VIDEO| ಆ್ಯಂಕರ್​ ಅನುಶ್ರೀ ಜೀವನ ಬದಲಾಯ್ತು!; ಪಟ ಪಟ ಮಾತಾಡೋ ಹುಡುಗಿ ಭಾವುಕರಾಗಿದ್ದಾರೆ ...

Anushree-Anchor-Img
Published on

ನಿರೂಪಣೆ ಮೂಲಕವೇ ನಾಡಿನ ಮನೆಮಾತಾಗಿರುವ ಅನುಶ್ರೀ ಇದೀಗ ಬದಲಾಗಿದ್ದಾರೆ. ಆ ಬದಲಾವಣೆಗೆ ಕಾರಣ ಕರೊನಾ ಎಂಬುದನ್ನು ಒತ್ತಿ ಒತ್ತಿ ಹೇಳಿದ್ದಾರೆ. ಭಾವುಕವಾಗಿ, ಮನಸ್ಸಿಗೆ ನಾಟುವಂತೆ ಒಂದಷ್ಟು ಮನಮುಟ್ಟೋ ಮಾತುಗಳನ್ನಾಡಿದ್ದಾರೆ. ಹೌದು, ‘ಜೀವನ ಬದಲಾಗಿದೆ’ ಎಂಬ ಕಿರು ಹಾಡಿನ ತುಣುಕನ್ನು ಯೂಟ್ಯೂಬ್​ನಲ್ಲಿ ಹಂಚಿಕೊಂಡಿರುವ ಅವರು, ಕರೊನಾದಿಂದ ಏನೆಲ್ಲ ಆಯಿತು ಎಂಬುದನ್ನು 3.43 ನಿಮಿಷದ ಅವಧಿಯಲ್ಲಿ ಹೇಳುವ ಪ್ರಯತ್ನ ಮಾಡಿದ್ದಾರೆ.

ಸಮಯಕ್ಕಿಂತ ಸ್ಪೀಡಾಗಿ ಓಡುತ್ತಿದ್ದ ಜನಕ್ಕೆ

ಕಾಲಾನೇ ಕರೊನಾ ಅನ್ನೋ ಫುಲ್​ಸ್ಟಾಪ್​ ಇಟ್ಟಿದೆ..

ದುಡ್ಡಿಂದ ದೇವ್ರನ್ನು ಕೊಂಡುಕೊಳ್ಳಬಹುದು ಅಂತಿದ್ದವರಿಗೆ,

ದುಡ್ಡಿಗಿಂತ ಪ್ರಾಣ ದೊಡ್ಡದು ಅಂತ ತೋರಿಸಿ ಕೊಟ್ಟಿದೆ

ಓಡೋದೆ ಜೀವನ ಅಲ್ಲ ಅಂತ ಗೊತ್ತಾಗಿದೆ..

ಜೀವನ ಈಗ ಬದಲಾಗಿದೆ..

ಹೀಗೆ ಶುರುವಾಗುವ ಸಾಲುಗಳಲ್ಲಿ, ಕರೊನಾ ವಾರಿಯರ್ಸ್​ ಬಗ್ಗೆ, ವೈದ್ಯರ ಬಗ್ಗೆ ಗೀತೆಯಲ್ಲಿ ಮಾತನಾಡಿರುವ ಅನುಶ್ರೀ, ಯೋಧ, ರೈತರನ್ನೂ ಕೊಂಡಾಡಿದ್ದಾರೆ. ಇದು ಮುಂದೆ ಎಲ್ಲಿಗೆ ಬಂದು ನಿಲ್ಲುತ್ತದೆ ಎಂಬುದಕ್ಕೂ ಉತ್ತರಿಸಿದ್ದಾರೆ. ಅಂದಹಾಗೆ, ಗೀತೆಯ ಪರಿಕಲ್ಪನೆ, ನಿರ್ಮಾಣ, ನಿರೂಪಣೆ ಮತ್ತು ನಿರ್ದೇಶನದ ಜವಾಬ್ದಾರಿಯನ್ನು ಅನುಶ್ರೀ ಅವರೇ ಹೊತ್ತಿದ್ದಾರೆ. ನಾಗೇಂದ್ರ ಸಾಹಿತ್ಯ ಬರೆದರೆ, ವಿಜೀತ್​ ಸಂಗೀತ ನೀಡಿದ್ದಾರೆ. ವಾಸುಕಿ ಕಾರ್ಕೊನೆ ಛಾಯಾಗ್ರಹಣ ಮಾಡಿದರೆ, ನಿರಂಜನ್​ ಸಂಕಲನವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net