

ಬಾಲಿವುಡ್ ನಟ ಅಮಿತಾಭ್ ಬಚ್ಚನ್ಗೆ ಮತ್ತು ಅವರ ಮಗ ಅಭಿಷೇಕ್ ಬಚ್ಚನ್ಗೆ ಕರೊನಾ ಪಾಸಿಟಿವ್ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರಿಬ್ಬರನ್ನೂ ನಾನಾವತಿ ಆಸ್ಪತ್ರೆಗೆ ದಾಖಲು ಮಾಡಿದ್ದು ಗೊತ್ತೇ ಇದೆ. ಅವರ ಆರೋಗ್ಯ ಸುಧಾರಿಸುತ್ತಿದ್ದು, ಅವರಿಗೆ ತೀವ್ರ ಚಿಕಿತ್ಸೆಯ ಅವಶ್ಯಕತೆ ಇಲ್ಲ ಎಂದು ಆಸ್ಪತ್ರೆಯ ವೈದ್ಯರೇ ಇದೀಗ ತಿಳಿಸಿದ್ದಾರೆ.
ಶನಿವಾರ ರಾತ್ರಿ, ಬಾಲಿವುಡ್ನ ಬಿಗ್ ಬಿ ಅಮಿತಾಭ್ ಬಚ್ಚನ್ಗೆ ಕರೊನಾ ಪಾಸಿಟಿವ್ ಇದೆ ಎಂದು ಸುದ್ದಿಯಾಗಿತ್ತು. ಕೆಲವೇ ಸಮಯದಲ್ಲಿ ಖುದ್ದು ಅಮಿತಾಭ್ ಟ್ವೀಟ್ ಮಾಡುವ ಮೂಲಕ ತಮಗೆ ಕರೊನಾ ಪಾಸಿಟಿವ್ ಇರುವುದು ನಿಜ ಎಂದು ಹೇಳಿದ್ದರು. ಆ ನಂತರ ಅವರ ಮಗ ಅಭಿಷೇಕ್ಗೂ ಕರೊನಾ ಪಾಸಿಟಿವ್ ಎಂದು ಅವರಿಬ್ಬರನ್ನೂ ಮುಂಬೈನ ನಾನಾವತಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಆಸ್ಪತ್ರೆಯಲ್ಲಿ ಅವರಿಬ್ಬರನ್ನೂ ಐಸೋಲೇಶನ್ ವಾಡ್ರ್ನಲ್ಲಿ ದಾಖಲು ಮಾಡಿ, ಕಳೆದೆರೆಡು ದಿನಗಳಿಂದಿ ಚಿಕಿತ್ಸೆ ನೀಡಲಾಗುತ್ತಿದೆ. ಭಾನುವಾದ ಅಮಿತಾಭ್ ಅವರೇ ತಮಗೆ ನೀಡಲಾಗುತ್ತಿರುವ ಚಿಕಿತ್ಸೆಯ ಬಗ್ಗೆ ಖುಷಿ ವ್ಯಕ್ತಪಡಿಸಿದ್ದರು.
ಇಬ್ಬರೂ ಚಿಕಿತ್ಸೆಗೆ ಸ್ಪಂದಿಸುತ್ತಿರುವುದರಿಂದ ಅವರಿಗೆ ತೀವ್ರವಾದ ಚಿಕಿತ್ಸೆಯ ಅವಶ್ಯಕತೆ ಇಲ್ಲ ಎಂದು, ಇದೀಗ ಆಸ್ಪತ್ರೆಯ ಮೂಲಗಳು ತಿಳಿಸಿವೆ. ಸಾಮಾನ್ಯವಾಗಿ ಕರೊನಾ ಪೇಶಂಟ್ಗಳಿಗೆ, ಅವರಿಗೆ ಖಾಯಿಲೆಯ ತೀವ್ರತೆ ನೋಡಿಕೊಂಡು, ಚಿಕಿತ್ಸೆ ನೀಡಲಾಗುತ್ತಿದೆ. ಅಮಿತಾಭ್ ಮತ್ತು ಅಭಿಷೇಕ್ಗೆ ಮೊದಲ ಹಂತದಲ್ಲಿರುವುದರಿಂದ, ತೀವ್ರ ಚಿಕಿತ್ಸೆಯ ಅವಶ್ಯಕತೆ ಇಲ್ಲ, ಅವರಿಗೆ ಕೆಲವು ಬೇಸಿಕ್ ಆದ ಔಷಧಿ ಮತ್ತು ಒಳ್ಳೆಯ ಆಹಾರ ನೀಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಇನ್ನು ಅಭಿಷೇಕ್ ಅವರ ಪತ್ನಿ ಐಶ್ವರ್ಯಾ ರೈ ಮತ್ತು ಮಗಳು ಆರಾಧ್ಯಾ ಸಹ ಕರೊನಾ ಪಾಸಿಟಿವ್ ಆಗಿದ್ದು, ಅವರಿಗೆ ಮನೆಯಲ್ಲೇ ಹೋಂ ಕ್ವಾರಂಟೈನ್ ಮಾಡಿ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ.