

ಕೆಲ ದಿನಗಳಿಂದ ಕತ್ರಿನಾ ಕೈಫ್, ವರುಣ್ ಧವನ್, ಜಾಕ್‌ಲೀನ್ ರ್ನಾಂಡಿಸ್, ಕಿಯಾರಾ ಅಡ್ವಾನಿ ಸೇರಿ ಬಾಲಿವುಡ್‌ನ ಹಲವು ತಾರೆಯರು ಸಾಮಾಜಿಕ ಜಾಲತಾಣದಲ್ಲಿ ‘್ಯಾರಿ’ ಎಂದು ಪೋಸ್ಟ್ ಹಾಕುತ್ತಿದ್ದಾರೆ. ಇದನ್ನು ನೋಡಿ ಅಭಿಮಾನಿಗಳಲ್ಲಿ ಏನಿದು ‘ಫ್ಯಾರಿ’ ಎಂಬ ಕುತೂಹಲ ಮೂಡಿತ್ತು. ಇದೀಗ ಆ ಪ್ರಶ್ನೆಗೆ ಉತ್ತರ ಸಿಕ್ಕಿದೆ.
ಸಲ್ಮಾನ್ ಖಾನ್ ಸಹೋದರಿ ಅಲ್ವೀರಾ ಖಾನ್ ಹಾಗೂ ಅತುಲ್ ಅಗ್ನಿಹೋತ್ರಿ ಪುತ್ರಿ ಅಲಿಜೇ ಅಗ್ನಿಹೋತ್ರಿ ಹೊಸ ಸಿನಿಮಾದ ಶೀರ್ಷಿಕೆ ‘್ಯಾರಿ’. ಇದರ ಶೀರ್ಷಿಕೆಯನ್ನು ಸಲ್ಮಾನ್ ಖಾನ್ ಅನಾವರಣ ಮಾಡಿದ್ದಾರೆ. ಈ ಸಿನಿಮಾ ಅಲಿಜೇ ಅವರ ಬಾಲಿವುಡ್ ಡೆಬ್ಯೂ ಸಿನಿಮಾ ಆಗಬಹುದೇ? ಎನ್ನುವ ಪ್ರಶ್ನೆಯಿದೆ. ಏಕೆಂದರೆ ಈಗಾಗಲೇ ಸೌಮೇಂದ್ರ ಪಾಧಿ ನಿರ್ದೇಶನದ ‘ಬುಧಿಯಾ ಸಿಂಗ್: ಬಾರ್ನ್ ಟು ರನ್’ ಸಿನಿಮಾದಲ್ಲಿ ಅಲಿಜೇ ನಟಿಸುತ್ತಿರುವುದಾಗಿ ಹೇಳಲಾಗಿತ್ತು.
ಈಗ ‘್ಯಾರಿ’ ೋಷಣೆ ಆಗಿದ್ದರಿಂದ ಇದು ಮೊದಲು ತೆರೆಕಾಣುವ ಸಾಧ್ಯತೆಯಿದೆಯಂತೆ. ಹೀಗಾಗಿ ‘್ಯಾರಿ’ ಅಲಿಜೇ ಡೆಬ್ಯೂ ಸಿನಿಮಾ ಆಗಲಿದೆ ಎನ್ನಲಾಗಿದೆ.
-ಏಜೆನ್ಸೀಸ್