

‘ಮಾಣಿಕ್ಯ’ ಚಿತ್ರದಲ್ಲಿ ಅಪ್ಪ ಮಗನಾಗಿ, ‘ಹೆಬ್ಬುಲಿ’ ಸಿನಿಮಾದಲ್ಲಿ ಅಣ್ಣ ತಮ್ಮನಾಗಿ ಕಾಣಿಸಿಕೊಂಡಿದ್ದ ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತು ಕಿಚ್ಚ ಸುದೀಪ್, ನಿಜ ಜೀವನದಲ್ಲೂ ಹಾಗೇ ಇದ್ದಾರೆ. ಅದರಲ್ಲೂ ರವಿಚಂದ್ರನ್ ಅಂದರೆ ಕಿಚ್ಚ ಸುದೀಪ್ಗೆ ಅದೆನೋ ಗೌರವ, ಪ್ರೀತಿ. ತೆರೆಮೇಲೆ ಕಾಣಿಸಿಕೊಳ್ಳುವ ಆತ್ಮೀಯತೆ ತೆರೆಹಿಂದೆ ಅದರ ಹತ್ತು ಪಟ್ಟಿದೆ. ಅಂಥ ಅಣ್ಣನನ್ನು ಜನ್ಮ ದಿನದ ಪ್ರಯುಕ್ತ ನೆನಪು ಮಾಡಿಕೊಂಡಿದ್ದಾರೆ ಸುದೀಪ್.
ನೀವೇ ನನ್ನ ಸ್ಫೂರ್ತಿ ಎನ್ನುವ ಮೂಲಕ ಟ್ವಿಟರ್ನಲ್ಲಿ ಸಂದೇಶ ರವಾನಿಸಿರುವ ಸುದೀಪ್, ‘ನಿಮ್ಮೊಂದಿಗೆ ಸಿನಿಮಾ ಕ್ಷೇತ್ರದಲ್ಲಿರುವುದೇ ಹೆಮ್ಮೆಯ ಸಂಗತಿ. ಕನ್ನಡ ಸಿನಿಮಾರಂಗಕ್ಕೆ ನೀವು ನೀಡಿರುವ ಕೊಡುಗೆಯನ್ನು ಕಣ್ಣಾರೆ ಕಂಡಿರುವುದು ನನ್ನ ಸೌಭಾಗ್ಯ. ಈವರೆಗೂ ಮತ್ತು ಇನ್ನು ಮುಂದೆಯೂ ನೀವು ನನ್ನ ಸ್ಫೂರ್ತಿಯೇ. ಆರೋಗ್ಯ, ಸಂತೋಷ ನಿಮ್ಮದಾಗಿರಲಿ ಎಂದು ಆಶಿಸುತ್ತೇನೆ’ ಎಂದಿದ್ದಾರೆ ಸುದೀಪ್.
ಇದನ್ನೂ ಓದಿ: ಇಂದು ರವಿಚಂದ್ರನ್ ಅವರ ಹುಟ್ಟುಹಬ್ಬ: ಹೊಸ ಚಾಪ್ಟರ್ ಶುರು
ಇದು ಟ್ವಿಟರ್ನಲ್ಲಿನ ಪೋಸ್ಟ್ ಆದರೆ, ಇನ್ಸ್ಟಾಗ್ರಾಂನಲ್ಲಿ ಮಾಣಿಕ್ಯ ಚಿತ್ರದ ‘ಜೀವ ಜೀವ ನಂಜೀವ ಕಣೋ ಇವನು..‘ ಹಾಡನ್ನು ಶೇರ್ ಮಾಡಿಕೊಂಡು ಅಣ್ಣನಿಗೆ ಜನ್ಮದಿನದ ಶುಭಾಶಯ ಕೋರಿದ್ದಾರೆ ಸುದೀಪ್.