ಬಾಲಿವುಡ್ ನಟಿ ತಾಪ್ಸಿ ಪನ್ನು ಬಾಯ್​ಫ್ರೆಂಡ್​ಗೆ ಇಂದು ಜನ್ಮದಿನದ ಸಂಭ್ರಮ; ಹೇಗಿತ್ತು ಬರ್ತ್​ಡೇ?

tpsi
Published on

ಮುಂಬೈ: ನಟಿ ತಾಪ್ಸಿ ಪನ್ನುಗೆ ಬಾಯ್​ಫ್ರೆಂಡ್ ಇರುವ ವಿಚಾರ ಎಲ್ಲರಿಗೂ ಗೊತ್ತಿರುವುದೇ. ಮಾಜಿ ಬ್ಯಾಡ್ಮಿಂಟನ್ ಆಟಗಾರ ಮಥಿಯಾಸ್ ಬೋ ಜತೆ ಕೆಲ ಕಾಲದಿಂದ ಡೇಟ್ ಮಾಡುತ್ತಿರುವ ನಟಿ ಇಂದು ತನ್ನ ಬಾಯ್​ಫ್ರೆಂಡ್​ನ 41ನೇ ಜನ್ಮದಿನವನ್ನು ಆಚರಿಸಿದ್ದಾರೆ.

ಸ್ವತಃ ಮಥಿಯಾಸ್​ ಅವರೇ ತಮ್ಮ ಬರ್ತ್​ಡೇ ಪೋಸ್ಟ್ ಹಾಕಿದ್ದಾರೆ. ಅತ್ಯಂತ ಸರಳವಾಗಿ ಲಂಚ್​ ಪಾರ್ಟಿ ಮಾಡಿರುವುದು ಕಂಡುಬಂದಿದೆ. ಅದರಲ್ಲಿ ತಾಪ್ಸಿ ಪನ್ನು ಮತ್ತು ಆಕೆಯ ತಂಗಿಯೂ ಭಾಗವಹಿಸಿರುವನ್ನು ನೀವು ಫೋಟೋದಲ್ಲಿ ಗಮನಿಸಬಹುದು. ಸ್ಟ್ರಿಪ್ಸ್​ ಇರುವ ಡ್ರೆಸ್ ಅನ್ನು ತಾಪ್ಸಿ ಹಾಕಿದ್ದಾರೆ, ಮಥಿಯಾಸ್ ಕ್ಯಾಶುಯಲ್ ಶರ್ಟ್ ಹಾಕಿಕೊಂಡಿದ್ದಾರೆ. ಬರ್ತ್ ಡೇ ಲಂಚ್ ಇನ್ ದಿ ಬೆಸ್ಟ್ ಕಂಪನಿ ಎನ್ನುವ ಕ್ಯಾಪ್ಶನ್ ಕೊಟ್ಟು ಫೋಟೋ ಹಂಚಿಕೊಂಡಿದ್ದಾರೆ. ತಾಪ್ಸಿ ಅವರು ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಸ್ಟೇಟಸ್ ಮೂಲಕ ಮಥಿಯಾಸ್​ಗೆ ಶುಭ ಕೋರಿದ್ದಾರೆ.

ತಾಪ್ಸಿ ಮತ್ತು ಮಥಿಯಾಸ್ ಡೇಟ್ ಮಾಡುತ್ತಿರುವ ವಿಚಾರ 2020ರ ಅಕ್ಟೋಬರ್​ನಲ್ಲಿ ಬಯಲಾಗಿತ್ತು. ಅವರಿಬ್ಬರು ಮಾಲ್ಡೀವ್ಸ್​ನಲ್ಲಿ ಹಾಲಿಡೇ ಎಂಜಾಯ್ ಮಾಡುತ್ತಿರುವ ಫೋಟೋವನ್ನು ಮಥಿಯಾಸ್ ಹಂಚಿಕೊಂಡಿದ್ದರು. ಅದಕ್ಕೂ ಮೊದಲು ಆಗಸ್ಟ್​ನಲ್ಲಿ ತಾಪ್ಸಿ ಬರ್ತ್​ ಡೇ ದಿನ ತಾವಿಬ್ಬರು ಜತೆಗಿರುವ ಫೋಟೋ ಹಂಚಿಕೊಂಡಿದ್ದ ಅವರು ಗರ್ಲ್​ಫ್ರೆಂಡ್​ಗೆ ಶುಭ ಹಾರೈಸಿದ್ದರು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net