'ಮಹಾರಾಜ'ನಾದ ಆಮೀರ್​​ ಖಾನ್​ ಪುತ್ರ ... ಇಂದಿನಿಂದ ಚಿತ್ರೀಕರಣ ಪ್ರಾರಂಭ

Junaid Khan - Final
Published on

ಮುಂಬೈ: ಆಮೀರ್​ ಖಾನ್​ ಮಗ ಜುನೈದ್​ ಖಾನ್​ ಚಿತ್ರರಂಗಕ್ಕೆ ಎಂಟ್ರಿ ಕೊಡಲು ರೆಡಿ ಎಂಬ ಸುದ್ದಿಯೊಂದು ಈ ವರ್ಷದ ಆರಂಭದಲ್ಲೇ ಕೇಳಿಬಂದಿತ್ತು. ಚಿತ್ರಕ್ಕೆ 'ಮಹಾರಾಜ' ಎಂಬ ಹೆಸರನ್ನು ಇಡಲಾಗಿದ್ದು, ಇವತ್ತಿನಿಂದಲೇ ಮುಂಬೈನಲ್ಲಿ ಚಿತ್ರೀಕರಣ ಪ್ರಾರಂಭವಾಗಿದೆಯಂತೆ.

ಹೌದು, ಮಹಾರಾಷ್ಟ್ರದಲ್ಲಿ ಚಿತ್ರೀಕರಣಕ್ಕೆ ಅನುಮತಿ ನೀಡಲಾಗಿದ್ದು, 'ಮಹಾರಾಜ' ಚಿತ್ರದ ಚಿತ್ರೀಕರಣ ಮುಂಬೈನಲ್ಲಿ ಪ್ರಾರಂಭವಾಗಿದೆ. ಈ ಮೂಲಕ, ಲಾಕ್​ಡೌನ್​ ನಂತರ ಚಿತ್ರೀಕರಣ ಪ್ರಾರಂಭವಾದ ಮೊದಲ ಬಾಲಿವುಡ್​ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಮುಂಬೈನ ಮರೋಲ್​ನಲ್ಲಿ ಚಿತ್ರಕ್ಕಾಗಿಯೇ ವಿಶೇಷ ಸೆಟ್​ ನಿರ್ಮಾಣ ಮಾಡಲಾಗಿದ್ದು, ಅಲ್ಲಿ ಚಿತ್ರೀಕರಣ ಪ್ರಾರಂಭವಾಗಿದೆ. ಚಿತ್ರತಂಡದ ಸುಮಾರು 150 ಮಂದಿ ಇತ್ತೀಚೆಗೆ ಕರೊನಾ ಟೆಸ್ಟ್​ ಮಾಡಿಸಿಕೊಂಡು, ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ. ಯಾರಿಗೂ ಏನೂ ಆಗದಂತೆ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡು ಚಿತ್ರೀಕರಣ ಮಾಡಲಾಗುತ್ತಿದೆಯಂತೆ.

1862ರಲ್ಲಿ ನಡೆದ ಒಂದು ನೈಜ ಘಟನೆಯನ್ನಾಧರಿಸಿ ಈ ಚಿತ್ರ ಮಾಡಲಾಗುತ್ತಿದೆಯಂತೆ. ಜುನೈದ್​ ಈ ಚಿತ್ರದಲ್ಲಿ ಪತ್ರಕರ್ತ ಕರ್ಸನ್​ದಾಸ್​​ ಮುಲ್ಜಿ ಪಾತ್ರ ಮಾಡುತ್ತಿದ್ದು, 'ಅರ್ಜುನ್​ ರೆಡ್ಡಿ' ನಾಯಕಿ ಶಾಲಿನಿ ಪಾಂಡೆ, ಜೈದೀಪ್​ ಅಹ್ಲುವಾಲಿಯಾ ಸೇರಿದಂತೆ ಹಲವರು ನಟಿಸುತ್ತಿದ್ದಾರೆ. ಯಶ್​ರಾಜ್​ ಫಿಲಂಸ್​ ನಿರ್ಮಾಣದ ಈ ಚಿತ್ರವನ್ನು ಸಿದ್ಧಾರ್ಥ್​ ಮಲ್ಹೋತ್ರಾ ನಿರ್ದೇಶನ ಮಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net