

ನವದೆಹಲಿ: ಮಾಲ್ಡೀವ್ಸ್ ಪ್ರವಾಸಿಗರ ನೆಚ್ಚಿನ ತಾಣ ಎಂಬುದರಲ್ಲಿ ಸಂಶಯವೇ ಇಲ್ಲ. ಅದರಲ್ಲೂ ಸಿನಿಮಾ ನಟಿಯರಿಗಂತೂ ಮಾಲ್ಡೀವ್ಸ್ ಕಡಲ ಕಿನಾರೆಯೆಂದರೆ ಎಲ್ಲಲ್ಲಿದ ಪ್ರೀತಿ. ಹೀಗಾಗಿಯೇ ಬಿಕಿನಿ ತೊಟ್ಟು ಬೀಚ್ನಲ್ಲಿ ಮಿಂದೇಳುವ ಮೂಲಕ ಸಖತ್ ಎಂಜಾಯ್ ಮಾಡುತ್ತಾರೆ. ಇದಕ್ಕೆ ಸಂಬಂಧಪಟ್ಟ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಅಭಿಮಾನಿಗಳ ಮನತಣಿಸುವುದಲ್ಲದೇ ಸಖತ್ ಲೈಕ್ಸ್ಗಳನ್ನು ಗಿಟ್ಟಿಸಿಕೊಳ್ಳುತ್ತಾರೆ.
ಕರೊನಾ ಲಾಕ್ಡೌನ್ನಿಂದ ಮನೆಯಲ್ಲೇ ಲಾಕ್ ಆಗಿದ್ದ ನಟಿಯರು ಲಾಕ್ಡೌನ್ ಮುಕ್ತವಾಗುತ್ತಿದ್ದಂತೆ ಸಾಲು ಸಾಲಾಗಿ ಮಾಲ್ಡೀವ್ಸ್ ಕಡೆ ಹೆಜ್ಜೆ ಇಟ್ಟಿದ್ದಾರೆ. ಇತ್ತೀಚೆಗಷ್ಟೇ ಸಮಂತಾ, ಶಾನ್ವಿ ಶ್ರೀವಾತ್ಸವ್, ಸೋನಾಕ್ಷಿ ಸಿನ್ಹಾ, ದಿಶಾ ಪಟಾನಿ, ಕಾಜಲ್ ಅಗರವಾಲ್, ಪ್ರಣೀತಾ, ರಾಕುಲ್ ಪ್ರೀತ್ ಸಿಂಗ್ ಸೇರಿದಂತೆ ಅನೇಕ ನಟಿಯರು ಮಾಲ್ಡೀವ್ಸ್ಗೆ ಭೇಟಿ ನೀಡಿದ್ದರು. ಇದೀಗ ಬಾಲಿವುಡ್ ನಟಿ ಡೈಸಿ ಷಾ ಮಾಲ್ಡೀವ್ಸ್ ಬೀಚ್ನಲ್ಲಿ ಬಿಕಿನಿ ತೊಟ್ಟು ಕ್ಯಾಮೆರಾಗೆ ಪೋಸ್ ನೀಡಿದ್ದಾರೆ.
ಕಪ್ಪು ಬಣ್ಣದ ಬಿಕಿನಿ ತೊಟ್ಟು, ತಲೆಗೆ ಹ್ಯಾಟ್ ಧರಿಸಿ ಬಿಸಿಲಿಗೆ ಮೈ ಒಡ್ಡಿರುವ ಫೋಟೋವನ್ನು ಡೈಸಿ ಷಾ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುವ ಮೂಲಕ ಪಡ್ಡೆ ಹುಡುಗರ ಹೃದಯಕ್ಕೆ ಕಿಚ್ಚು ಹಚ್ಚಿದ್ದಾರೆ. ಮಾಲ್ಡೀವ್ಸ್ನಲ್ಲಿ ಸಖತ್ ಎಂಜಾಯ್ ಮಾಡುತ್ತಿರುವ ಡೈಸಿ ಸಾಕಷ್ಟು ಫೋಟೋಗಳನ್ನು ಸಹ ಶೇರ್ ಮಾಡಿಕೊಂಡಿದ್ದು, ವೈರಲ್ ಆಗಿವೆ. ಡೈಸಿ ಷಾ ಅವರ ಮಾದಕ ನೋಟಕ್ಕೆ ಫಿದಾ ಆಗಿರುವ ಅಭಿಮಾನಿಗಳು ಲೈಕ್ಸ್ಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.
ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ ಕನ್ನಡಿಗರಿಗೂ ಪರಿಚಿತರಾಗಿರುವ ಡೈಸಿ ಷಾ, 2011ರಲ್ಲಿ ನಟ ಪ್ರಜ್ವಲ್ ದೇವರಾಜ್ ಅಭಿನಯದ ಭದ್ರ ಚಿತ್ರದ ಮೂಲಕವೇ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಜಗ್ಗೇಶ್ ಅಭಿನಯದ ಬಾಡಿಗಾರ್ಡ್ ಚಿತ್ರದಲ್ಲೂ ನಾಯಕಿಯಾಗಿ ನಟಿಸಿದ್ದಾರೆ. ಸುದೀಪ್ ಅಭಿನಯದ ಬಚ್ಚನ್ ಸಿನಿಮಾದಲ್ಲಿ ಐಟಂ ಸಾಂಗ್ ಒಂದಕ್ಕೆ ಸೊಂಟ ಬಳುಕಿಸಿದ್ದಾರೆ. ಹಿಂದಿಯಲ್ಲಿ ಜೈಹೋ, ರೇಸ್ 3 ಮತ್ತು ಹೇಟ್ ಸ್ಟೋರಿ 3ರಲ್ಲಿ ನಟಿಸಿದ್ದಾರೆ. (ಏಜೆನ್ಸೀಸ್)