ಫ್ಲಾಪ್ ಆದರೂ ಬಿಜಿ; ನಾಲ್ಕು ಸಿನಿಮಾಗಳಲ್ಲಿ ಮಾನುಷಿ ಛಿಲ್ಲರ್ ನಾಯಕಿ

manushi
Published on

ಮಾಡೆಲಿಂಗ್ ಲೋಕದಲ್ಲಿ ಮಿಂಚಿ, 2017ರಲ್ಲಿ ವಿಶ್ವಸುಂದರಿ ಕಿರೀಟ ಮುಡಿಗೇರಿಸಿಕೊಂಡ ಖ್ಯಾತಿ ಮಾನುಷಿ ಛಿಲ್ಲರ್‌ಗೆ ಸಲ್ಲುತ್ತದೆ. ಎಲ್ಲ ವಿಶ್ವಸುಂದರಿಯರಂತೆ ಮಾನುಷಿ ಸಹ ಬಾಲಿವುಡ್‌ಗೆ ಎಂಟ್ರಿ ಕೊಟ್ಟರು. ಆದರೆ, ಅವರು ಅಕ್ಷಯ್ ಕುಮಾರ್‌ಗೆ ನಾಯಕಿಯಾಗಿ ನಟಿಸಿದ ಮೊದಲ ಸಿನಿಮಾ ‘ಸಾಮ್ರಾಟ್ ಪೃಥ್ವಿರಾಜ್’ ಬಾಕ್ಸಾಫೀಸಿನಲ್ಲಿ ಮಕಾಡೆ ಮಲಗಿತು. ಅದರ ನಡುವೆಯೂ ಮಾನುಷಿ ಬಿಜಿಯಾಗಿದ್ದಾರೆ.

ಒಂದಾದ ಮೇಲೊಂದರಂತೆ ಅವಕಾಶಗಳನ್ನು ಪಡೆಯುತ್ತಿದ್ದಾರೆ. ಸದ್ಯ ನಾಲ್ಕು ಚಿತ್ರಗಳಲ್ಲಿ ಮಾನುಷಿ ಕಾಣಿಸಿಕೊಳ್ಳಲಿದ್ದಾರೆ. ವಿಜಯ್ ಕೃಷ್ಣ ಆಚಾರ್ಯ ಆ್ಯಕ್ಷನ್-ಕಟ್ ಹೇಳುತ್ತಿರುವ ್ಯಾಮಿಲಿ ಕಾಮಿಡಿ ‘ದಿ ಗ್ರೇಟ್ ಇಂಡಿಯನ್ ್ಯಾಮಿಲಿ’ ಚಿತ್ರದಲ್ಲಿ ವಿಕ್ಕಿ ಕೌಶಲ್‌ಗೆ ಮಾನುಷಿ ನಾಯಕಿಯಾಗಿದ್ದಾರೆ. ಇತ್ತೀಚೆಗಷ್ಟೆ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಇದೇ 22ಕ್ಕೆ ಸಿನಿಮಾ ರಿಲೀಸ್ ಆಗುತ್ತಿದೆ.

ಇನ್ನು ಜಾನ್ ಅಬ್ರಹಾಂ ಜತೆಗೆ ‘ಟೆಹ್ರಾನ್’ ಹಾಗೂ ಪೃಥ್ವಿರಾಜ್ ಸುಕುಮಾರನ್, ಅಕ್ಷಯ್ ಕುಮಾರ್ ಅಭಿನಯಿಸುತ್ತಿರುವ ಅಲಿ ಅಬ್ಬಾಸ್ ಜಾರ್ ನಿರ್ದೇಶನದಲ್ಲಿ ಮೂಡಿಬರಲಿರುವ ‘ಬಡೇ ಮಿಯ್ಯ ಛೋಟೇ ಮಿಯ್ಯ’ ಸಿನಿಮಾಗಳು ಮಾನುಷಿ ಜೋಳಿಗೆಯಲ್ಲಿವೆ. ತೆಲುಗು ಹಾಗೂ ಹಿಂದಿ ಭಾಷೆಗಳಲ್ಲಿ ಬರುತ್ತಿರುವ ವರುಣ್ ತೇಜ್ ಅಭಿನಯದ ‘ಆಪರೇಷನ್ ವ್ಯಾಲೆಂಟೈನ್’ ಸಿನಿಮಾಗಳಲ್ಲಿ ಮಾನುಷಿ ನಟಿಸುತ್ತಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net