರ್​ ಖಾನ್​ ಅವರು ಕ್ರಿಯೇಟ್ ಮಾಡಿರುವ ಅಕೌಂಟ್​ ಇದಾಗಿದೆ. ಹಾಗೇ ಅವರ ವೈಯಕ್ತಿಕ ಖಾತೆಯೂ ಬೇರೆ ಇದೆ.

ಕೆಆರ್​ಕೆ ಬಾಕ್ಸ್ ಆಫೀಸ್​ ಟ್ವಿಟರ್​ ಖಾತೆ ತಮಗೆ ಶ್ರದ್ಧಾಂಜಲಿ ಸಲ್ಲಿಸಿದ್ದನ್ನು ನೋಡಿದ ಅನುರಾಗ್ ಕಶ್ಯಪ್​ ತುಂಬ ಫನ್ನಿಯಾಗಿ ಇಂದು ಪ್ರತಿಕ್ರಿಯೆ ಕೊಟ್ಟಿದ್ದಾರೆ.  ಇದನ್ನೂ ಓದಿ: ಯುಎಸ್​​ನಲ್ಲಿ ಆಂಧ್ರದ ಯುವತಿ ಸಾವು; ಭಾವಿ ಪತಿಯೊಂದಿಗೆ ಜಲಪಾತ ನೋಡಲು ಹೋಗಿದ್ದಳು…!

ನಿನ್ನೆ ನಾನು ಯಮರಾಜನನ್ನು ಭೇಟಿಯಾದೆ. ಇಂದು ಅವರೇ ನನ್ನನ್ನು ಮನೆಗೆ ವಾಪಸ್ ಕಳಿಸಿದರು. ನಿನಗೆ ಇನ್ನೂ ಅನೇಕ ಸಿನಿಮಾಗಳನ್ನು ಮಾಡುವುದು ಬಾಕಿ ಉಳಿದಿದೆ. ನೀವು ಸಿನಿಮಾ ಮಾಡದೆ ಇದ್ದರೆ, ಮೂರ್ಖರು..ಭಕ್ತರು ಅದನ್ನು ಬಹಿಷ್ಕರಿಸಲು ಆಗದೆ, ಅವರ ಜೀವನವೇ ವ್ಯರ್ಥವಾಗುತ್ತದೆ ಎಂದು ಯಮರಾಜ ನನ್ನ ಬಳಿ ಹೇಳಿ, ಮತ್ತೆ ಭೂಮಿಗೆ ತಂದು ಬಿಟ್ಟಿದ್ದಾರೆ. ನಾನಿನ್ನು ನನ್ನ ಸಿನಿಮಾ ಬಹಿಷ್ಕರಿಸುವವರ ಜೀವನಕ್ಕೆ ಅರ್ಥ ಕೊಡಬೇಕಾಗಿದೆ ಎಂದು ಟ್ವೀಟ್​ ಮಾಡಿದ್ದಾರೆ. ಇದನ್ನೂ ಓದಿ: ರಾಗಿಣಿಯನ್ನು ತಬ್ಬಿಕೊಂಡು ಬೀಳ್ಕೊಟ್ಟ ಸಂಜನಾ: ಸಾಂತ್ವನ ಕೇಂದ್ರದಲ್ಲಿ ಗದ್ಗದಿತರಾದ ನಟಿಯರು!

ಮೊನ್ನೆಯಷ್ಟೇ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡ ಅನುರಾಗ್​ ಕಶ್ಯಪ್​, ಅಂದು ಅರ್ನಬ್​ ಗೋಸ್ವಾಮಿ ಅವರ ಕಚೇರಿಗೆ ಎರಡು ಚಪ್ಪಲಿಗಳಿಗೆ ಫ್ರೇಮ್​ ಕಟ್ಟಿಸಿಕೊಂಡು ತೆಗೆದುಕೊಂಡು ಹೋಗಿ ವಿವಾದ ಸೃಷ್ಟಿಸಿದ್ದರು.

ಇನ್ನು ಅನುರಾಗ್​ ಕಶ್ಯಪ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಬಗ್ಗೆ ಸ್ಪಷ್ಟನೆ ನೀಡಿರುವ ಕೆಆರ್​ಕೆ ಬಾಕ್ಸ್ ಆಫೀಸ್​, ಅನುರಾಗ್ ಕಪೂರ್​ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಹೋಗಿ ಈ ಎಡವಟ್ಟಾಗಿದೆ. ನಮ್ಮ ಸಿಬ್ಬಂದಿಯೋರ್ವರು ಮಾಡಿದ ತಪ್ಪಿಗೆ ಕ್ಷಮೆ ಕೇಳುತ್ತೇವೆ ಎಂದಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net