More

    19ನೇ ಶತಮಾನದಲ್ಲಿ ಕಳ್ಳತನವಾದ ಭಾರತದ ರಾಜನ ವಜ್ರದ ನೆಕ್ಲೆಸ್​ ಧರಿಸಿ ವಿವಾದಕ್ಕೀಡಾದ ಹಾಲಿವುಡ್​​ ಯೂ ಟ್ಯೂಬ್​ ಸ್ಟಾರ್​!

    ನ್ಯೂಯಾರ್ಕ್​: ಒಂದು ಕಾಲದಲ್ಲಿ ಭಾರತ ಅತಿ ಹೆಚ್ಚು ಸಂಪದ್ಭರಿತ ರಾಷ್ಟ್ರವಾಗಿತ್ತು. ಇಲ್ಲಿ ಯಾವುದಕ್ಕೂ ಕೊರತೆ ಇರಲಿಲ್ಲ. ಬ್ರಿಟೀಷರ ಆಡಳಿತದಿಂದ ಇಲ್ಲಿನ ಸಂಪತ್ತೆಲ್ಲಾ ಮಾಯವಾಗಿದ್ದು ಈಗ ಇತಿಹಾಸ.

    ಆದರೂ ನಮ್ಮ ದೇಶದಲ್ಲಿ ರಾಜರ ಆಳ್ವಿಕೆಯ ಕಾಲದಲ್ಲಿ ಅವರು ಧರಿಸುತ್ತಿದ್ದ ಆಭರಣಗಳು ಇಂದಿಗೂ ಕಾಣ ಸಿಗುತ್ತವೆ. ಅತಿ ಬೆಲೆ ಬಾಳುವ ವಜ್ರಾಭರಣಗಳು ಬೇರೆ ರಾಷ್ಟ್ರಗಳಲ್ಲೂ ಕಾಣಬಹುದು. ಇಂತಹದ್ದೇ ಘಟನೆಯೊಂದು  ಈಗ ನಡೆದಿದೆ.

    ಹಾಲಿವುಡ್​ ಯೂಟ್ಯೂಬ್​ ಸ್ಟಾರ್​ಗೂ ಭಾರತೀಯ ರಾಜನಿಗೂ ಏನು ಸಂಬಂಧ ಎನ್ನಬಹುದು, ಹೌದು ಖಂಡಿತವಾಗಿಯೂ ಇದೆ. ಇತ್ತೀಚೆಗೆ ಮೆಟ್​ ಗಾಲಾದಲ್ಲಿ ಅಮೆರಿಕ ಖ್ಯಾತ ಯೂಟ್ಯೂಬ್​ ಸ್ಟಾರ್ ಎಮ್ಮಾ ಚೆಂಬರ್ಲೆನ್​ ಭಾರೀ ವಿಶೇಷ ಗಮನ ಸೆಳೆದಿದ್ದರು. ಇದಕ್ಕೆ ಕಾರಣ ಅವರು ಧರಿಸಿದ್ದ ನೆಕ್ಲೆಸ್​​​. ಹೌದು ಪ್ರಪಂಚದ ವಿಶಿಷ್ಟ ಉಡುಗೆ ತೊಟ್ಟು ಪ್ರದರ್ಶನಗೊಳ್ಳುವ ಅತಿ ಜನಪ್ರಿಯ ಮೆಟ್​ ಗಾಲಾ ಪ್ರದರ್ಶನದಲ್ಲಿ ಈ ಬಾರಿ ಭಾರತೀಯರನ್ನೇ ಹುಬ್ಬೇರಿಸುವಂತೆ ಮಾಡಿದೆ.

    ಅಲ್ಲದೇ ಭಾರತೀಯರಲ್ಲಿ ಕೆಂಗಣ್ಣಿಗೆ ಗುರಿಯಾಗಿರುವುದು ಈ ಯೂಟ್ಯೂಬ್​ ಸ್ಟಾರ್​ ಧರಿಸಿದ್ದ ನೆಕ್ಲೆಸ್​. ಇದು ಅಂತಿಂತಹ ನೆಕ್ಲೆಸ್​​ ಅಲ್ಲ. ಪಟಿಯಾಲ ರಾಜ ಧರಿಸಿದ್ದ ನೆಕ್ಲೆಸ್​​​ ಈ ಯೂಟ್ಯೂಬರ್​ ಬಳಿ ಹೋಗಲುನ ಹೇಗೆ ಸಾಧ್ಯ ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿದೆ.

    1928ರಲ್ಲಿ ಪಟಿಯಾಲ ಮಹಾರಾಜ ಭೂಪಿಂದರ್​ ಸಿಂಗ್​ ಇದನ್ನು ಧರಿಸಿದ್ದರು. ಆನಂತರ 1948ರಲ್ಲಿ ಅವರ ಪುತ್ರ ರಾಜ ಯದವಿಂದ್ರ ಸಿಂಗ್​ ಧರಿಸಿದ್ದರು. ಇದಾದ ಬಳಿಕ ಈ ನೆಕ್ಲೆಸ್​​​ ಕಳ್ಳತನವಾಗಿತ್ತು. ಆದರೀಗ ಮತ್ತೆ ಈ ನೆಕ್ಲೆಸ್​  ಈ ಯೂಟ್ಯೂಬ್​ ಸ್ಟಾರ್​ ಕುತ್ತಿಗೆಯಲ್ಲಿ ಪ್ರತ್ಯಕ್ಷವಾಗಿದೆ.

    ಈ ಬಾರಿಯ ಮೆಟ್​ ಗಾಲಾದಲ್ಲಿ ಎಮ್ಮಾ ಚಂಬೆರ್ಲಿನ್​ ಅವರು ಇದನ್ನು ಧರಿಸಿ ಪಾಲ್ಗೊಂಡು ಭಾರೀ ಗಮನ ಸೆಳೆದಿದ್ದರು. ಅದುವೇ ಈಗ ವಿವಾದಕ್ಕೀಡಾಗಿದೆ. ರಾಜ ಭೂಪಿಂದರ್​ ಸಿಂಗ್​ ಧರಿಸಿದ ಚಿತ್ರ ಹಾಗೂ ಈ ಯೂಟ್ಯೂಬ್​ ಸ್ಟಾರ್​ ಧರಿಸಿರುವ ಚಿತ್ರವನ್ನು ಹೋಲಿಕೆ ಮಾಡಿ ಭಾರತೀಯರು ನಟಿಯ ವಿರುದ್ಧ ಕೋಪ ಹೊರಹಾಕುತ್ತಿದ್ದಾರೆ. (ಏಜೆನ್ಸೀಸ್​)

    ಹೊತ್ತಿ ಉರೀತಿದೆ ಶ್ರೀಲಂಕಾ, ತುತ್ತು ಅನ್ನಕ್ಕೂ ಪರದಾಟ: ಸುಟ್ಟು ಕರಕಲಾಯ್ತು ಪ್ರಧಾನಿ ಮನೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts