More

    ಮಹೇಶ್​ ಬಾಬು ಮಗಳಿಗೆ ಆಲಿಯಾ ಏನ್​ ಗಿಫ್ಟ್​ ಕೊಟ್ಟರು ಹೇಳಿ?

    ಹೈದರಾಬಾದ್​: ಅಂತೂ ಇಂತೂ ಆಲಿಯಾ ಭಟ್, ಮುಂಬೈನಿಂದ ಹೈದರಾಬಾದ್​ಗೆ ಬಂದಿದ್ದಾರೆ. ‘ಆರ್​ಆರ್​ಆರ್​’ ಚಿತ್ರದಲ್ಲಿ ಅವರು ನಟಿಸುವುದಕ್ಕೆ ಒಪ್ಪಿಕೊಂಡಿದ್ದರಾದರೂ, ಚಿತ್ರೀಕರಣ ಶುರುವಾಗಿ ಎರಡು ತಿಂಗಳಾದರೂ ಆಲಿಯಾ, ಚಿತ್ರದಲ್ಲಿ ನಟಿಸುತ್ತಾರೋ ಇಲ್ಲವೋ ಎಂಬ ಕುತೂಹಲ ಎಲ್ಲರಲ್ಲೂ ಇತ್ತು. ಈಗ, ಹೈದರಾಬಾದ್​ಗೆ ಬಂದು ಚಿತ್ರೀಕರಣದಲ್ಲಿ ಭಾಗವಹಿಸುವ ಮೂಲಕ ಎಲ್ಲರಲ್ಲಿದ್ದ ಪ್ರಶ್ನೆಗಳಿಗೂ ಆಲಿಯಾ ಉತ್ತರ ಕೊಟ್ಟಿದ್ದಾರೆ.

    ಇದನ್ನೂ ಓದಿ: PHOTOS| ಬಿಕಿನಿ ಬ್ಯೂಟಿ ಯಾರೆಂದು ಗುರುತಿಸುವಿರಾ? ಕನ್ನಡಗರಿಗೂ ಚಿರಪರಿಚಿತ ಈ ಮಾದಕ ನಟಿ!

    ಹೈದರಾಬಾದ್​ಗೆ ಬಂದು ನಿರ್ದೇಶಕ ರಾಜಮೌಳಿ ಅವರನ್ನು ಭೇಟಿಯಾಗಿದ್ದಷ್ಟೇ ಅಲ್ಲ, ನಟ ಮಹೇಶ್​ ಬಾಬು ಅವರನ್ನು ಸಹ ಭೇಟಿ ಮಾಡಿ, ಅವರ ಮಗಳಿಗೆ ಒಂದು ಗಿಫ್ಟ್​ ಕೊಟ್ಟು ಬಂದಿದ್ದಾರೆ ಆಲಿಯಾ. ಇಷ್ಟಕ್ಕೂ ಆ ಗಿಫ್ಟ್​ ಏನು ಗೊತ್ತಾ? ಒಂದು ಕ್ಯೂಟ್​ ಆದಂತಹ ಡ್ರೆಸ್​. ಅಷ್ಟೇ ಅಲ್ಲ, ಎಡ್​-ಆ-ಮಮ್ಮಾ ಎಂಬ ಬಟ್ಟೆಯ ಬ್ರಾಂಡ್​ ಹೊಂದಿರುವ ಆಲಿಯಾ, ಅದರಡಿ ತಯಾರಾದ ಒಂದು ಸುಂದರವಾದ ಡ್ರೆಸ್​ನ್ನು ಸಿತಾರಾಗೆ ಉಡುಗೊರೆಯಾಗಿ ನೀಡಿದ್ದಾರೆ ಎನ್ನುವುದು ವಿಶೇಷ.

