

ಹೈದರಾಬಾದ್: ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಅವರ ಇತ್ತೀಚಿನ ಫೋಟೋಶೂಟ್ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಪ್ರಖ್ಯಾತ ಮ್ಯಾಗಜಿನ್ ಒಂದರ ಕವರ್ ಪೇಜ್ಗಾಗಿ ರಶ್ಮಿಕಾ ಹಾಟ್ ಆ್ಯಂಡ್ ಬೋಲ್ಡ್ ಫೋಟೋಶೂಟ್ ಮಾಡಿಸಿದ್ದಾರೆ.
ಟ್ರಾವೆಲ್ ಆ್ಯಂಡ್ ಲೀಸರ್ ಇಂಡಿಯಾ, ಇನ್ಸ್ಟಾಗ್ರಾಂನಲ್ಲಿ ರಶ್ಮಿಕಾ ಹೊಸ ಫೋಟೋಗಳನ್ನು ಶೇರ್ ಮಾಡಿಕೊಂಡಿದೆ. ಪಶ್ಚಿಮ ಆಸ್ಟ್ರೇಲಿಯಾದ ಸುಂದರ ತಾಣಗಳಲ್ಲಿ ಸೆರೆಹಿಡಿದಿರುವ ಫೋಟೋಗಳು ಇದಾಗಿವೆ.
ಹಳದಿ ಬಣ್ಣದ ತುಂಡುಡುಗೆಯಲ್ಲಿ ಮಾದಕ ಪೋಸ್ ನೀಡಿರುವ ಫೋಟೋ ಕುರಿತು "ನಮ್ಮ ಕವರ್ ಸ್ಟಾರ್ ರಶ್ಮಿಕಾ ಮಂದಣ್ಣ ಅವರ ಪ್ರವಾಸದ ಪ್ರಮುಖ ಅಂಶಗಳಲ್ಲಿ ಪರ್ತ್ (@westernaustralia)ಬೀಚ್‌ಗಳನ್ನು ಅನ್ವೇಷಿಸುವುದು ಕೂಡ ಒಂದು ಎಂದು ಟ್ರಾವೆಲ್ ಆ್ಯಂಡ್ ಲೀಸರ್ ಇಂಡಿಯಾ ತನ್ನ ಇನ್ಸ್ಟಾಗ್ರಾಂ ಪೇಜ್ನಲ್ಲಿ ಬರೆದುಕೊಂಡಿದೆ.
ಸೈಕಲ್ ಏರಿ ಬರುತ್ತಿರುವ ಮತ್ತೊಂದು ಫೋಟೋ ಕುರಿತು "ಇದು ಸುಂದರ, ಸ್ವಚ್ಛ, ವಿಶ್ರಾಂತಿ ಮತ್ತು ಎಲ್ಲರನ್ನು ಆಹ್ವಾನಿಸುವಂತಿದೆ. ಇದು ಗಡಿಬಿಡಿ ಮುಕ್ತವಾಗಿರುವುದರಿಂದ ಈ ಸ್ಥಳವನ್ನು ನಾನು ಪ್ರೀತಿಸುತ್ತೇನೆ. ಇಲ್ಲಿ ನಾನು ಕ್ವಾಕ್ಕಾಗಳನ್ನು ಭೇಟಿಯಾದೆ ಮತ್ತು ರಾಟ್‌ನೆಸ್ಟ್ (@westernaustralia) ದ್ವೀಪದ ಪ್ರೀತಿಯಲ್ಲಿ ಬಿದ್ದೆ. ನೀವು ಸುಲಭವಾಗಿ ಬದುಕುವ ಮತ್ತು ಆರೋಗ್ಯಕರ ಜೀವನವನ್ನು ನಡೆಸುವ ಸ್ಥಳಗಳಲ್ಲಿ ಇದು ಕೂಡ ಒಂದಾಗಿದೆ ಎಂದು ರಶ್ಮಿಕಾ ಹೇಳಿದ್ದಾರೆ.
ಮತ್ತೊಂದು ಫೋಟೋದಲ್ಲಿ ಬಹುವರ್ಣದ ಉಡುಪಿನಲ್ಲಿ ರಶ್ಮಿಕಾ ಪೋಸ್ ನೀಡಿದ್ದು, ರಶ್ಮಿಕಾ ಮಂದಣ್ಣ ರಾಟ್‌ನೆಸ್ಟ್ ದ್ವೀಪದ (@westernaustralia) ಪಿಂಕಿ ಬೀಚ್‌ನ ಮೇಲಿರುವ ಬಾಥರ್ಸ್ಟ್ ಲೈಟ್‌ಹೌಸ್ ಮುಂದೆ ಪೋಸ್ ನೀಡಿದ್ದಾರೆ ಎಂದು ಟ್ರಾವೆಲ್ ಆ್ಯಂಡ್ ಲೀಸರ್ ಇಂಡಿಯಾ ಬರೆದುಕೊಂಡಿದೆ. ರಶ್ಮಿಕಾ ಮಂದಣ್ಣ ಅವರು ಸಹ ತಮ್ಮ ಇನ್ಸ್ಟಾಗ್ರಾಂನಲ್ಲಿ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.
ಸಿನಿಮಾ ವಿಚಾರಕ್ಕೆ ಬಂದರೆ, ತುಂಬಾ ಬಿಜಿಯಾಗಿರುವ ರಶ್ಮಿಕಾ ಸದ್ಯ ಪುಷ್ಪ 2 ಮತ್ತು ದಿ ಗರ್ಲ್ ಫ್ರೆಂಡ್ ರೇನ್‌ಬೋ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. (ಏಜೆನ್ಸೀಸ್)