More

    ನಗರ ಮಾಪನ ಯೋಜನಾ ಕಚೇರಿಯ ನಗರಾಸ್ತಿ ಮಾಲಿಕತ್ವ ದಾಖಲಿಸಿಕೊಳ್ಳುವ ಬಗ್ಗೆ ಮಾಹಿತಿ


    ಮೈಸೂರು: ನಗರ ಆಸ್ತಿ ಮಾಲಿಕತ್ವ ದಾಖಲೆಯು ಖಾಲಿ ನಿವೇಶನ, ಮನೆ, ವಾಣಿಜ್ಯ ಸಂಕೀರ್ಣ ಅಪಾರ್ಟ್ಮೆಂಟ್‌ಗಳು ಹಾಗೂ ಇತರೆ ನಗರ ಆಸ್ತಿಗಳಿಗೆ ಸಂಬoಧಿಸಿದoತೆ ಎಲ್ಲಾ ಮಾಹಿತಿಗಳನ್ನು ತಂತ್ರಜ್ಞಾನ ಬಳಸಿ ಡಿಜಿಟಲ್ ವಿಧಾನದಲ್ಲಿ ಅಳವಡಿಕೆ ಮಾಡಲು ನಗರಮಾಪನ ಯೋಜನಾಧಿಕಾರಿಗಳ ಇಲಾಖೆ ನಿರ್ಧರಿಸಿದೆ.

    ನಗರಾಸ್ತಿ ಮಾಲೀಕತ್ವ ದಾಖಲೆ ಯೋಜನೆಯು ಇಟಿಎಸ್ ಮತ್ತು ಡಿಜಿಪಿಎಸ್ ನಂತಹ ಡಿಜಿಟಲ್ ವಿಧಾನದಲ್ಲಿ ನಗರಮಾಪನದಡಿ ವಿಶೇಷ ತಂತ್ರಾoಶದೊoದಿಗೆ ಅಭಿವೃದ್ಧಿಪಡಿಸಿರುವುದು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾಗಿದ್ದು, ನಗರ ಆಸ್ತಿ ಮಾಲೀಕತ್ವ ಹೊಂದಲು ಅಗತ್ಯ ದಾಖಲಾತಿಗಳನ್ನು ಹೊಂದಿರುವ ಮಾಲೀಕರು ತಮ್ಮ ಹೆಸರು, ಆಸ್ತಿಯ ವಿಸ್ತೀರ್ಣ, ಆಧಾರ್ ಸಂಖ್ಯೆ, ಋಣ ಭಾರಗಳು, ಅನುಭೋಗದ ಹಕ್ಕುಗಳು, ದಾಸ್ತಾವೇಜಿನ ಸಂಪೂರ್ಣ ವಿವರ ಹಾಗೂ ಅಳತೆಯೊಂದಿಗೆ ನಕ್ಷೆಯ ವಿವರಗಳುಳ್ಳ ಏಕಮೇವ ಆಸ್ತಿ ಸಂಖ್ಯೆಯನ್ನು ಒದಗಿಸಬೇಕು.

    ಮೈಸೂರು ನಗರ ಹಾಗೂ ಅದಕ್ಕೆ ಹೊಂದಿಕೊoಡಿರುವ 42 ಗ್ರಾಮಗಳ ಆಸ್ತಿಗಳಿಗೆ ಸಂಬoಧಿಸಿದoತೆ ಯುಪಿಓಆರ್ ದಾಖಲೆ ಪಡೆಯಬಹುದಾಗಿದ್ದು, ಈ ದಾಖಲೆಯನ್ನು ಪಡೆಯುವುದರಿಂದ ಆಸ್ತಿದಾರರ ಅನುಪಸ್ಥಿತಿಯಲ್ಲಿ ನಡೆಯಬಹುದಾದ ಯಾವುದೇ ಅಕ್ರಮ ಪರಭಾರೆಯನ್ನು ತಡೆಯಬಹುದಾಗಿದೆ ಹಾಗೂ ನೋಂದಣಿಯಾದ ನಂತರ ವಿವಾದಗಳಿಗೆ ಅಸ್ಪದವಿರುವುದಿಲ್ಲ.

    ಆಸಕ್ತರು ನಜರ್‌ಬಾದ್‌ನಲ್ಲಿರುವ ನಗರಮಾಪನ ಯೋಜನಾ ಕಛೇರಿಗೆ ಸೂಕ್ತ ದಾಖಲೆಗಳೊಂದಿಗೆ ಕಛೇರಿಗೆ ಭೇಟಿ ನೀಡಿ, ಯೋಜನೆಯ ಸದುಪಯೋಗ ಪಡೆದುಕೊಳ್ಳಬಹುದು.

    ಹೆಚ್ಚಿನ ಮಾಹಿತಿಗಾಗಿ ಮೊ.ಸಂ:7411088231,9632462492 ನ್ನು ಸಂಪರ್ಕಿಸಬಹುದು ಎಂದು ನಜರ್‌ಬಾದ್‌ನ ನಗರ ಮಾಪನ ಯೋಜನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts