

ಮುಂಬೈ: ನಟಿ ಅಮಲಾ ಪೌಲ್ ದಕ್ಷಿಣದ ನಾಲ್ಕೂ ಭಾಷೆಯ ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ಸುದೀಪ್ ಜತೆಗೆ 'ಹೆಬ್ಬುಲಿ'ಯಲ್ಲಿ ನಟಿಸಿರುವ ಅವರು, ಇಷ್ಟು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಬಾಲಿವುಡ್ಗೆ ಹಾರಿದ್ದಾರೆ. ಬಾಲಿವುಡ್ನ ಚಿತ್ರವೊಂದರಲ್ಲಿ ಅವರು ಅತಿಥಿ ಪಾತ್ರವಾದರೂ, ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ತಮಿಳಿನ 'ಕೈದಿ' ಚಿತ್ರವನ್ನು ಹಿಂದಿಯಲ್ಲಿ 'ಭೋಲಾ' ಎಂಬ ಹೆಸರಿನಲ್ಲಿ ಚಿತ್ರ ನಿರ್ದೇಶಿಸುತ್ತಿರುವುದು ಗೊತ್ತಿರಬಹುದು. ಈ ಚಿತ್ರವನ್ನು ಅವರು ನಿರ್ದೇಶಿಸುತ್ತಿರುವುದಷ್ಟೇ ಅಲ್ಲ, ಚಿತ್ರದ ನಾಯಕನೂ ಅವರೇ. ಈಗ ಈ ಚಿತ್ರದ ಒಂದು ಪಾತ್ರಕ್ಕೆ ಅಮಲಾ ಅವರನ್ನು ಆಯ್ಕೆ ಮಾಡಿದ್ದಾರಂತೆ ಅಜಯ್.
ಈ ಕುರಿತು ಅವರಾಗಲೀ, ಚಿತ್ರತಂಡದವರಾಗಲೀ ಎಲ್ಲೂ ಬಾಯಿ ಬಿಟ್ಟಿಲ್ಲ. ಆದರೆ, ಬಾಲಿವುಡ್ನಲ್ಲಿ ಕೇಳಿ ಬರುತ್ತಿರುವ ಸುದ್ದಿ ಏನೆಂದರೆ, ಈ ಚಿತ್ರದಲ್ಲೊಂದು ಅತಿಥಿ ಪಾತ್ರಕ್ಕೆ ಅಮಲಾ ಪೌಲ್ ಆಯ್ಕೆಯಾಗಿದ್ದಾರಂತೆ. ಡಿಸೆಂಬರ್ನಲ್ಲಿ ಮುಂಬೈನಲ್ಲಿ ಚಿತ್ರೀಕರಣ ನಡೆಯಲಿದ್ದು, ಈ ಹಂತದ ಚಿತ್ರೀಕರಣದಲ್ಲಿ ಅವರು ಭಾಗವಹಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಸದ್ಯ 'ಟೀಚರ್', 'ಕ್ರಿಸ್ಟೋಫರ್', 'ದ್ವಿಜ' ಮುಂತಾದ ಮಲಯಾಳಂ ಚಿತ್ರಗಳಲ್ಲಿ ನಟಿಸುತ್ತಿರುವ ಅಮಲಾ, ಈ ಚಿತ್ರಗಳನ್ನು ಮುಗಿಸಿ 'ಭೋಲಾ' ಚಿತ್ರದಲ್ಲಿ ನಟಿಸುವುದಕ್ಕೆ ಮುಂಬೈಗೆ ತೆರಳಿದ್ದಾರೆ.