ಯುವಕನಿಂದ ಖಾಸಗಿ ಅಂಗಗಳ ಸ್ಪರ್ಶ! ಹಳದಿ ಬಣ್ಣದ ಬಟ್ಟೆಗೆ ಹೆದರುವ ನಟಿ ಐಶ್ವರ್ಯಾರ ನೋವಿನ ಕತೆಯಿದು

Aishwarya Lakshmi
Published on

ಚೆನ್ನೈ: ಇತ್ತೀಚೆಗಷ್ಟೇ ತೆರೆಕಂಡು ಬಾಕ್ಸ್​ಆಫೀಸ್​ನಲ್ಲಿ ಧೂಳೆಬ್ಬಿಸಿದ ಪೊನ್ನಿಯನ್​ ಸೆಲ್ವನ್​​ ಸಿನಿಮಾದ ಪ್ರಮುಖ ಪಾತ್ರವೊಂದರಲ್ಲಿ ಅಭಿನಯಿಸಿರುವ ಐಶ್ವರ್ಯಾ ಲಕ್ಷ್ಮೀ ಪ್ರಸ್ತುತ ಬಹು ಬೇಡಿಕೆಯ ನಟಿಯಾಗಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದು, ಕಳೆದ ಡಿ.2ರಂದು ಅವರ ನಟನೆಯ ಗಟ್ಟ ಕುಸ್ತಿ ಸಿನಿಮಾ ಬಿಡುಗಡೆಯಾಗಿದೆ.

ಸದ್ಯ ಸಿನಿಮಾ ಪ್ರಚಾರದಲ್ಲಿ ಬಿಜಿಯಾಗಿರುವ ಐಶ್ವರ್ಯಾ, ಮಾಧ್ಯಮ ಸಂದರ್ಶನವೊಂದರಲ್ಲಿ ಚಿಕ್ಕ ವಯಸ್ಸಿನಲ್ಲಿ ತನ್ನ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ಕರಾಳ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ಕೇರಳದ ಗುರುವಾಯೂರು ದೇವಸ್ಥಾನದಲ್ಲಿ ಯುವಕನೊಬ್ಬ ಅನುಚಿತವಾಗಿ ಸ್ಪರ್ಶಿಸಿದ್ದ ಎಂದಿದ್ದಾರೆ.

ನಾನು ಚಿಕ್ಕವಳಿದ್ದಾಗ ಯುವಕನೊಬ್ಬ ಗುರುವಾಯೂರು ದೇವಸ್ಥಾನದಲ್ಲಿ ನನ್ನ ಖಾಸಗಿ ಅಂಗಗಳನ್ನು ಮುಟ್ಟಿ ಕೆಟ್ಟದಾಗಿ ವರ್ತಿಸಿದ್ದ. ಈ ವಯಸ್ಸಲ್ಲಿ ಯಾರಾದರೂ ಈ ರೀತಿ ನಡೆದುಕೊಂಡಿದ್ದರೆ, ತಕ್ಷಣ ಪ್ರತಿಕ್ರಿಯಿಸುತ್ತಿದ್ದೆ ಆದರೆ, ಹೇಗೆ ಪ್ರತಿಕ್ರಿಯೆ ನೀಡಬೇಕೆಂದು ಆ ದಿನಗಳಲ್ಲಿ ನನಗೆ ತಿಳಿಯಲಿಲ್ಲ ಎಂದು ಐಶ್ವರ್ಯಾ ಹೇಳಿದರು.

ಘಟನೆ ನಡೆದ ಸಮಯದಲ್ಲಿ ಸ್ಟ್ರಾಬೆರಿ ಮುದ್ರಣವಿರುವ ಹಳದಿ ಬಣ್ಣದ ಉಡುಗೆ ಧರಿಸಿದ್ದೆ. ಇದಾದ ಬಳಿಕ ಹಳದಿ ಬಣ್ಣದ ಉಡುಗೆ ಧರಿಸಿದರೆ ಏನಾದರೂ ಕೇಡು ಸಂಭವಿಸುತ್ತದೆ ಅಂತಾ ಹಳದಿ ಬಣ್ಣದ ಬಟ್ಟೆ ಧರಿಸಲು ಹೆದರುತ್ತಿದ್ದೆ ಆದರೆ, ಈಗ ಮೊದಲಿನಂತಿಲ್ಲ, ಎಲ್ಲವು ಬದಲಾಗಿದ್ದು, ಆಗಾಗ ಹಳದಿ ಉಡುಗೆ ಧರಿಸುತ್ತೇನೆ ಎಂದು ತಿಳಿಸಿದರು.

ಸಿನಿಮಾ ವಿಚಾರಕ್ಕೆ ಬಂದರೆ, ಡಿ. 2ರಂದು ತೆರೆಕಂಡಿರುವ ಗಟ್ಟ ಕುಸ್ತಿ ಸಿನಿಮಾದಲ್ಲಿ ಐಶ್ವರ್ಯಾಗೆ ನಟ ವಿಷ್ಣು ವಿಶಾಲ್​ ನಾಯಕರಾಗಿದ್ದಾರೆ. ಪೊನ್ನಿಯನ್​ ಸೆಲ್ವನ್​ ಭಾಗ 2ರಲ್ಲೂ ಐಶ್ವರ್ಯ ನಟಿಸಿದ್ದು, ಮುಂದಿನ ವರ್ಷ ಸಿನಿಮಾ ತೆರೆಗೆ ಅಪ್ಪಳಿಸಲಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net