More

    ಮತ್ತೆ ನೆನಪಾಗುತ್ತಿದೆ ‘ಅನುರಾಗ ಸಂಗಮ’ … ಯಾಕಿರಬಹುದು ಹೇಳಿ?

    ಬೆಂಗಳೂರು: 90ರ ದಶಕದ ಸೂಪರ್​ ಹಿಟ್​ ಚಿತ್ರಗಳಲ್ಲಿ ಕುಮಾರ್​ ಗೋವಿಂದ್​ ಅಭಿನಯದ ಮತ್ತು ನಿರ್ಮಾಣದ ‘ಅನುರಾಗ ಸಂಗಮ’ ಚಿತ್ರವೂ ಒಂದು. 25 ವಾರಗಳ ಯಶಸ್ವಿ ಪ್ರದರ್ಶನ ಕಂಡಿದ್ದ ಈ ಚಿತ್ರವೀಗ 25 ವರ್ಷಗಳನ್ನು ಪೂರೈಸಿದೆ.

    ಇದನ್ನೂ ಓದಿ: ರಾತ್ರಿ ಶೂಟಿಂಗ್ ಮುಗಿಸಿ ಹೋಟೆಲ್​ಗೆ ಬಂದ ಖ್ಯಾತ ಕಿರುತೆರೆ ಕಲಾವಿದೆ ಬೆಳಗಾಗುವಷ್ಟರಲ್ಲಿ ಶವವಾಗಿ ಪತ್ತೆ..!

    ಹೌದು, ಕುಮಾರ್ ಗೋವಿಂದ್​, ರಮೇಶ್ ಅರವಿಂದ್, ಸುಧಾರಾಣಿ, ಬಿ.ಸರೋಜಾದೇವಿ ನಟಿಸಿದ್ದ ಈ ಚಿತ್ರವು, 1995ರ ಡಿಸೆಂಬರ್​ 08ರಂದು ರಾಜ್ಯದ್ಯಂತ ಬಿಡುಗಡೆಯಾಗಿತ್ತು. ಆ ಚಿತ್ರ ಬಿಡುಗಡೆಯಾಗಿ ಇದೀಗ ಮಂಗಳವಾರಕ್ಕೆ 25 ವರ್ಷಗಳಾಗಿವೆ.

    ಬಿಡುಗಡೆಯಾದ ಸಂದರ್ಭದಲ್ಲಿ ಸಿಲ್ವರ್​ ಜ್ಯೂಬಿಲಿ ಬಾರಿಸಿದ್ದ ಈ ಚಿತ್ರ, ಇದೀಗ ಬಿಡುಗಡೆಯಾಗಿ ಸಿಲ್ವರ್ ಜ್ಯೂಬಿಲಿ ಬಾರಿಸಿದೆ. ಈ ಚಿತ್ರದ ರೀಮೇಕ್​ ಹಕ್ಕುಗಳು ಆಗ ಬೇರೆ ಭಾಷೆಗಳಿಗೂ ಮಾರಾಟವಾಗಿದ್ದಷ್ಟೇ ಅಲ್ಲ, ತೆಲುಗು ಮತ್ತು ತಮಿಳಿಗೂ ರೀಮೇಕ್​ ಆಗಿ ಯಶಸ್ವಿಯಾಗಿತ್ತು.

    ಇನ್ನು ‘ಅನುರಾಗ ಸಂಗಮ’ ಎಂದರೆ ನೆನಪಿಗೆ ಬರುವುದು ಹಾಡುಗಳು. ವಿ. ಮನೋಹರ್​ ಸಂಗೀತ ನಿರ್ದೇಶನದಲ್ಲಿ ಮೂಡಿಬಂದಿದ್ದ ‘ಓ ಮಲ್ಲಿಗೆ …’ ಮುಂತಾದ ಹಾಡುಗಳು ಇಂದಿಗೂ ಜನಪ್ರಿಯವಾಗಿದ್ದು, ಆ ಹಾಡಿನ ಗಾನಕ್ಕೆ ರಮೇಶ್​ ಚಂದ್ರ ಅವರಿಗೆ ಅತ್ಯುತ್ತಮ ಗಾಯಕ ರಾಜ್ಯಪ್ರಶಸ್ತಿ ಸಿಕ್ಕಿತ್ತು.

    ಇದನ್ನೂ ಓದಿ: PHOTOS| ಬಿಕಿನಿ ಬ್ಯೂಟಿ ಯಾರೆಂದು ಗುರುತಿಸುವಿರಾ? ಕನ್ನಡಗರಿಗೂ ಚಿರಪರಿಚಿತ ಈ ಮಾದಕ ನಟಿ!

    ‘ಅನುರಾಗ ಸಂಗಮ’ ಚಿತ್ರವನ್ನು ವಿ. ಉಮಾಕಾಂತ್​ ಚಿತ್ರಕಥೆ ಬರೆದು ನಿರ್ದೇಶನ ಮಾಡಿದರೆ, ಎಸ್.ಕೆ ಫಿಲಂಸ್ ಸಂಸ್ಥೆಯಡಿ ಡಿ.ಗೋವಿಂದಪ್ಪ ಈ ಚಿತ್ರ ನಿರ್ಮಾಣ ಮಾಡಿದ್ದರು.

    ಮಹೇಶ್​ ಬಾಬು ಮಗಳಿಗೆ ಆಲಿಯಾ ಏನ್​ ಗಿಫ್ಟ್​ ಕೊಟ್ಟರು ಹೇಳಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts