ಕೃತಿ ವರ್ಸಸ್​ ಕಿಯಾರಾ!; ಹೃತಿಕ್​ ‘ಕ್ರಿಷ್ 4’ ಚಿತ್ರಕ್ಕೆ ಇಬ್ಬರಲ್ಲಿ ಯಾರಾಗ್ತಾರೆ ಜೋಡಿ?

Hritik
Published on

ಮುಂಬೈ: ವಾರ್ ಸಿನಿಮಾ ಬಳಿಕ ಹೃತಿಕ್​ ರೋಷನ್​ ಹೊಸ ಸಿನಿಮಾ ಘೋಷಣೆ ಮಾಡಿಲ್ಲ. ಇತ್ತ ತಂದೆ ರಾಕೇಶ್​ ರೋಷನ್​ ಕ್ರಿಷ್​ 4 ಚಿತ್ರದ ಸ್ಕ್ರಿಪ್ಟಿಂಗ್​ ಕೆಲಸಗಳಲ್ಲಿ ನಿರತರಾಗಿದ್ದಾರೆ. ಇನ್ನೇನು ಶೀಘ್ರದಲ್ಲಿ ಸಿನಿಮಾ ಸೆಟ್ಟೇರುವ ಸಾಧ್ಯತೆ ಇದೆ. ಈ ನಡುವೆ ನಾಯಕಿ ಯಾರು ಎಂಬ ಬಗ್ಗೆ ಬಾಲಿವುಡ್​ನಲ್ಲಿ ಒಂದಷ್ಟು ನಟಿಯರ ಹೆಸರುಗಳು ತಳುಕು ಹಾಕಿಕೊಂಡಿವೆ. ಆ ಪೈಕಿ ನಟಿ ಕೃತಿ ಸನೋನ್ ಹೆಸರು ಮೊದಲ ಸ್ಥಾನದಲ್ಲಿದೆ.

ಹೌದು, ಕೃತಿ ಸನೋನ್ ಮತ್ತು ಹೃತಿಕ್​ ಇಲ್ಲಿಯವರೆಗೂ ಒಟ್ಟಿಗೆ ನಟಿಸಿಲ್ಲ. ಈ ಜೋಡಿಯನ್ನು ತೆರೆಮೇಲೆ ತರಲು ನಿರ್ಮಾಪಕರು ಮನಸು ಮಾಡಿದ್ದು, ಕಳೆದ ಕೆಲ ತಿಂಗಳ ಹಿಂದೆಯೇ ಅಪ್ರೋಚ್​ ಸಹ ಮಾಡಲಾಗಿತ್ತು. ಈ ಚಿತ್ರದಲ್ಲಿ ಸೂಪರ್​ ಹೀರೋಯಿನ್ ಪಾತ್ರದಲ್ಲಿ ಕೃತಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಇದೀಗ ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಂಡಿರುವ ಕೃತಿ ಸನೋನ್ ನಟಿಸ್ತಾರಾ ಇಲ್ಲವಾ ಎಂಬ ಗುಮಾನಿ ಎದ್ದಿದೆ. ಅದರ ಬೆನ್ನಲ್ಲೇ ಕೃತಿ ಬದಲಿಗೆ ಬೇರೆ ಯಾರು ಎಂಬುದಕ್ಕೂ ಉತ್ತರ ಸಿಕ್ಕಿದ್ದು, ಕಿಯಾರಾ ಅಡ್ವಾಣಿ ಅವರನ್ನು ಕರೆತರುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ.

ಕ್ರಿಷ್​ 4 ಚಿತ್ರದಲ್ಲಿ ಹೃತಿಕ್​ಗೆ ಇಬ್ಬರು ನಾಯಕಿಯರು. ಮೊದಲ ಹೀರೋಯಿನ್​ ಆಗಿ ಕೃತಿಯೇ ಇರಬೇಕೆಂಬುದು ತಂಡದ ನಿರ್ಧಾರ. ಒಂದು ವೇಳೆ ಕಾಲ್​ಶೀಟ್​ ಸಮಸ್ಯೆಯಿಂದ ಅವರು ಹೊರನಡೆದರೆ, ಆ ಜಾಗಕ್ಕೆ ಕಿಯಾರಾ ಆಗಮನವಾಗಲಿದೆ. ಮೇನ್​ ನಾಯಕಿಯ ಆಯ್ಕೆ ಬಳಿಕ ಇನ್ನೋರ್ವ ನಾಯಕಿಯನ್ನು ಆಯ್ದುಕೊಳ್ಳುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ನಿರ್ಮಾಪಕರು. ಒಟ್ಟಿನಲ್ಲಿ ಕೃತಿ ನಿರ್ಧಾರದ ಬಳಿಕವೇ ಎಲ್ಲವೂ ಅಂತಿಮವಾಗಲಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net