ರಕ್ಷಾ ಬಂಧನಕ್ಕಾಗಿ 5 ಕೆಜಿ ಹೆಚ್ಚಿಸಿಕೊಂಡ ಅಕ್ಷಯ್ ಕುಮಾರ್! ಅಮ್ಮನ ಕೈ ರುಚಿಯ ಹಲ್ವಾ ತಿನ್ನುವ ಖುಷಿ ಹಂಚಿಕೊಂಡ ನಟ

baby
Published on

ಮುಂಬೈ: ಬಾಲಿವುಡ್​ನ ಟಾಪ್​ ಲಿಸ್ಟ್​ನಲ್ಲಿರುವ ನಟ ಅಕ್ಷಯ್ ಕುಮಾರ್ ಸದಾ ಒಂದಿಲ್ಲೊಂದು ಸಿನಿಮಾದಲ್ಲಿ ಬ್ಯುಸಿಯಾಗಿಯೇ ಇರುತ್ತಾರೆ. ಸಿನಿಮಾಗಳ ಜತೆ ಜತೆಗೆ ಕೆಲವು ಸಾಮಾಜಿಕ ಕೆಲಸಗಳಲ್ಲೂ ತೊಡಗಿಸಿಕೊಳ್ಳುವ ಅವರು ಇದೀಗ 5 ಕೆಜಿ ತೂಕ ಹೆಚ್ಚಿಸಿಕೊಂಡಿದ್ದಾರಂತೆ.

ಅಕ್ಷಯ್​ಕುಮಾರ್ ಇದೀಗ ರಕ್ಷಾ ಬಂಧನ್ ಹೆಸರಿನ ಸಿನಿಮಾದಲ್ಲಿ ನಟಿಸಲು ಸಿದ್ಧವಾಗಿದ್ದಾರೆ. ಆ ಸಿನಿಮಾಕ್ಕಾಗಿ ಅವರ ತೂಕವನ್ನು ಹೆಚ್ಚಿಸಿಕೊಳ್ಳಬೇಕಿತ್ತಂತೆ. ಹಾಗಾಗಿ ನೈಸರ್ಗಿಕ ವಿಧದಲ್ಲಿ ತೂಕ ಹೆಚ್ಚಿಸಿಕೊಳ್ಳುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ ಅವರು. ಈ ರೀತಿ ತೂಕ ಹೆಚ್ಚಿಸಿಕೊಳ್ಳುವ ಅವಕಾಶ ಸಿಕ್ಕಿದ್ದರಿಂದಾಗಿ ನನಗೆ ಅಮ್ಮನ ಕೈನಲ್ಲಿ ತಯಾರಾದ ಹಲ್ವಾ ತಿನ್ನಲು ಆಯಿತು ಎಂದು ಅವರು ಹೇಳಿಕೊಂಡಿದ್ದಾರೆ. ಅದಷ್ಟೇ ಅಲ್ಲದೆ ಯಾವುದೇ ಸಿನಿಮಾಕ್ಕೆ ತೂಕ ಹೆಚ್ಚಿಸಿಕೊಳ್ಳುವುದು ಅಥವಾ ಇಳಿಸಿಕೊಳ್ಳುವುದು ಅವರಿಗೆ ಸಾಕಷ್ಟು ಇಷ್ಟವಾಗುತ್ತದೆಯಂತೆ.

ಅಕ್ಷಯ್​ ಕುಮಾರ್ ಅವರು ರಕ್ಷಾ ಬಂಧನ್ ಸಿನಿಮಾದಲ್ಲಿ ನಟಿಸುವುದಾಗಿ ಕಳೆದ ವರ್ಷ ರಕ್ಷಾ ಬಂಧನ್ ದಿನವೇ ಹೇಳಿದ್ದರು. ಈ ಸಿನಿಮಾಕ್ಕೆ ಆನಂದ್ ಎಲ್ ರೈ ಆ್ಯಕ್ಷನ್ ಕಟ್ ಹೇಳಿದ್ದಾರೆ. ಈ ಚಿತ್ರವನ್ನು ನಟ ತಮ್ಮ ಸಹೋದರಿ ಅಲ್ಕಾ ಭಾಟಿಯಾ ಅವರಿಗೆ ಅರ್ಪಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net