ಕ್ಯಾಬ್ ಚಾಲಕನ ಜತೆ ಪುನರ್ ವಿವಾಹ ಖ್ಯಾತಿಯ ಪದ್ಮಿನಿಯಿಂದ ಕಿರಿಕ್ ; ಹಣ ಕೊಡದೆ ಹೋದ ನಟಿ

serial actress
Published on

ಬೆಂಗಳೂರು: ಖಾಸಗಿವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಪುನರ್ ವಿವಾಹ ಸೀರಿಯಲ್​​ ಖ್ಯಾತಿಯ ಪದ್ಮಿನಿ ಕ್ಯಾಬ್ ಚಾಲಕನ ಜತೆ ಕಿರಿಕ್ ಮಾಡಿಕೊಂಡಿದ್ದು, ಹಣ ಪಾವತಿಸದೇ ಕಾಲ್ಕಿತ್ತ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಮಲ್ಲೇಶ್ವರಂನ ಮಾರ್ಗೋಸ ರಸ್ತೆಯಿಂದ ಬನಶಂಕರಿಗೆ ಕ್ಯಾಬ್ ಬುಕ್ ಮಾಡಿದ್ದ ಪದ್ಮಿನಿ, ಮಲ್ಲೇಶ್ವರಂನಿಂದ ಬನಶಂಕರಿ ಬಳಿ ಹೋಗಿ ಚಾಲಕ ಕುಲ್ದೀಪ್ ಬಳಿ ಕ್ಷುಲ್ಲಕ‌ ಕಾರಣಕ್ಕೆ ನಟಿ ಕಿರಿಕ್ ಮಾಡಿಕೊಂಡಿದ್ದಾರೆ. 437 ರೂಪಾಯಿ ಕ್ಯಾಬ್ ಚಾರ್ಜ್ ಆಗಿತ್ತು. ಕ್ಯಾಬ್​​ ಚಾರ್ಜ್ ಕೊಡದೇ ಇಳಿದು ಬೇರೆ ಆಟೋ ಹತ್ಕೊಂಡು ಹೋಗಿದ್ದಾರೆ. ಅಲ್ಲದೇ ದುರ್ನಡತೆ ಆರೋಪದ ಮೇಲೆ ಓಲಾದವರು ತಾತ್ಕಲಿಕವಾಗಿ ಅವರ ಕರ್ತವ್ಯಕ್ಕೆ ನಿರ್ಬಂಧ ಹಾಕಿದ್ದಾರೆ.

ಆಟೋ ಇಳಿದು ಹೋದ ಪದ್ಮಿನಿ ಅವರು 437 ರೂಪಾಯಿ ಕೊಡದೆ ಮೋಸ ಮಾಡಿದ್ದಾರೆ. ಆಟೋ ಚಾರ್ಜ್ ಕೊಡದೇ ಅರ್ಧ ದಾರಿಯಲ್ಲಿ ಇಳಿದು ಹೋಗಿದ್ದ ಪದ್ಮಿನಿ ಅವರ ವಿರುದ್ಧ ಆಟೋ ಡ್ರೈವರ್ ಸಿಟ್ಟಾಗಿದ್ದಾರೆ.  ಕಿರುತರೆ ನಟಿ ಕಿರಿಕ್ ವಿಚಾರ ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದು, ಪದ್ಮಿಯಿಂದ ಆದ ಅನ್ಯಾಯದ ವಿರುದ್ಧ ದೂರು ಕೊಡಲು ಚಾಲಕ ಕುಲ್ದೀಪ್ ಮುಂದಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net