ಈ ವರದಿಗಳನ್ನು ಆಧರಿಸಿ ಮಾಧ್ಯಮದವರು ನಟ ರಣಬೀರ್ ಕಪೂರ್ ಅವರನ್ನು ಮದುವೆಯ ಬಗ್ಗೆ ಇತ್ತೀಚೆಗೆ ಪ್ರಶ್ನಿಸಿದಾಗ, ''ನನ್ನ ಮದುವೆ ಯಾವಾಗ...? ಎಲ್ಲಿ ನಡೆಯಲಿದೆ...? ಎಂಬ ಮಾಹಿತಿಯನ್ನು ಮಾಧ್ಯಮದವರಿಗೆ ತಿಳಿಸಲು, ನನಗೆ ಹುಚ್ಚು ನಾಯಿ ಕಚ್ಚಿಲ್ಲ'' ಎಂದಿದ್ದರು. ಇದಾದ ಬಳಿಕ ಸ್ವಲ್ಪ ಶಾಂತರಾದ ನಟ, ''ಆದರೆ, ನಾನು ನಿಮಗೆ ಇಷ್ಟು ಮಾತ್ರ ಹೇಳಬಲ್ಲೆ. ಆಲಿಯಾ ಮತ್ತು ನಾನು ಇಬ್ಬರೂ ಮದುವೆಯಾಗಲು ಯೋಚಿಸುತ್ತಿದ್ದೇವೆ. ಅದು, ಶೀಘ್ರದಲ್ಲೇ ಆಗಲಿ'', ಎಂದು ನಾನು ಭಾವಿಸುತ್ತೇನೆ ಎಂದರು.