‘ಆರ್​ಆರ್​ಆರ್​’ ಚಿತ್ರದ ಸಲುವಾಗಿ ರಾಜಮೌಳಿಗೆ ಆಲಿಯಾ ಮಾಡಿದ್ರು ಪ್ರಮಾಣ!

Aliya
Published on

ಹೈದರಾಬಾದ್​: ರಾಜಮೌಳಿ ಆರ್​ಆರ್​ಆರ್ ಸಿನಿಮಾದಲ್ಲಿ ಆಲಿಯಾ ಭಟ್​ ನಟಿಸಲಿದ್ದಾರೆ ಎಂಬ ಸುದ್ದಿ ಕಳೆದ ವರ್ಷವೇ ಬಹಿರಂಗವಾಗಿತ್ತು. ಅದಾದ ಬಳಿಕ ಇನ್ನೇನು ಶೂಟಿಂಗ್​ನಲ್ಲಿ ಭಾಗವಹಿಸಬೇಕೆನ್ನುವಷ್ಟರಲ್ಲಿಯೇ ಕರೊನಾ ಹಾವಳಿ ಶುರುವಾಗಿ, ಸಿನಿಮಾರಂಗವೇ ಸ್ತಬ್ದವಾಯ್ತು. ಈ ನಡುವೆ ಸುಶಾಂತ್​ ಸಿಂಗ್​ ಮತ್ತು ನೆಪೋಟಿಸಂ ವಿಚಾರವಾಗಿ ಆಲಿಯಾ ವಿರುದ್ಧ ಸಾಕಷ್ಟು ಟೀಕೆಗಳು ಕೇಳಿಬರುತ್ತಿದ್ದಂತೆ, ಸೋಷಿಯಲ್​ ಮೀಡಿಯಾದಿಂದಲೇ ಕೊಂಚ ಕಾಲ ದೂರ ಉಳಿದರು. ಇದೀಗ ಆರೇಳು ತಿಂಗಳ ಬಳಿಕ ಮತ್ತೆ ಶೂಟಿಂಗ್​ ಸೆಟ್​ಗೆ ಬರಲು ಆಲಿಯಾ ಸಿದ್ಧರಾಗಿದ್ದಾರೆ.

ಹಾಗಂತ ಅವರು ಬಾಲಿವುಡ್​ ಸಿನಿಮಾಕ್ಕೆ ಬರುತ್ತಿಲ್ಲ. ಬದಲಿಗೆ ಟಾಲಿವುಡ್​ನ ಆರ್​ಆರ್​ಆರ್​ ಚಿತ್ರದ ಶೂಟಿಂಗ್​ನಲ್ಲಿ ಭಾಗವಹಿಸಲು ಸಿದ್ಧತೆ ಮಾಡಿಕೊಂಡಿದ್ದಾರಂತೆ. ಈಗಾಗಲೇ ನಿರ್ದೇಶಕ ರಾಜಮೌಳಿ ಗಮನಕ್ಕೂ ಈ ವಿಚಾರವನ್ನು ಹೇಳಿಕೊಂಡಿದ್ದು, ಡೇಟ್ಸ್​ ಸಹ ನೀಡಿದ್ದಾರೆ. ಖಂಡಿತ ಪಾಲ್ಗೊಳ್ಳುವೆ ಎಂದಿದ್ದಾರಂತೆ.

ಹೌದು, ಈಗಾಗಲೇ ಹಲವು ಸಿನಿಮಾ ತಂಡಗಳು ಚಿತ್ರೀಕರಣ ಶುರುಮಾಡಿಕೊಂಡಿವೆ. ಆದರೆ, ರಾಜಮೌಳಿ ಮಾತ್ರ ಇನ್ನೂ ಆ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ನವೆಂಬರ್​ನಿಂದಲೇ ಶೂಟಿಂಗ್​ಗೆ ಪ್ಲಾನ್​ ಮಾಡಿದ್ದಾರೆ. ಅಂದಿನ ಶೂಟಿಂಗ್​ ಸಲುವಾಗಿ ಬರೋಬ್ಬರಿ 60 ದಿನಗಳ ಕಾಲ್​ಶೀಟ್​ ನೀಡಿದ್ದಾರಂತೆ ಆಲಿಯಾ. ಮೊದಲಿಗೆ ಆಲಿಯಾ ಭಾಗದ ಚಿತ್ರೀಕರಣ ಮುಗಿಸಿಕೊಂಡೇ ಬೇರೆಯವರ ಭಾಗದ ಶೂಟಿಂಗ್​ ಮಾಡಿಕೊಳ್ಳಲಿದ್ದಾರಂತೆ.

ಜೂ. ಎನ್​ಟಿಆರ್, ರಾಮ್​ಚರಣ್​ ತೇಜ, ಅಜಯ್​ ದೇವಗನ್​ ಈ ಚಿತ್ರದಲ್ಲಿ ನಟಿಸುತ್ತಿದ್ದೂ, ಈಗಾಗಲೇ ಒಂದಷ್ಟು ಭಾಗದ ಶೂಟಿಂಗ್​ ಸಹ ಮುಗಿದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net