ಕೋಣನಕುಂಟೆ ಕ್ರಾಸ್‌ನ ಗಾರ್ಮೆಂಟ್ಸ್​ನಲ್ಲಿ ಅಗ್ನಿ ಅವಘಡ: ಬೆಲೆ ಬಾಳುವ ಯಂತ್ರಗಳು ಬೆಂಕಿಗೆ ಆಹುತಿ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಬೆಂಗಳೂರು: ಕನಕಪುರ ರಸ್ತೆ ಕೋಣನಕುಂಟೆ ಕ್ರಾಸ್‌ನಲ್ಲಿ ಇರುವ ಗಾರ್ಮೆಂಟ್ಸ್‌ನಲ್ಲಿ ಸಾರ್ಟ್ ಸೆರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡು ಬೆಲೆ ಬಾಳುವ ವಸ್ತುಗಳು ಅಗ್ನಿಗೆ ಆಹುತಿಯಾಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಕೋಣನಕುಂಟೆ ಕ್ರಾಸ್‌ನ 2 ಮಹಡಿಯ ಕಟ್ಟಡದಲ್ಲಿ ಡೇಸಿ ಗಾರ್ಮೆಂಟ್ಸ್ ಇದ್ದು, ಭಾನುವಾರ ಮಧ್ಯಾಹ್ನ 3.30ರಲ್ಲಿ ಮೊದಲ ಮಹಡಿಯಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ. ಅಕ್ಕಪಕ್ಕದವರು ದಟ್ಟ ಹೊಗೆ ಕಂಡು ಅಗ್ನಿ ಶಾಮಕ ದಳ ಮತ್ತು ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿದ್ದಾರೆ. ವಿಷಯ ತಿಳಿದ ಕೂಡಲೇ ಬನಶಂಕರಿ, ಜಯನಗರ ಮತ್ತು ಅಂಜನಪುರ ಅಗ್ನಿ ಶಾಮಕ ಠಾಣೆಯಿಂದ ವಾಹನಗಳು ಬಂದು ಸತತ ಮೂರು ತಾಸಿನ ಕಾರ್ಯಾಚರಣೆ ನಡೆಸಿ ಬೆಂಕಿ ಹರಡದಂತೆ ಹತೋಟಿಗೆ ತಂದು ಕೊನೆಗೆ ಸಂಜೆ 6.30ರ ವೇಳೆಗೆ ಸಂಪೂರ್ಣ ನಂದಿಸಿದ್ದಾರೆ. ಮೊದಲ ಮಹಡಿಯಲ್ಲಿದ್ದ ಯಂತ್ರಗಳು ಬೆಂಕಿಗೆ ಆಹುತಿಯಾಗಿವೆ. 2ನೇ ಮಹಡಿಯಲ್ಲಿದ್ದ ಬೆಲೆ ಬಾಳುವ ವಸ್ತುಗಳಿಗೆ ಯಾವುದೇ ಹಾನಿಯಾಗಿಲ್ಲ ಎಂದು ಅಗ್ನಿ ಶಾಮಕ ಅಧಿಕಾರಿಗಳು ತಿಳಿಸಿದ್ದಾರೆ. ಈ ಕುರಿತು ಸುಬ್ರಮಣ್ಯಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net