More

    ಮುಂಬೈನಲ್ಲಿ ಐಶಾರಾಮಿ ಅಪಾರ್ಟ್​ಮೆಂಟ್ ಖರೀದಿಸಿದ ನಟಿ ಸೋನಾಕ್ಷಿ ಸಿನ್ಹಾ

    ಬಾಲಿವುಡ್​ನ ಹಲವು ನಟ-ನಟಿಯರು ರಿಯಲ್ ಎಸ್ಟೇಟ್​ ಮೇಲೆ ಬಂಡವಾಳ ಹೂಡುತ್ತಿದ್ದಾರೆ. ಅಮಿತಾಬ್ ಬಚ್ಚನ್, ಸಾರಾ ಅಲಿ ಖಾನ್, ಕಿಯಾರಾ ಅಡ್ವಾಣಿ ಅವರುಗಳ ಬಳಿಕ ಮುಂಬೈನಲ್ಲಿ ಫ್ಲ್ಯಾಟ್ ಖರೀದಿಸಿದ್ದಾರೆ ನಟಿ ಸೊನಾಕ್ಷಿ ಸಿನ್ಹ.


    ಪ್ಲ್ಯಾಟ್ ಖರೀದಿಗೆ ಸೊನಾಕ್ಷಿ ಬರೊಬ್ಬರಿ 11 ಕೋಟಿ ರೂಪಾಯಿ ವ್ಯಯಿಸಿದ್ದಾರೆ. ಮುಂಬೈನಲ್ಲಿ ಬಹುತೇಕ ಸ್ಟಾರ್ ನಟರು ಇರುವುದು ಬಾಂದ್ರಾ, ವರ್ಸೋವಾ, ಜುಹು ಏರಿಯಾಗಳಲ್ಲಿಯೇ. ಇದೀಗ ನಟಿ ಸೋನಾಕ್ಷಿ ಸಹ ಇದೇ ಏರಿಯಾದಲ್ಲಿ ಹೊಸ ಮನೆ ಖರೀದಿ ಮಾಡಿದ್ದಾರೆ. ಬಾಂದ್ರಾದ ಐಶಾರಾಮಿ ಅಪಾರ್ಟ್​ಮೆಂಟ್​ನ 26ನೇ ಮಹಡಿಯಲ್ಲಿ ದೊಡ್ಡ ಫ್ಲ್ಯಾಟ್ ಒಂದನ್ನು ಸೊನಾಕ್ಷಿ ಖರೀದಿ ಮಾಡಿದ್ದಾರೆ. ಇಂಟೀರಿಯರ್ ಇನ್ನಿತರೆಗಳಿಗೆ ಸುಮಾರು 1 ಕೋಟಿ ಖರ್ಚು ಮಾಡಿದ್ದಾರೆ ಎನ್ನಲಾಗುತ್ತಿದೆ.


    ಬಾಂದ್ರಾದ ಪ್ರೀಮಿಯಮ್ ರೆಸೆಡೆನ್ಷಿಯಲ್ ಟವರ್​ ಅಪಾರ್ಟ್​ಮೆಂಟ್ ಸಮುಚ್ಛಯದಲ್ಲಿ ಸೊನಾಕ್ಷಿ ಪ್ಲ್ಯಾಟ್ ಖರೀದಿಸಿದ್ದು, 2430 ಚದರ ಅಡಿಯ ಈ ಫ್ಲ್ಯಾಟ್​ಗೆ 11 ಕೋಟಿ ರೂಪಾಯಿ ತೆತ್ತಿದ್ದಾರೆ.


    ಆಗಸ್ಟ್ ತಿಂಗಳಲ್ಲಿ ಈ ಫ್ಲ್ಯಾಟ್ ಅನ್ನು ಸೊನಾಕ್ಷಿ ಖರೀದಿ ಮಾಡಿದ್ದಾರೆ. ಬಾಲಿವುಡ್ ಸ್ಟಾರ್ ನಟ ಅಮಿತಾಬ್ ಬಚ್ಚನ್ ಮುಂಬೈನ ಓಷಿವಾರಾ ಪ್ರದೇಶದಲ್ಲಿ ಸುಮಾರು 8500 ಚದರ ಅಡಿಗಳ ಆಫೀಸ್ ಸ್ಪೇಸ್ ಅನ್ನು ಅಮಿತಾಬ್ ಬಚ್ಚನ್ ಖರೀದಿ ಮಾಡಿದ್ದು, ಇದಕ್ಕಾಗಿ ಸುಮಾರು 29 ಕೋಟಿ ರೂಪಾಯಿ ವೆಚ್ಚ ಮಾಡಿದ್ದರು.


    ಸಾರಾ ಅಲಿ ಖಾನ್, 2100 ಚದರ ಅಡಿಯ ಪ್ಲ್ಯಾಟ್ ಅನ್ನು 9 ಕೋಟಿ ಹಣ ನೀಡಿ ಖರೀದಿ ಮಾಡಿದ್ದಾರೆ. ಕಾರ್ತಿಕ್ ಆರ್ಯನ್ ಸಹ ಇದೇ ಪ್ರಾಜೆಕ್ಟ್​ನಲ್ಲಿ 2100 ಚದರ ಅಡಿಯ ಫ್ಲ್ಯಾಟ್ ಅನ್ನು 10 ಕೋಟಿ ಹಣ ನೀಡಿ ಖರೀದಿ ಮಾಡಿದ್ದಾರೆ. ಹೀಗೆ ಇದೀಗ ಸೋನಾಕ್ಷಿ ಸಿನ್ಹಾ ಕೂಡಾ ಬರೋಬ್ಬರಿ 11 ಕೋಟಿಯ ಫ್ಲಾಟ್​​​ ಒಂದನ್ನ ಖರೀದಿ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts