More

    ರಾತ್ರಿ ಶೂಟಿಂಗ್ ಮುಗಿಸಿ ಹೋಟೆಲ್​ಗೆ ಬಂದ ಖ್ಯಾತ ಕಿರುತೆರೆ ಕಲಾವಿದೆ ಬೆಳಗಾಗುವಷ್ಟರಲ್ಲಿ ಶವವಾಗಿ ಪತ್ತೆ..!

    ಚೆನ್ನೈ: ಕಾಲಿವುಡ್​ನ ಪ್ರಖ್ಯಾತ ಕಿರುತೆರೆ ಕಲಾವಿದೆ ಮತ್ತು ವಿಡಿಯೋ ಜಾಕಿ (ವಿಜೆ) ಚೈತ್ರಾ ಅವರು ಚೆನ್ನೈ ಹೋಟೆಲ್​ ಒಂದರಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ತಮಿಳಿನ ಪಾಂಡಿಯನ್​ ಸ್ಟೋರ್ಸ್​ ಧಾರಾವಾಹಿ ಮೂಲಕ ಚೈತ್ರ ಮನೆ ಮಾತಾಗಿದ್ದರು.

    ಚೆನ್ನೈ ನಜರತ್‌ಪೇಟೆಯ ಹೋಟೆಲ್​ನಲ್ಲಿ ಬುಧವಾರ ಚೈತ್ರಾ ಮೃತದೇಹ ಪತ್ತೆಯಾಗಿದೆ. ಪಾಂಡಿಯನ್​ ಸ್ಟೋರ್ಸ್​ ಸೀರಿಯಲ್​ನಲ್ಲಿ ಮುಲೈ ಕಥಿರಾವನ್ ಅಲಿಯಾಸ್​ ಮುಲ್ಲಾ ಪಾತ್ರದಲ್ಲಿ ಚೈತ್ರಾ ಮಿಂಚಿದ್ದರು. ಕೇವಲ 29 ವರ್ಷ ಹರೆಯದ ಚೈತ್ರಾ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

    ಪೊಲೀಸ್​ ಮೂಲಗಳ ಪ್ರಕಾರ ಮಂಗಳವಾರ ಶೂಟಿಂಗ್​ ಮುಗಿಸಿದ ಬಳಿಕ ತಡರಾತ್ರಿ 1 ಗಂಟೆಗೆ ಚೈತ್ರಾ ಹೋಟೆಲ್​ಗೆ ಬಂದಿದ್ದರು. ಬುಧವಾರ ನಸುಕಿನ ಜಾವ 3.30ಕ್ಕೆ ಹೋಟೆಲ್​ ಮ್ಯಾನೇಜರ್​ ಪೊಲೀಸ್​ ಸಹಾಯವಾಣಿ 100ಕ್ಕೆ ಕರೆ ಮಾಡಿ ಮಾಹಿತಿ ನೀಡಿದ ಬಳಿಕ ನಜರತ್​ಪೇಟೆ ಪೊಲೀಸರು ಸ್ಥಳಕ್ಕೆ ಆಗಮಿಸಿದಾಗ ಚೈತ್ರಾ ಮೃತದೇಹ ಪತ್ತೆಯಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸಾವಿಗೆ ಕಾರಣ ಏನೆಂದು ತಿಳಿಯಲು ತನಿಖೆ ಆರಂಭಿಸಿರುವುದಾಗಿ ಹೇಳಿದ್ದಾರೆ.

    ಇನ್ನು ಚೈತ್ರಾ ಕುಟುಂಬ ಸಹ ಚೆನ್ನೈನಲ್ಲೇ ವಾಸವಿದೆ. ಪೊಲೀಸರು ಪಾಲಕರಿಗೆ ಮಾಹಿತಿ ನೀಡಿದ್ದಾರೆ. ಚೈತ್ರಾ ಚೆನ್ನೈನ ಕೊಟ್ಟುಪುರಂನ ನಿವಾಸಿ. ತಮಿಳು ಕಿರುತೆರೆ ಲೋಕದಲ್ಲಿ ಚೈತ್ರಾ ಅವರು ತುಂಬಾ ಹೆಸರು ಮಾಡಿದ್ದಾರೆ. ಮಕ್ಕಳ್​ ಟಿವಿ, ಜಯ ಟಿವಿ ಮತ್ತು ಝೀ ತಮಿಳ್​​ ಸೇರಿದಂತೆ ಪ್ರಮುಖ ಟಿವಿ ಚಾನಲ್​ಗಳಲ್ಲಿ ಚೈತ್ರಾ ಹೋಸ್ಟ್​ ಮಾಡಿದ್ದಾರೆ. ಅನೇಕ ಸೀರಿಯಲ್​ಗಳಲ್ಲೂ ನಟನೆ ಮಾಡಿದ್ದಾರೆ.

     

    View this post on Instagram

     

    A post shared by Chitra kamaraj (@chithuvj)

    2014-2018ರ ನಡುವೆ ಸನ್​ ಟಿವಿಯಲ್ಲಿ ಪ್ರಸಾರವಾದ ಚಿನ್ನ ಪಾಪಾ ಪೆರಿಯಾ ಪಾಪಾ, ವಿಜಯ ಟಿವಿಯಲ್ಲಿ ಪ್ರಸಾರವಾದ ಸರವಣನ್​ ಮಿನಾಟ್ಚಿ ಸೀಸನ್​-2 ಮತ್ತು ಝೀ ತಮಿಳು ಚಾನಲ್​ನಲ್ಲಿ 2016 ಮತ್ತು 2017ರ ನಡುವೆ ಪ್ರಸಾರವಾದ ಡಾರ್ಲಿಂಗ್​ ಡಾರ್ಲಿಂಗ್​ ಸೀರಿಯಲ್​ಗಳ ಮೂಲಕ ಚೈತ್ರಾ ಮನೆ ಮಾತಾದರು. ಅನೇಕ ಟಿವಿ ಕಾರ್ಯಕ್ರಮದ ನಿರೂಪಣೆಯನ್ನು ಸಹ ಮಾಡಿದ್ದಾರೆ.

    ಇನ್ನು ಚೈತ್ರಾ ಅವರು ಕಳೆದ ಆಗಸ್ಟ್​ನಲ್ಲಿ ಉದ್ಯಮಿಯೊಬ್ಬರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿರುವುದಾಗಿ ವರದಿಯಾಗಿತ್ತು. ಮುಂದಿನ ತಮಿಳು ಚಿತ್ರವೊಂದರಲ್ಲಿ ಪ್ರಮುಖ ಪಾತ್ರವೊಂದಕ್ಕೆ ಸಹಿ ಸಹ ಮಾಡಿದ್ದರು ಎಂದು ತಿಳಿದುಬಂದಿದೆ. ಇದೀಗ ಚೈತ್ರಾ ಅವರ ದಿಢೀರ್​ ನಿಧನದಿಂದ ಅವರ ಅಭಿಮಾನಿಗಳಿಗೆ ಶಾಕ್​ ಆಗಿದೆ.

    ಚೈತ್ರಾ ಅವರಿಗೆ ಹೆಚ್ಚು ಹೆಸರು ತಂದುಕೊಟ್ಟಿದ್ದು 2018 ಅಕ್ಟೋಬರ್​ನಲ್ಲಿ ವಿಜಯ ಟಿವಿಯಲ್ಲಿ ಆರಂಭವಾದ ಪಾಂಡಿಯನ್​ ಸ್ಟೋರ್ಸ್​ ಧಾರಾವಾಹಿ. ಈ ಸೀರಿಯಲ್​ 500 ಎಪಿಸೋಡ್​ಗಳನ್ನು ದಾಟಿತ್ತು. ತೆಲುಗಿನಲ್ಲಿ ವಂದಿನಮ್ಮ, ಕನ್ನಡದಲ್ಲಿ ವರಲಕ್ಷ್ಮೀ ಸ್ಟೋರ್ಸ್​, ಮರಾಠಿಯಲ್ಲಿ ಸಹಕುಟುಂಬ ಸಹಪರಿವಾರ್​, ಬೆಂಗಾಳಿಯಲ್ಲಿ ಭಾಗ್ಗೊಲೊಕ್ಕಿ, ಮಲಯಾಳಂನಲ್ಲಿ ಸಾಂತ್ವಾನಂ ಮತ್ತು ಹಿಂದಿಯಲ್ಲಿ ಗುಪ್ತಾ ಬ್ರದರ್ಸ್​ ಹೆಸರಿನಲ್ಲಿ ಅನೇಕ ಭಾಷೆಗಳಿಗೆ ರಿಮೇಕ್​ ಆಗುವ ಮೂಲಕ ಪಾಂಡಿಯನ್​ ಸ್ಟೋರ್ಸ್​ ಭಾರಿ ಸಂಚಲನ ಮೂಡಿಸಿತ್ತು. (ಏಜೆನ್ಸೀಸ್​)

     

    View this post on Instagram

     

    A post shared by Chitra kamaraj (@chithuvj)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts