ಬಹುಭಾಷಾ ನಟಿ ನಿತ್ಯಾ ಮೆನನ್ ‘ಸಿಂಗಲ್’ ಸಾಹಸ...

Nithya-Menon-e1586724347643
Published on

ಬೆಂಗಳೂರು: ಈಗಾಗಲೇ ತಮ್ಮ ಹಲವು ಸಿನಿಮಾಗಳ ಹಾಡಿಗೆ ತಾವೇ ಧ್ವನಿ ನೀಡಿದ್ದರು ಬಹುಭಾಷಾ ನಟಿ ನಿತ್ಯಾ ಮೆನನ್. ಇದೀಗ ಮತ್ತೆ ಅಂಥದ್ದೆ ಪ್ರಯತ್ನ ಮಾಡಿದ್ದಾರೆ. ಆದರೆ, ಆ ಪ್ರಯತ್ನ ಹಿಂದೆಂದಿಗಿಂತಲೂ ಹೊಸದು. ಅಂದರೆ, ಮೊದಲ ಬಾರಿ ಇಂಗ್ಲೀಷ್ ಸಾಹಿತ್ಯಕ್ಕೆ ನಿತ್ಯಾ ಧ್ವನಿ ಕೊಟ್ಟಿದ್ದಾರೆ.

ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿರುವ ಸಂಗೀತ ನಿರ್ದೇಶಕ ರಘು ದೀಕ್ಷಿತ್ ಅವರ ಸ್ಟುಡಿಯೋಗೆ ಆಗಮಿಸಿದ್ದ ನಿತ್ಯಾ, ನಿರ್ದೇಶಕ ಅನಿ ಸಸಿ ಆ್ಯಕ್ಷನ್- ಕಟ್ ಹೇಳುತ್ತಿರುವ ‘ನಿನ್ನಿಲಾ ನಿನ್ನಿಲಾ’ ಚಿತ್ರದಲ್ಲಿ ಭೂಮಿಕೆ ನಿಭಾಯಿಸಿದ್ದಾರೆ. ಆ ಚಿತ್ರದ ಹಾಡೊಂದನ್ನು ಹಾಡಿರುವ ಅವರು, ಇದೇ ವೇಳೆ ಮೊದಲ ಬಾರಿಗೆ ಇಂಗ್ಲಿಷ್ ಗೀತೆಯನ್ನು ಹಾಡಿರುವ ಬಗ್ಗೆ ಹೇಳಿಕೊಂಡಿದ್ದಾರೆ.

ಸದ್ಯಕ್ಕೆ ಆ ಹಾಡು ರೆಡಿಯಾಗಿದ್ದು, ಇನ್ನೇನು ಅದಕ್ಕೆ ಸರಿಹೊಂದುವಂತೆ ದೃಶ್ಯಗಳನ್ನು ಸೆರೆಹಿಡಿಯಬೇಕಿದೆಯಂತೆ. ಇಂಗ್ಲೆಂಡ್ ಮೂಲದ ಸೌಮುಖ್ ದತ್ತ ಈ ಹಾಡಿಗೆ ಸಾಥ್ ನೀಡಿದ್ದು, ಅವರ ಭಾಗದ ಚಿತ್ರೀಕರಣ ಇಂಗ್ಲೆಂಡ್‌ನಲ್ಲಿ ನಡೆಯಲಿದೆಯಂತೆ.

ಸದ್ಯ ತೆಲುಗು ಮತ್ತು ತಮಿಳಿನಲ್ಲಿ ಹಲವು ಪ್ರಾಜೆಕ್ಟ್‌ಗಳನ್ನು ಒಪ್ಪಿಕೊಂಡಿರುವ ನಿತ್ಯಾ, ಇನ್ನು ಕೆಲ ದಿನಗಳಲ್ಲಿ ಅವುಗಳ ಶೂಟಿಂಗ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net