ಪ್ರಾಚ್ಯವಸ್ತು ಶಾಸ್ತ್ರಜ್ಞನಾದ ಅಕ್ಷಯ್ ಬಾಲಿವುಡ್ ನಟ

Akshay
Published on

ಅಕ್ಷಯ್ ಕುಮಾರ್ ‘ರಾಮ್ ಸೇತು’ ಚಿತ್ರವನ್ನು ಒಪ್ಪಿಕೊಂಡಿರುವುದು ಹಳೇ ಸುದ್ದಿ. ಸಿನಿಮಾ ಘೋಷಣೆ ದಿನದಂದೇ ಆ ಚಿತ್ರದ ಪೋಸ್ಟರ್ ಬಿಬಿಡುಗಡೆ ಆಗಿದ್ದನ್ನು ಬಿಟ್ಟರೇ ಚಿತ್ರದಲ್ಲಿ ಅಕ್ಷಯ್ ಲುಕ್ ಹೇಗಿರಲಿದೆ ಎಂಬ ಬಗ್ಗೆ ಸಣ್ಣ ಸುಳಿವೂ ಸಿಕ್ಕಿರಲಿಲ್ಲ. ಇದೀಗ ಆ ಕೌತುಕಕ್ಕೂ ತೆರೆ ಬಿದ್ದಿದೆ. ಮಂಗಳವಾರ ಚಿತ್ರದ ಫಸ್ಟ್ ಲುಕ್ ಅನ್ನು ಸ್ವತಃ ಅಕ್ಷಯ್ ಕುಮಾರ್ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಉದ್ದನೆಯ ಕೂದಲು ಬಿಟ್ಟು, ಕಣ್ಣಿಗೊಂದು ಕನ್ನಡಕ ಹಾಕಿಕೊಂಡು ಎದುರಾಗಿದ್ದಾರೆ.

ವಿಶೇಷ ಏನೆಂದರೆ, ‘ರಾಮ್ ಸೇತು’ ಚಿತ್ರದಲ್ಲಿ ಅಕ್ಷಯ್ ಪ್ರಾಚ್ಯವಸ್ತು ಶಾಸ್ತ್ರಜ್ಞನಾಗಿ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚೆಗಷ್ಟೇ ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ಮುಹೂರ್ತ ಮುಗಿಸಿಕೊಂಡಿದ್ದ ತಂಡ, ಮಂಗಳವಾರದಿಂದ ಶೂಟಿಂಗ್ ಸಹ ಆರಂಭಿಸಿದೆ. ಅಭಿಷೇಕ್ ಶರ್ಮಾ ನಿರ್ದೇಶನದಲ್ಲಿ ಸಿದ್ಧವಾಗಲಿರುವ ಈ ಚಿತ್ರ, ಭಾರತ ಮತ್ತು ಶ್ರೀಲಂಕಾ ನಡುವಿನ ಐತಿಹಾಸಿಕ ಹಿನ್ನೆಲೆಯುಳ್ಳ ರಾಮ್ ಸೇತುವೆಯನ್ನು ಆಧರಿಸಿ ತಯಾರಾಗುತ್ತಿದೆ. ಸತ್ಯವೋ ಮಿಥ್ಯವೋ ಎಂಬ ಟ್ಯಾಗ್​ಲೈನ್ ಸಹ ಇಲ್ಲಿರುವುದರಿಂದ, ಏನೆಲ್ಲ ಅಂಶಗಳನ್ನು ಈ ಸಿನಿಮಾ ಮೂಲಕ ಹೇಳಲಿದ್ದಾರೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಚಿತ್ರದಲ್ಲಿ ಅಕ್ಷಯ್ಗೆ ಜಾಕ್​ಲೀನ್ ಫರ್ನಾಂಡೀಸ್ ಜೋಡಿಯಾಗಿ ನಟಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net