300 ಎಪಿಸೋಡ್ ಮುಗಿಸಿದ 'ಗೀತಾ' ಧಾರಾವಾಹಿ ನಟಿ ಭವ್ಯ ಗೌಡ ಬಳಿ ಎಷ್ಟು ಸಾವಿರ ಬಟ್ಟೆಗಳಿವೆ ಗೊತ್ತಾ?

Published on

ಬೆಂಗಳೂರು: ಕನ್ನಡದ ಕಿರುತೆರೆಯ ನಟಿ ಭವ್ಯ ಗೌಡ ಅವರು 'ಗೀತಾ' ಧಾರಾವಾಹಿಯ ಮೂಲಕ ಕರುನಾಡಲ್ಲಿ ಸಿಕ್ಕಾಪಟ್ಟೆ ಹೆಸರು ಮಾಡಿದ್ದಾರೆ. ಇವರು ಮಂಡ್ಯದ ನಾಗಮಂಗಲದ ಬೆಡಗಿ. ಟಿಕ್ ಟಾಕ್​ಗಳಿಂದ ಬಹಳಷ್ಟು ಖ್ಯಾತಿ ಪಡೆದ ಇವರು ಆರಂಭದಲ್ಲಿ ಗಗನ ಸಖಿ ಆಗಬೇಕೆಂಬ ಹಂಬಲ ಇಟ್ಟುಕೊಂಡಿದ್ದರು. ಆದರೆ, ಮನೆಯವರ ಒತ್ತಾಯಕ್ಕೆ ಮಣಿದು ನಟನಾ ಲೋಕಕ್ಕೆ ಕಾಲಿಟ್ಟರಂತೆ. ತಂದೆ ತಾಯಿಯ ಆಸೆಯ ಮೆರೆಗೆ ನಟನೆಯತ್ತ ವಾಲಿದರು ಭವ್ಯ ಗೌಡ. ಅಂದಹಾಗೆ, ಕಿರುತೆರೆಯಲ್ಲಿ ನಟಿಸುತ್ತಿರುವಾಗ ನಟಿಯರಿಗೆ ಬೆಳ್ಳಿ ಪರದೆಯಲ್ಲಿ ನಟಿಸೋಕೆ ಕೂಡಾ ಆಫರ್​ಗಳು ಬರೋದು ಸಹಜ. ಕಿರುತೆರೆಯಿಂದ ಹಿರಿತೆರೆಗೆ ಬಂದು ಮಿಂಚಿದ ಅನೇಕ ಕಲಾವಿದರಿದ್ದಾರೆ. ಇದೀಗ, ಈ ಸಾಲಿಗೆ ಭವ್ಯ ಗೌಡ ಅವರು ಸಹ ಸೇರಲಿದ್ದಾರೆ. ಹೌದು, ನಟಿ ಭವ್ಯ ಗೌಡ ಸ್ಯಾಂಡಲ್‌ವುಡ್‌ಗೆ ಕಾಲಿಡೋಕೆ ರೆಡಿಯಾಗುತ್ತಿದ್ದಾರೆ.

ವಿಸ್ಮಯಾ ಗೌಡ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ 'ಡಿಯರ್ ಕಣ್ಮಣಿ' ಚಿತ್ರದಲ್ಲಿ ನಟಿ ಭವ್ಯಾ ಗೌಡ ಅವರು ಸ್ಯಾಂಡಲ್​ವುಡ್​ಗೆ ಹೀರೋಯಿನ್ ಆಗಿ ಪಾದಾರ್ಪಣೆ ಮಾಡಲಿದ್ದಾರೆ. ಆದರೆ, ಖಾಸಗಿ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಗೀತಾ' ಧಾರಾವಾಹಿ ವೀಕ್ಷಕರ ಮನಸ್ಸಲ್ಲಿ ಮನೆ ಮಾಡಿದೆ. ಈ ಧಾರಾವಾಹಿ ಒಂದು ಸುದ್ದಿ ಇದೀಗ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಹೌದು, ಪ್ರಮುಖ ಪಾತ್ರಧಾರಿ 'ಗೀತಾ' ಅಲಿಯಾಸ್ ಭವ್ಯ ಈ ಧಾರಾವಾಹಿ ನೋಡುವವರೆಲ್ಲರಿಗೂ ಅಚ್ಚುಮೆಚ್ಚು ಎಂದರೇ ತಪ್ಪಾಗುವುದಿಲ್ಲ. ಅಂತಹ 'ಗೀತಾ' ಧಾರಾವಾಹಿಯಲ್ಲಿ ಭವ್ಯ ಅವರು ಒಂದು ದಿನ ಧರಿಸಿದ ಬಟ್ಟೆ ಮತ್ತೊಂದು ದಿನ ಹಾಕಲ್ವಂತೆ. ಇನ್ನು, ''ಈಗಾಗಲೇ 300 ಎಪಿಸೋಡ್ ಶೂಟಿಂಗ್ ಮಾಡಿರುವ ನನ್ನ ಬಳಿ ಮೂರು ಸಾವಿರಕ್ಕೂ ಹೆಚ್ಚು ಬಟ್ಟೆಗಳಿವೆ. ಮನೆ ತುಂಬಾ ಬರೀ ಬಟ್ಟೆಗಳೇ ಕಾಣಿಸುತ್ತವೆ'', ಎಂದು ಭವ್ಯ ಹೇಳಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net