

ವಿಜಯವಾಣಿ ಸುದ್ದಿಜಾಲ ಬೆಂಗಳೂರು
‘ಲವ್ ಮಾಕ್ಟೇಲ್ 2’ ಮೂಲಕ ’ಸಿಹಿ’ಯಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟಿ ರೇಚಲ್ ಡೇವಿಡ್. ಸದ್ಯ ‘ಶೆಫ್ ಚಿದಂಬರ’ ಸೇರಿ ಕನ್ನಡದ ಮೂರು ಚಿತ್ರಗಳು ಸೇರಿದಂತೆ ತಮಿಳು ಚಿತ್ರರಂಗದಲ್ಲೂ ಬಿಜಿಯಾಗಿದ್ದಾರೆ. ಇತ್ತೀಚೆಗಷ್ಟೆ ವಿಜಯವಾಣಿ ಜತೆ ಮಾತಿಗೆ ಸಿಕ್ಕ ಅವರು, ಮುಂದಿನ ಸಿನಿಮಾ, ಪಾತ್ರಗಳು, ಹವ್ಯಾಸ, ಹಲವು ಕುತೂಹಲಕಾರಿ ವಿಷಯಗಳ ಬಗ್ಗೆ ಮಾತನಾಡಿದ್ದಾರೆ.
ಇದನ್ನೂ ಓದಿ : BBKS10; ಕ್ಯಾಪ್ಟನ್ ಸ್ನೇಹಿತ್ಗೆ ಕಠಿಣ ಶಿಕ್ಷೆ?
*‘ಶೆಫ್ ಚಿದಂಬರ’ ಅನುಭವ ಹೇಗಿತ್ತು?
-ಈ ಟೀಮ್ ಪ್ಲ್ಯಾನಿಂಗ್ ಬಹಳ ಇಷ್ಟವಾಯಿತು. ಇಷ್ಟು ಜನ ಕಲಾವಿದರನ್ನು ಸೇರಿಸಿ 29 ದಿನಗಳಲ್ಲಿ ಶೂಟಿಂಗ್ ಮುಗಿಸುವುದು ಸಾಮಾನ್ಯದ ವಿಷಯವಲ್ಲ. ತಾಂತ್ರಿಕ ವರ್ಗ ಸೇರಿ ಎಲ್ಲರೂ ಅದ್ಭುತವಾಗಿ ಕೆಲಸ ಮಾಡಿದ್ದಾರೆ.