    ಸಿತಾರಾಗೆ ಆಲಿಯಾ ಹೀಗೆ ಗಿಫ್ಟ್​ ಕೊಡುವುದಕ್ಕೂ ಒಂದು ಕಾರಣವಿದೆ. ಮಹೇಶ್​ ಬಾಬು ಕುಟುಂಬಕ್ಕೂ, ಆಲಿಯಾಗೂ ಬಹಳ ನಂಟು. ಅಷ್ಟೇ ಅಲ್ಲ, ಮಹೇಶ್​ ಬಾಬು ಮಗಳು ಸಿತಾರಾ, ಆಲಿಯಾ ಅವರ ದೊಡ್ಡ ಫ್ಯಾನ್​ ಅಂತೆ. ಎರಡು ವರ್ಷಗಳ ಹಿಂದೆ ಮಹೇಶ್​ ಬಾಬು ತಮ್ಮ ಕುಟುಂಬದವರ ಜೊತೆಗೆ ವೆಕೇಶನ್​ಗೆಂದು ಹೋದಾಗ, ಅಲ್ಲಿ ಆಲಿಯಾ ಭಟ್​ ಮತ್ತು ರಣಬೀರ್​ ಕಪೂರ್​ ಸಿಕ್ಕಿದ್ದರಂತೆ. ಈ ಸಂದರ್ಭದಲ್ಲಿ ಸಿತಾರಾ, ಆಲಿಯಾ ಜೊತೆಗೆ ಫೋಟೋ ತೆಗೆಸಿಕೊಂಡು, ತಾನೆಷ್ಟು ದೊಡ್ಡ ಫ್ಯಾನ್​ ಎಂದು ಹೇಳಿಕೊಂಡಿದ್ದಳಂತೆ.

    ಈಗ ಅದೇ ಸಲುಗೆಯ ಮೇರೆಗೆ, ಹೈದರಾಬಾದ್​ಗೆ ಬಂದಿದ್ದಾಗ, ಮಹೇಶ್​ ಬಾಬು ಮತ್ತು ಅವರ ಕುಟುಂಬದವರನ್ನು ಭೇಟಿ ಮಾಡಿದ್ದಾರೆ ಆಲಿಯಾ. ಅಷ್ಟೇ ಅಲ್ಲ, ಇದೇ ಸಂದರ್ಭದಲ್ಲಿ ತಮ್ಮ ಪುಟಾಣಿ ಫ್ಯಾನ್​ಗೆ ಉಡುಗೊರೆಯನ್ನು ಕೊಟ್ಟು ಹಾರೈಸಿದ್ದಾರೆ. ತಮ್ಮ ಮೆಚ್ಚಿನ ನಟಿಯಿಂದ ಗಿಫ್ಟ್​ ಪಡೆದಿರುವ ಸಿತಾರಾ, ಸೋಷಿಯಲ್​ ಮೀಡಿಯಾ ಮೂಲಕ ಆಕೆಗೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

    ಇದನ್ನೂ ಓದಿ: ಕೃತಿಗೆ ಪಾಸಿಟಿವ್ … ಬಾಲಿವುಡ್‌ನಲ್ಲಿ ಹೆಚ್ಚಾಯ್ತು ಸೋಂಕಿತರ ಸಂಖ್ಯೆ

    ಅಂದಹಾಗೆ, ‘ಆರ್​ಆರ್​ಆರ್​’ ಚಿತ್ರದಲ್ಲಿ ರಾಮ್​ಚರಣ್​ ತೇಜಗೆ ಆಲಿಯಾ ಭಟ್​ ಜೋಡಿಯಾಗಿದ್ದು, ಮುಂದಿನ ಒಂದು ತಿಂಗಳ ಕಾಲ ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ. ಚಿತ್ರದ ಕೆಲವು ಪ್ರಮುಖ ಸನ್ನಿವೇಶಗಳಲ್ಲಿ ನಟಿಸಿರುವ ಆಲಿಯಾ, 10 ಜನರ ಸಹಾಯಕರ ತಂಡದೊಂದಿಗೆ ಮುಂಬೈನಿಂದ ಹೈದರಾಬಾದ್​ಗೆ ಬಂದಿದ್ದಾರೆ.

    ರಾತ್ರಿ ಶೂಟಿಂಗ್ ಮುಗಿಸಿ ಹೋಟೆಲ್​ಗೆ ಬಂದ ಖ್ಯಾತ ಕಿರುತೆರೆ ಕಲಾವಿದೆ ಬೆಳಗಾಗುವಷ್ಟರಲ್ಲಿ ಶವವಾಗಿ ಪತ್ತೆ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts