'ಪಠಾಣ್​' ಚಿತ್ರಕ್ಕೆ ಎರಡು ಟ್ರೈಲರ್​? ಒಂದರಲ್ಲಿ ಸಲ್ಮಾನ್​, ಇನ್ನೊಂದರಲ್ಲಿ ಇಲ್ಲ …

Pathaan
Published on

ಮುಂಬೈ: ಶಾರೂಖ್​ ಖಾನ್​ ಮತ್ತು ದೀಪಿಕಾ ಪಡುಕೋಣೆ ಅಭಿನಯದ 'ಪಠಾಣ್​' ಚಿತ್ರಕ್ಕಿಂತ ಅದರ ಟ್ರೈಲರ್​ ಹೆಚ್ಚು ಸುದ್ದಿಯಾಗುತ್ತಿದೆ ಎಂದರ ತಪ್ಪಿಲ್ಲ. ಚಿತ್ರವು ಇದೇ ಜ.25ಕ್ಕೆ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಆದರೆ, ಚಿತ್ರದ ಟ್ರೈಲರ್​ ಇನ್ನೂ ಬಿಡುಗಡೆಯಾಗಿಲ್ಲ. ಟ್ರೈಲರ್​ ಯಾವಾಗ ಬಿಡುಗಡೆಯಾಗುತ್ತದೆ? ಹೇಗಿರುತ್ತದೆ? ಎಂಬ ಹಲವು ಪ್ರಶ್ನೆಗಳು ಅಭಿಮಾನಿಗಳಲ್ಲಿದೆ.

ಈ ಮಧ್ಯೆ ಜವವರಿ 10ರಂದು ಟ್ರೈಲರ್​ ಬಿಡುಗಡೆಯಾಗಲಿದೆ ಎಂಬ ಸುದ್ದಿ ಇದೆ, ವಿಶೇಷವೆಂದರೆ, ನಿರ್ಮಾಪಕ ಆದಿತ್ಯ ಚೋಪ್ರಾ ಎರಡು ಟ್ರೈಲರ್​ ಕಟ್​ ಮಾಡುವುದಕ್ಕೆ ಹೇಳಿದ್ದಾರಂತೆ. ಒಂದರಲ್ಲಿ ಶಾರುಖ್​ ಜತೆಗೆ ಸಲ್ಮಾನ್ ಇರುವಂತದ್ದು. ಇನ್ನೊಂದು ಬರೀ ಶಾರುಖ್​ ಮಾತ್ರ ಇರುವಂತಹದ್ದು. ಈ ಎರಡೂ ಟ್ರೈಲರ್​ ನೋಡಿ, ಮುಂದಿನ ತೀರ್ಮಾನ ತೆಗೆದುಕೊಳ್ಳುವುದಾಗಿ ಅವರು ಚಿತ್ರತಂಡದವರಿಗೆ ಹೇಳಿದ್ದಾರಂತೆ.

ಹಾಗೆ ಮಾಡುತ್ತಿರುವುದಕ್ಕೆ ಕಾರಣವೂ ಇದೆ. ಚಿತ್ರದಲ್ಲಿ ಸಲ್ಮಾನ್​ ವಿಶೇಷ ಪಾತ್ರದಲ್ಲಿ ನಟಿಸಿರುವುದು ಎಲ್ಲರಿಗೂ ಗೊತ್ತಿದೆ. ಸಲ್ಮಾನ್​ ಖಾನ್​ ಅವರನ್ನು ನೇರವಾಗಿ ಚಿತ್ರಮಂದಿರದಲ್ಲೇ ತೋರಿಸುವ ಯೋಚನೆ ಅವರದು. ಹಾಗಾಗಿ, ಶಾರುಖ್​ ಖಾನ್​ ಅವರ ಟ್ರೈಲರ್​ ಮೊದಲು ಬಿಡುಗಡೆ ಮಾಡಲಾಗುತ್ತದಂತೆ. ಇದರಲ್ಲಿ ಸಲ್ಮಾನ್​ ಅವರನ್ನು ಸೂಕ್ಷ್ಮವಾಗಿ ತೋರಿಸಲಾಗುತ್ತದೇ ಹೊರು, ಅವರಿರುವುದಿಲ್ಲವಂತೆ. ಒಂದು ಪಕ್ಷ ಸಲ್ಮಾನ್​ ಅಭಿಮಾನಿಗಳಿಂದ ಒತ್ತಾಯ ಮತ್ತು ಒತ್ತಡ ಹೆಚ್ಚಾದರೆ, ಆಗ ಬಿಡುಗಡೆಯ ಸಂದರ್ಭದಲ್ಲಿ ಇನ್ನೊಂದು ಟ್ರೈಲರ್​ ಬಿಡುಗಡೆ ಮಾಡಬೇಕೆಂದುಕೊಂಡಿದ್ದಾರಂತೆ.

'ಪಠಾಣ್​' ಚಿತ್ರವನ್ನು ಸಿದ್ಧಾರ್ಥ್​ ಆನಂದ್​ ನಿರ್ದೇಶನ ಮಾಡಿದ್ದು, ಶಾರೂಖ್​ ಖಾನ್​, ದೀಪಿಕಾ ಪಡುಕೋಣೆ, ಜಾನ್​ ಅಬ್ರಹಾಂ ಮುಂತಾದವರು ಅಭಿನಯಿಸಿದ್ದಾರೆ. ಯಶ್​ರಾಜ್​ ಫಿಲಂಸ್​ ಈ ಚಿತ್ರವನ್ನು ನಿರ್ಮಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net