ಬಡವರಿಗೆ ಲಕ್ಷ ಲಕ್ಷ ಹಣ ಹಂಚುತ್ತಿದ್ದ ಹರ್ಷ ಸಾಯಿ ಇಂಥಾ ನೀಚ ಕೆಲಸ ಮಾಡಿದ್ರಾ? ಸ್ಫೋಟಕ ವಿಡಿಯೋ ವೈರಲ್​ | Harsha Sai

Harsha Sai
Published on

ವಿಜಯವಾಡ: ತೆಲುಗು ರಾಜ್ಯಗಳಲ್ಲಿ ಹರ್ಷ ಸಾಯಿ ( Harsha Sai ) ಬಗ್ಗೆ ಗೊತ್ತಿಲ್ಲದವರೇ ಇಲ್ಲ. ಈತ ಓರ್ವ ಖ್ಯಾತ ಯೂಟ್ಯೂಬರ್​. ಬಡವರಿಗೆ ಸಹಾಯ ಮಾಡುವ ಮೂಲಕ ಉತ್ತಮ ವ್ಯಕ್ತಿ ಎಂದು ಗುರುತಿಸಿಕೊಂಡಿದ್ದಾರೆ. ಬಡವರಿಗೆ ಟಿವಿ, ಫ್ರಿಡ್ಜ್ ಕೊಡುವುದು ಮತ್ತು ಹಣದ ಅವಶ್ಯಕತೆ ಇರುವವರಿಗೆ ಆರ್ಥಿಕ ನೆರವನ್ನು ಒದಗಿಸುವುದು ಸೇರಿದಂತೆ ಹಲವು ಒಳ್ಳೆಯ ಕೆಲಸಗಳನ್ನು ಮಾಡಿ ಖ್ಯಾತಿ ಗಳಿಸಿದ್ದಾರೆ. ಈ ಕಾರಣದಿಂದ ಹರ್ಷ ಸಾಯಿ ಫಾಲೋವರ್ಸ್ ಸಂಖ್ಯೆ ಭಾರಿ ಪ್ರಮಾಣದಲ್ಲಿ ಹೆಚ್ಚಿದೆ.

ಅಂದಹಾಗೆ ಹರ್ಷ ಸಾಯಿ ಕಡಿಮೆ ಸಮಯದಲ್ಲಿ ಬಹಳ ಪ್ರಸಿದ್ಧರಾದರು. ‘ಮೆಗಾ’ ಸಿನಿಮಾದ ಮೂಲಕ ಹೀರೋ ಆಗಿ ಲಾಂಚ್ ಆಗಲು ತಯಾರಿ ನಡೆಸುತ್ತಿದ್ದಾರೆ. ಇದರ ನಡುವೆ ಕೆಲ ದಿನಗಳಿಂದ ವಿವಾದದ ಮೂಲಕವೇ ಹರ್ಷ ಸಾಯಿ ( Harsha Sai ) ಸುದ್ದಿಯಾಗುತ್ತಿದ್ದಾರೆ. ಬೆಟ್ಟಿಂಗ್ ಆ್ಯಪ್‌ಗಳನ್ನು ಪ್ರಚಾರ ಮಾಡುತ್ತಿದ್ದಾರೆ ಎಂಬ ಆರೋಪ ಈ ಹಿಂದೆ ಕೇಳಿಬಂದಿತ್ತು. ಇದೀಗ ಮತ್ತೊಂದು ಆರೋಪ ಕೇಳಿಬಂದಿದೆ. ಮದುವೆಯಾಗುವುದಾಗಿ ನಂಬಿಸಿ ವಂಚನೆ ಮಾಡಿದ್ದಾರೆ ಎಂದು ಯುವತಿಯೊಬ್ಬಳು ಹರ್ಷ ಸಾಯಿ ವಿರುದ್ಧ ನರಸಿಂಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಹರ್ಷ ಸಾಯಿ ತನ್ನನ್ನು ಮದುವೆಯಾಗುವುದಾಗಿ ವಂಚಿಸಿದ್ದಲ್ಲದೆ, 2 ಕೋಟಿ ರೂಪಾಯಿ ಪಡೆದು ವಂಚಿಸಿದ್ದಾನೆ ಮತ್ತು ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾಳೆ. ಹೀಗಾಗಿ ಪೊಲೀಸರು ಹರ್ಷ ಸಾಯಿ ವಿರುದ್ಧ ಸೆಕ್ಷನ್ 376 ಮತ್ತು 354ರ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಿದ್ದಾರೆ.

ತನ್ನ ವಿರುದ್ಧ ದಾಖಲಾಗಿರುವ ಅತ್ಯಾಚಾರ ಪ್ರಕರಣ ಸಂಬಂಧ ಯೂಟ್ಯೂಬರ್ ಹರ್ಷಸಾಯಿ ಕೂಡ ಪ್ರತಿಕ್ರಿಯಿಸಿದ್ದಾರೆ. ತನ್ನ ವಿರುದ್ಧದ ಎಲ್ಲ ಆರೋಪಗಳು ಸುಳ್ಳು ಎಂದು ತಳ್ಳಿ ಹಾಕಿದ್ದಾರೆ. ಹಣಕ್ಕಾಗಿ ಈ ರೀತಿ ಸುಳ್ಳು ಆಪಾದನೆ ಮಾಡುತ್ತಿದ್ದಾರೆ. ಸದ್ಯದಲ್ಲೇ ಸತ್ಯ ಹೊರಬೀಳಲಿದೆ. ಇದೆಲ್ಲವನ್ನೂ ನನ್ನ ವಕೀಲರು ನೋಡಿಕೊಳ್ಳುತ್ತಾರೆ ಎಂದು ಹರ್ಷ ಸಾಯಿ ಸ್ಪಷ್ಟಪಡಿಸಿದರು. ಆದರೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದೊಂದೆ ಸ್ಫೋಟಕ ಸಂಗತಿಗಳು ಇದೀಗ ಹೊರಬೀಳುತ್ತಿವೆ.

Harsha Sai

ಆಡಿಯೋ ಲೀಕ್​

ಸಂತ್ರಸ್ತೆಯೊಂದಿಗೆ ಫೋನ್ ಕರೆಯಲ್ಲಿ ಮಾತನಾಡಿದ್ದ ಆಡಿಯೋವನ್ನು ಹರ್ಷ ಈಗಾಗಲೇ ಬಿಡುಗಡೆ ಮಾಡಿದ್ದಾರೆ. ಹರ್ಷ, 17 ನಿಮಿಷಕ್ಕೂ ಹೆಚ್ಚು ಕಾಲ ಯುವತಿಯೊಂದಿಗೆ ಮಾತನಾಡಿದ್ದಾರೆ. ಆದರೆ, ಆ ಆಡಿಯೋದಲ್ಲಿ ಸಂತ್ರಸ್ತೆ ಹೆಚ್ಚು ಮಾತನಾಡಿದ ಭಾಗವನ್ನು ಮಾತ್ರ ಹರ್ಷ ಬಿಡುಗಡೆ ಮಾಡಿದ್ದಾರೆ ಎನ್ನಲಾಗಿದೆ. ಇದರ ನಡುವೆ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ಹರ್ಷ ಸಾಯಿ ಸಂತ್ರಸ್ತೆಯೊಂದಿಗಿರುವ ಸಿಸಿಟಿವಿ ದೃಶ್ಯವೊಂದು ಬೆಳಕಿಗೆ ಬಂದಿದೆ.

ವಿಡಿಯೋ ಬಿಡುಗಡೆ

ವಿಡಿಯೋದಲ್ಲಿ ಹರ್ಷ ಸಾಯಿ ಮತ್ತು ಯುವತಿ ಯಾವುದೋ ವಿಷಯಕ್ಕೆ ಜಗಳವಾಡುತ್ತಿರುವುದು ಕಂಡು ಬಂದಿದೆ. ಹುಡುಗಿ ಹೊರಡುತ್ತಿದ್ದಂತೆ ಹರ್ಷ ಅವಳನ್ನು ಕರೆದು ತನ್ನ ಫೋನಿನಲ್ಲಿ ಏನನ್ನೋ ತೋರಿಸುತ್ತಿರುವುದು ಕಾಣಿಸುತ್ತದೆ. ನಗ್ನ ವೀಡಿಯೋ ತೋರಿಸಿ ಯುವತಿಗೆ ಹರ್ಷ ಬೆದರಿಕೆ ಹಾಕಿದ್ದಾನೆ ಎಂಬ ಆರೋಪ ಸಂತ್ರಸ್ತೆಯ ಆಪ್ತರಿಂದ ಇದೀಗ ಕೇಳಿ ಬರುತ್ತಿದೆ. ವಿಡಿಯೋದಲ್ಲಿ ಜಗಳ ಆಡುತ್ತಿದ್ದು, ಇಬ್ಬರ ನಡುವೆ ಏನಾಯಿತು? ಅವರು ಏನು ಮಾತನಾಡುತ್ತಿದ್ದಾರೆ? ಎಂಬುದು ಇನ್ನಷ್ಟೇ ತಿಳಿಯಬೇಕಿದೆ. ಸದ್ಯ ಹರ್ಷ ಸಾಯಿ ಪ್ರಕರಣ ತೆಲುಗು ರಾಜ್ಯಗಳಲ್ಲಿ ಭಾರಿ ಸಂಚಲನ ಮೂಡಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net