ಯೋಧನ ಜತೆ ಫೋಟೋಗೆ ಪೋಸ್: ಅಭಿಮಾನಿಗಳ ಹೃದಯ ಗೆದ್ದ ಅಕ್ಷಯ್‌ಕುಮಾರ್

Published on
ಮುಂಬೈ: ಬಾಲಿವುಡ್ ಸೂಪರ್ ಸ್ಟಾರ್ ನಟ ಅಕ್ಷಯ್ ಕುಮಾರ್ ಇತ್ತೀಚೆಗೆ ತಮ್ಮ ಮುಂಬರುವ ಚಿತ್ರ 'ಅತರಂಗಿ ರೆ' ಮೂಲಕ ಸಖತ್ ಸುದ್ದಿಯಲ್ಲಿದ್ದಾರೆ. ಆದರೆ, ಇದೀಗ ನಟನ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಹೌದು, ಇತ್ತೀಚೆಗೆ ಅಕ್ಷಯ್‌ಕುಮಾರ್ ತಮ್ಮ ಸಿನಿಮಾ ಒಂದರ ಇವೆಂಟ್ ನಂತರ ಮುಂಬೈನ ಫೋಟೋ ಜರ್ನಲಿಸ್ಟ್​​ಗಳಿಗೆ ಪೋಸ್ ಕೊಡುವಾಗ, ಮಿಲಿಟರಿ ಡ್ರೆಸ್‌ನಲ್ಲಿದ್ದ ವ್ಯಕ್ತಿಯೊಬ್ಬರು ಇದ್ದಕ್ಕಿದ್ದಂತೆ ಮಧ್ಯಪ್ರವೇಶ ಮಾಡುತ್ತಾರೆ.
ಇನ್ನು, ನಟನ ಜತೆ ಫೋಟೋ ತೆಗೆಸಿಕೊಳ್ಳಲು ಇಚ್ಛೆ ವ್ಯಕ್ತಪಡಿಸುತ್ತಾರೆ ಆ ವ್ಯಕ್ತಿ. ಆಗ, ಮಿಲಿಟರಿ ಡ್ರೆಸ್​ನಲ್ಲಿದ್ದ ವ್ಯಕ್ತಿಯನ್ನು ದೂರ ಸರಿಸಲು ಅಕ್ಷಯ್‌ಕುಮಾರ್ ಅವರ ಸೆಕ್ಯುರಿಟಿ ಗಾರ್ಡ್‌ಗಳು ಪ್ರಯತ್ನ ಮಾಡುತ್ತಾರೆ. ಆದರೆ, ಅಕ್ಷಯ್‌ಕುಮಾರ್ ಅವರು ಗಾರ್ಡ್‌ಗಳನ್ನೇ ತಡೆದು, ಆ ಅಭಿಮಾನಿಯನ್ನು ಹತ್ತಿರ ಕರೆದು ಫೋಟೋ ತೆಗೆಸಿಕೊಳ್ಳಲು ಅವಕಾಶ ಮಾಡಿಕೊಡುತ್ತಾರೆ. 
ನಂತರ, ತಾವು ಅಭಿಮಾನಿಯೊಂದಿಗೆ ಹಿಡಿಸಿಕೊಂಡ ಫೋಟೊಗಳನ್ನು ಆಮೇಲೆ ಅವರಿಗೆ ಕೊಡುವಂತೆ ಅಲ್ಲಿದ್ದ ಫೋಟೋಗ್ರಾಫರ್‌ಗಳಿಗೆ ಅಕ್ಷಯ್ ಕುಮಾರ್ ಸೂಚಿಸುತ್ತಾರೆ. ಈಗ, ಅಭಿಮಾನಿಯ ಜತೆ ಅಕ್ಷಯ್‌ಕುಮಾರ್ ನಡೆದುಕೊಂಡ ರೀತಿಗೆ ಎಲ್ಲೆಡೆ, ಎಲ್ಲರಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ. ಸೋಶಿಯಲ್ ಮೀಡಿಯಾಗಳಲ್ಲಿ ಈ ವಿಡಿಯೋವನ್ನು ನಟ ಅಕ್ಷಯ್ ಕುಮಾರ್ ಅಭಿಮಾನಿಗಳು ಅವರ ಖಾತೆಗಳಲ್ಲಿ ಸಿಕ್ಕಾಪಟ್ಟೆ ಶೇರ್ ಮಾಡಿಕೊಳ್ಳುತ್ತಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net