ಟ್ರೋಲ್​​ ಆಯ್ತು ಆಲಿಯಾ ಭಟ್​ ಬಟ್ಟೆ: ಈ "ವರ್ಷದ ಕಳಪೆ ಫ್ಯಾಷನ್"​ ಅಂದ್ರು ನೆಟ್ಟಿಗರು

Alia Bhatt
Published on

ಮುಂಬೈ: ಫ್ಯಾಷನ್​ ಎಂದರೆ ಮತ್ತೊಂದು ಹೆಸರೇ ಸಿನಿಮಾ ಜಗತ್ತು. ಇಲ್ಲಿ ಧರಿಸುವ ಉಡುಗೆ ತೊಡುಗೆಗಳೆಲ್ಲವೂ ಫ್ಯಾಷನ್. ಇದೇ  ಒಮ್ಮೊಮ್ಮೆ ಅತಿರೇಕಕ್ಕೇ ಹೋಗುವುದು ಉಂಟು.

ಬಾಲಿವುಡ್​ ನಟಿಯರು ಧರಿಸುವ ಬಟ್ಟೆಗಳು ಕೆಲವೊಮ್ಮೆ ಪ್ರಶಂಸೆಗೆ ಪಾತ್ರವಾದರೆ. ಮತ್ತೊಮ್ಮೆ ಟೀಕೆಗೆ ಗುರಿಯಾಗುತ್ತಲೇ ಇರುತ್ತವೆ. ಇಂತಹ ಸಾಲಿನಲ್ಲಿ ಇತ್ತೀಚೆಗೆ ಹಸೆಮಣೆಯೇರಿದ ನಟಿ ಆಲಿಯಾ ಭಟ್​​ ಕೂಡ ಸೇರಿದ್ದಾರೆ.ರಣಬೀರ್​ ಕಪೂರ್​ ಜತೆ ವಿವಾಹ ಮಾಡಿಕೊಂಡ ಕೆಲವೇ ದಿನದಲ್ಲಿ ಆಲಿಯಾ ಭಟ್​ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದು, ಅವರ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಇದಕ್ಕೆ ಕಾರಣ ಏನಂತೀರಾ... ಅದೇ ಆಲಿಯಾ ಭಟ್​ ಧರಿಸಿರುವ ಬಟ್ಟೆ. ಸಹಜವಾಗಿ ಅಭಿಮಾನಿ ಬಳಗವನ್ನು ಹೆಚ್ಚು ಹೊಂದಿರುವ ನಟಿ ಆಲಿಯಾಭಟ್​​ ಹೊರಬಂದಲ್ಲೆಲ್ಲಾ ಅವರನ್ನು ವೀಕ್ಷಿಸುವವರ ಸಂಖ್ಯೆಯೂ ಹೆಚ್ಚಿದೆ. ಈ ಬಾರಿ ಅವರು ಧರಿಸಿರುವ ಉಡುಗೆಯಿಂದ ಭಾರೀಟ್ರೋಲ್​ ಆಗಿದ್ದಾರೆ.

ಆದಿತ್ಯ ಸೀಲ್​ ಮತ್ತು ಅನುಷ್ಕಾ ರಂಜನ್​ ಸಂಗೀತ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಂದಿದ್ದ ಆಲಿಯಾ ಭಟ್​ ಹಸಿರು ಲೆಹೆಂಗಾ ಧರಿಸಿದ್ದರು. ಆದರೆ ಮೇಲುಡುಪಿನಿಂದಾಗಿ ಭಾರೀ ಟೀಕೆಯನ್ನೇ ಎದುರಿಸುವಂತಾಗಿದೆ.

ಓರ್ವ ಟ್ವಿಟಿಗ ಇದು ಈ ವರ್ಷದ ಕಳಪೆ ಫ್ಯಾಷನ್​ ಎಂದು ಹೇಳಿದ್ದು, ಸ್ವಲ್ಪವೂ ಚೆನ್ನಾಗಿಲ್ಲ, ನೀವು ಸಂಪ್ರದಾಯದಂತೆ ಬಟ್ಟೆ ಧರಿಸಬೇಕಿತ್ತು ಎಂಬೆಲ್ಲಾ ಕಾಮೆಂಟ್​ ನೀಡಿದ್ದಾರೆ. ಮತ್ತೋರ್ವ ಟ್ವಿಟ್ಟಿಗ ಮತ್ತೋರ್ವ ಊರ್ಫಿ ಜಾವೆದ್​ ಎಂದು ಹೇಳಿದ್ದು, ಆಕೆಯನ್ನೇ ನಕಲು ಮಾಡಿದ್ದಾರೆ ಎಂದಿದ್ದಾರೆ.

ಇನ್ನು ಈ ಸಮಾರಂಭದಲ್ಲಿ ಅಲಿಗೊನಿ, ರವೀನಾ ಟಂಡನ್​, ಭಾಗ್ಯ ಶ್ರೀ, ಭೂಮಿ ಪಡ್ನೇಕರ್​, ಅನು ಮಲ್ಲಿಕ್​ ಸೇರಿದಂತೆ ಹಲವು ಬಾಲಿವುಡ್​ ಖ್ಯಾತನಾಮರು ಪಾಲ್ಗೊಂಡಿದ್ದರು.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net