ಅಕ್ಷಯ್​ ಕುಮಾರ್ ಹೊಸ ಸಿನಿಮಾ ‘ರಕ್ಷಾ ಬಂಧನ್​’ ಫಸ್ಟ್​ಲುಕ್​ ರಿಲೀಸ್​...

Kumar-481218706-1585401918
Published on

ಅಕ್ಷಯ್​ ಕುಮಾರ್ ನಾಯಕ್ವತದ ಸಾಲು ಸಾಲು ಸಿನಿಮಾಗಳು ಈಗಾಗಲೇ ಬಿಡುಗಡೆಗೆ ಸಿದ್ಧವಾಗಿವೆ. ಕರೊನಾ ನಡುವೆಯೂ ಶೂಟಿಂಗ್​ನಲ್ಲಿ ಭಾಗವಹಿಸುತ್ತಿದ್ದಾರೆ. ಇನ್ನೇನು ಶೀಘ್ರದಲ್ಲಿ ಡಿಸ್ನಿ ಹಾಟ್​ಸ್ಟಾರ್​ನಲ್ಲಿ ಲಕ್ಷ್ಮೀ ಬಾಂಬ್​ ಸಿನಿಮಾ ರಿಲೀಸ್​ ಆಗಲಿದೆ. ಈ ನಡುವೆ ರಕ್ಷಾ ಬಂಧನ್​ ಹಬ್ಬದ ಪ್ರಯುಕ್ತ ಅಕ್ಷಯ್ ಹೊಸ ಸಿನಿಮಾ ಘೋಷಣೆ ಆಗಿದೆ. ಅಚ್ಚರಿ ಏನೆಂದರೆ ಸಿನಿಮಾ ಹೆಸರೂ ‘ರಕ್ಷಾ ಬಂಧನ್​’.

ಹೌದು, ಈಗಾಗಲೇ ಬಾಲಿವುಡ್​ನಲ್ಲಿ ಹಲವು ಯಶಸ್ವಿ ಸಿನಿಮಾ ನಿರ್ದೇಶನ ಮಾಡಿರುವ ನಿರ್ದೇಶಕ ಆನಂದ್​ ಎಲ್​ ರಾಯ್​, ಇದೀಗ ರಕ್ಷಾ ಬಂಧನ್​ ಸಿನಿಮಾ ಆಯ್ದುಕೊಂಡು ಬಂದಿದ್ದಾರೆ. ಅಣ್ಣ ತಂಗಿಯ ಬಾಂಧವ್ಯವನ್ನೇ ಪ್ರಮುಖವಾಗಿಟ್ಟುಕೊಂಡು ಮೂಡಿಬರಲಿರುವ ಈ ಚಿತ್ರದ ಫಸ್ಟ್ ಲುಕ್​ ಸಹ ಬಿಡುಗಡೆಯಾಗಿದೆ.

ನಾಲ್ವರು ತಂಗಿಯಂದಿರ ಮುದ್ದಿನ ಅಣ್ಣನಾಗಿ ಅಕ್ಷಯ್​ ಕುಮಾರ್ ಕಾಣಿಸಿಕೊಳ್ಳಲಿದ್ದು, ಭಾವುಕ ಕಥಾಹಂದರ ಹೊಂದಿದೆ. ಹಿಮಾಂಶು ಶರ್ಮಾ ಕತೆ ಬರೆದಿದ್ದು, 2021ರ ನವೆಂಬರ್​ 5ಕ್ಕೆ ಸಿನಿಮಾ ತೆರೆಕಾಣಲಿದೆ.

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಇಷ್ಟೊತ್ತಿಗಾಗಲೇ ಸೂರ್ಯವಂಶಿ ಸಿನಿಮಾ ತೆರೆಕಂಡಿರಬೇಕಿತ್ತು. ಚಿತ್ರಮಂದಿರದಲ್ಲಿಯೇ ಆ ಸಿನಿಮಾ ಬಿಡುಗಡೆ ಮಾಡುವ ಲೆಕ್ಕಾಚಾರ ಇರುವುದರಿಂದ, ಸದ್ಯಕ್ಕೆ ಯಾವಾಗ ಬಿಡುಗಡೆ ಎಂಬುದಕ್ಕೆ ಉತ್ತರವಿಲ್ಲ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net