ಬ್ಲಾಕ್​ ಬಸ್ಟರ್ ಅಮರನ್​ ಚಿತ್ರದ OTT ರಿಲೀಸ್​ ಡೇಟ್​ ಫಿಕ್ಸ್​! ಕಿರುಪರದೆಯಲ್ಲಿ ಕಣ್ತುಂಬಿಕೊಳ್ಳಿ ಅಮರ ಪ್ರೇಮಕಥೆ | Amaran

Amaran
Published on

Amaran : ಕಾಲಿವುಡ್​ ಸೂಪರ್​ಸ್ಟಾರ್​ ಶಿವಕಾರ್ತಿಕೇಯನ್​ ಹಾಗೂ ಸರಳ ಸುಂದರಿ ಸಾಯಿ ಪಲ್ಲವಿ ನಟನೆಯ ಅಮರನ್​ ಸಿನಿಮಾ ಬಾಕ್ಸ್​ಆಫೀಸ್​ನಲ್ಲಿ ಧೂಳೆಬ್ಬಿಸಿದೆ. ಕಡಿಮೆ ಬಜೆಟ್​ನಲ್ಲಿ ತಯಾರಾದ ಈ ಸಿನಿಮಾ ಇಂದು 300 ಕೋಟಿ ರೂ.ಗೂ ಅಧಿಕ ಕಲೆಕ್ಷನ್​ ಮಾಡಿ ತಮಿಳು ಚಿತ್ರರಂಗದಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸಿದೆ. ಈಗಲೂ ಚಿತ್ರಮಂದಿರಗಳಲ್ಲಿ ಈ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ.

ಇನ್ನು ಸಿನಿಮಾ ನೋಡದವರು ಯಾವಾಗ ಒಟಿಟಿಯಲ್ಲಿ ಬಿಡುಗಡೆಯಾಗುತ್ತದೆ ಎಂದು ಕಾಯುತ್ತಿದ್ದಾರೆ. ಅವರಿಗೀಗ ಸಿಹಿ ಸುದ್ದಿ ಸಿಕ್ಕಿದೆ. ಅಮರನ್​ ಚಿತ್ರದ ಒಟಿಟಿ ರಿಲೀಸ್​ ಡೇಟ್​ ಫಿಕ್ಸ್​ ಆಗಿದೆ. ಅಮರನ್​ ಸಿನಿಮಾವನ್ನು ನೆಟ್​ಫ್ಲಿಕ್ಸ್​ ಒಟಿಟಿ ಸಂಸ್ಥೆ ಭಾರಿ ಮೊತ್ತಕ್ಕೆ ಖರೀದಿ ಮಾಡಿದೆ. ಇದೇ ಡಿಸೆಂಬರ್​ 5ರಂದು ತಮಿಳು, ಕನ್ನಡ, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಬಿಡುಗಡೆಯಾಗಲಿದೆ.

ಅಂದಹಾಗೆ ಅಮರನ್​ ಸಿನಿಮಾ ಅಕ್ಟೋಬರ್​ 14ರಂದು ಬಿಡುಗಡೆಯಾಯಿತು. ಇಂದಿಗೂ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಒಟಿಟಿಯಲ್ಲಿ ಬಿಡುಗಡೆಯಾದರು ಕೂಡ ಥಿಯೇಟರ್​ನಲ್ಲಿ 50 ದಿನ ಪೂರೈಸಲಿದೆ. ಈ ಸಿನಿಮಾ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದ್ದು, ಬಾಕ್ಸ್​ಆಫೀಸ್​ನಲ್ಲಿ ಸಖತ್ ಸದ್ದು ಮಾಡಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ 44ನೇ ರಾಷ್ಟ್ರೀಯ ರೈಫಲ್ಸ್ ಬೆಟಾಲಿಯನ್‌ಗೆ ನಿಯೋಜನೆಗೊಂಡಾಗ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ ವೇಳೆ ತಮ್ಮ ಶೌರ್ಯಕ್ಕಾಗಿ ಮರಣೋತ್ತರ ಅಶೋಕ ಚಕ್ರವನ್ನು ಪಡೆದ ಮೇಜರ್ ಮುಕುಂದ್ ವರದರಾಜನ್ ಅವರ ನೈಜ-ಜೀವನದ ಕಥೆ ಇದಾಗಿದೆ. ರಾಜ್​ಕುಮಾರ್​ ಪೆರಿಸ್ವಾಮಿ ನಿರ್ದೇಶಿಸಿದ್ದು, ಕಮಲ್​ ಹಾಸನ್ ಅವರ ರಾಜ್ ಕಮಲ್ ಫಿಲ್ಮ್ಸ್ ಸಂಸ್ಥೆ ಬಂಡವಾಳ ಹೂಡಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net