More

    ಹೊತ್ತಿ ಉರೀತಿದೆ ಶ್ರೀಲಂಕಾ, ತುತ್ತು ಅನ್ನಕ್ಕೂ ಪರದಾಟ: ಸುಟ್ಟು ಕರಕಲಾಯ್ತು ಪ್ರಧಾನಿ ಮನೆ!

    ಕೊಲಂಬೊ: ಜನರಿಗೆ ಉಚಿತ ಕೊಡುಗೆ ಸೇರಿದಂತೆ ಸಮರ್ಥವಾಗಿ ದೇಶದ ಆರ್ಥಿಕ ಸ್ಥಿತಿಯನ್ನು ನಿಭಾಯಿಸಲಾಗದೇ ಜನರು ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿ ಶ್ರೀಲಂಕಾದಲ್ಲಿ ನಿರ್ಮಾಣವಾಗಿ ತಿಂಗಳುಗಳೇ ಕಳೆದಿವೆ. ಆದರೆ ಇದುವರೆಗೆ ಪರಿಸ್ಥಿತಿ ಸುಧಾರಿಸಿಲ್ಲ.

    ಆರ್ಥಿಕ ಬಿಕ್ಕಟ್ಟಿನ ಜತೆಗೆ ರಾಜಕೀಯ ಬಿಕ್ಕಟ್ಟೂ ತಲೆದೋರಿರುವ ಕಾರಣ, ಜನರು ತಾಳ್ಮೆ ಕಳೆದುಕೊಳ್ಳುತ್ತಿದ್ದಾರೆ. ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿದ್ದು, ಇದು ಹಿಂಸಾಚಾರ ಸ್ವರೂಪ ಪಡೆದಿದೆ. ಪ್ರತಿಭಟನಾಕಾರರು ಕಂಡ ಕಂಡ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಇದೀಗ ಖುದ್ದು ಪ್ರಧಾನಿ ನಿವಾಸವನ್ನೇ ಸುಟ್ಟು ಕರಕಲು ಮಾಡಿದ್ದಾರೆ! ಪ್ರಧಾನಿಯಾಗಿದ್ದ ಮಹಿಂದ ರಾಜಪಕ್ಸ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರೂ ಜನರಿಗೆ ಆಕ್ರೋಶ ತಣ್ಣಗಾಗಲಿಲ್ಲ. ಪ್ರಧಾನಿ ನಿವಾಸಕ್ಕೆ ಬೆಂಕಿ ಹಚ್ಚಿದ್ದು, ಅದು ಸಂಪೂರ್ಣ ಸುಟ್ಟು ಭಸ್ಮವಾಗಿದೆ.

    ಇದಾಗಲೇ ಗಲಾಟೆಯಲ್ಲಿ ಆಡಳಿತಾರೂಢ ಪಕ್ಷದ ಸಂಸದ ಮೃತಪಟ್ಟಿದ್ದರು. ಬಳಿಕ ಪ್ರತಿಭಟನೆ ಮಾಡಿದ್ದ ಪ್ರತಿಭಟನಾಕಾರರು, ಇಡೀ ರಾಜಪಕ್ಸ ಕುಟುಂಬ ರಾಜಕೀಯ ತ್ಯಜಿಸಬೇಕು ಮತ್ತು ದೇಶದಿಂದ ಲೂಟಿ ಮಾಡಿರುವ ಆಸ್ತಿಯನ್ನು ಹಿಂದಿರುಗಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು. ಬೌದ್ಧ ಬಿಕ್ಕುಗಳು ಕೂಡ ಮಧ್ಯಂತರ ಸರ್ಕಾರ ರಚನೆಗೆ ಹಾದಿ ಮಾಡಿಕೊಡಬೇಕೆಂದು ರಾಜಪಕ್ಸ ಸೋದರರಿಗೆ ಆಗ್ರಹಿಸಿದ್ದು, ಅದಕ್ಕಾಗಿ ರಾಜೀನಾಮೆ ನೀಡುವಂತೆ ಒತ್ತಾಯಿಸಿದ್ದರು.

    ಘಟನೆಯ ನಂತರ ಪ್ರಧಾನಿ ರಾಜೀನಾಮೆ ನೀಡಿದ್ದರು. ಇದಾದ ಕೆಲವೇ ಗಂಟೆಗಳಲ್ಲಿ ನಿವಾಸಕ್ಕೆ ಬೆಂಕಿ ಹಚ್ಚಲಾಗಿದೆ. ಪ್ರಧಾನ ಮಂತ್ರಿಯ ಅಧಿಕೃತ ನಿವಾಸದ ಒಳಗಿನಿಂದ ಗುಂಡು ಹಾರಿಸಲಾಯಿತು, ಸಾವಿರಾರು ಪ್ರತಿಭಟನಾಕಾರರು ಮುಖ್ಯ ಗೇಟ್ ಅನ್ನು ಮುರಿದು ನಿಲ್ಲಿಸಿದ ಟ್ರಕ್ ಸುಟ್ಟುಹಾಕಿದರು.

    ಪರೀಕ್ಷಾ ಅಕ್ರಮಗಳಲ್ಲಿ ಭಾಗಿಯಾದವರ ಬುಡಕ್ಕೆ ಬೆಂಕಿ ಇಟ್ಟ ಅನುಭವ: ರೀ ಓಪನ್‌ ಆಯ್ತು ಕೇಸು…

    ರಾತ್ರಿ ಸಾಯ್ತಾನೆ, ಬೆಳಗ್ಗೆ ಬರ್ತಾನೆ… ಬಲಿ ಕೊಟ್ರೂ ಬದಕ್ತಾನೆ! ಚಾಮರಾಜನಗರದಲ್ಲಿ ನಡೀತಿದೆ ಈ ಆಚರಣೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts