ಹಣವೇ ಮುಖ್ಯವಲ್ಲ ; ಫಾಸ್ಟ್​ಫುಡ್​ಗೆ ಪ್ರಚಾರ ನೀಡುವುದಿಲ್ಲವೆಂದ ಕಾವ್ಯ ಶಾಸ್ತ್ರಿ

Kavya Shasthri (3)
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಉತ್ಪನ್ನಗಳನ್ನು ತಾವು ಬಳಸದಿದ್ದರೂ ಹಣ ಪಡೆದು ಜಾಹೀರಾತುಗಳಲ್ಲಿ, ಜಾಲತಾಣಗಳ ಮೂಲಕ ಪ್ರಚಾರ ಮಾಡುವ ಸೆಲೆಬ್ರಿಟಿಗಳು, ಸಾಮಾಜಿಕ ಜಾಲತಾಣಗಳ ಪ್ರಭಾವಿಗಳಿಗೇನೂ ಕೊರತೆಯಿಲ್ಲ. ಆದರೆ, ನಟಿ ಕಾವ್ಯ ಶಾಸ್ತ್ರಿ ಆ ವಿಷಯದಲ್ಲಿ ಭಿನ್ನ. ಏಕೆಂದರೆ, ಅವರು ಬಳಸುವ ವಸ್ತುಗಳು ಅಥವಾ ಜನರಿಗೆ ಉಪಯೋಗವಾಗುವ ವಿಷಯಗಳನ್ನಷ್ಟೇ ಕಾವ್ಯ ಜಾಲತಾಣದಲ್ಲಿ ಪ್ರಮೋಟ್ ಮಾಡುತ್ತಾರೆ. ಅದಕ್ಕೆ ಉದಾಹರಣೆ ಎಂಬಂತೆ ಇತ್ತೀಚೆಗಷ್ಟೆ ಕಾವ್ಯಗೆ ಹೆಸರಾಂತ ಮಾಂಸಾಹಾರಿ ಫಾಸ್ಟ್​ ಫುಡ್​ ರೆಸ್ಟೋರೆಂಟ್​ ಕಡೆಯಿಂದ ‘ಜಾಲತಾಣದಲ್ಲಿ ಪ್ರಚಾರ ಮಾಡಲು ಹಣ ಎಷ್ಟು ಪಡೆಯುತ್ತೀರಿ?’ ಎಂದು ಕೇಳಿದ್ದಾರೆ.

ಅದಕ್ಕೆ ಕಾವ್ಯ, ‘ನಾನು ಸಸ್ಯಾಹಾರಿ. ನಿಮ್ಮ ಸಂಸ್ಥೆ ಕೆಲಸ ಮಾಡುವ ಹಾಗೂ ಪ್ರಾಣಿಗಳನ್ನು ವಧಿಸುವ ರೀತಿ ನನಗಿಷ್ಟವಾಗುವುದಿಲ್ಲ. ಹೀಗಾಗಿ ನಾನು ಪ್ರಚಾರ ಮಾಡುವುದಿಲ್ಲ’ ಎಂದು ಉತ್ತರಿಸಿದ್ದಾರೆ. ಜತೆಗೆ ‘ಎಷ್ಟೇ ಹಣ ಕೊಡಲಿ ನೈತಿಕತೆಯನ್ನು ಬಿಡಬಾರದು. ನಾನು ಬಳಸದ ಅಥವಾ ನನ್ನ ಕುಟುಂಬದವರಿಗೆ ಶಿಾರಸು ಮಾಡದ ಉತ್ಪನ್ನಗಳನ್ನು ನಾನೆಂದೂ ಪ್ರಮೋಟ್ ಮಾಡುವುದಿಲ್ಲ. ಹಾಗೇ ನಾನು ಪ್ರಚಾರ ಮಾಡುವ ಉತ್ಪನ್ನಗಳು, ಸೇವೆಗಳ ಗುಣಮಟ್ಟದ ಬಗ್ಗೆ ನಾನು ದೃಢೀಕರಿಸುತ್ತೇನೆ’ ಎಂದು ಸೆಲೆಬ್ರಿಟಿಗಳು ಹಾಗೂ ಜಾಲತಾಣದ ಇನ್‌ಲ್ೂಯೆನ್ಸರ್‌ಗಳಿಗೆ ಕಿವಿಮಾತು ಹೇಳಿದ್ದಾರೆ.

ತಮಿಳು ಧಾರಾವಾಹಿ ಒಪ್ಪಲಿಲ್ಲ!
ಇತ್ತೀಚೆಗಷ್ಟೆ ಕಾವ್ಯಗೆ ತಮಿಳು ಧಾರಾವಾಹಿಯಲ್ಲಿ ನಟಿಸುವ ಆರ್ ಬಂದಿದ್ದು, ಅವರದನ್ನು ಒಪ್ಪಿಕೊಂಡಿಲ್ಲ. ‘ಕಾವೇರಿ ಹೋರಾಟದ ಈ ಸಂದರ್ಭದಲ್ಲಿ ನಾನು ತಮಿಳು ಧಾರಾವಾಹಿಯಲ್ಲಿ ನಟಿಸುವುದು ಸರಿ ಅಂತನ್ನಿಸಲಿಲ್ಲ. ಹೀಗಾಗಿ ಒಪ್ಪಿಕೊಳ್ಳಲಿಲ್ಲ. ಕಾವೇರಿಯ ವಿಷಯದಲ್ಲಿ ಕನ್ನಡಿಗರಿಗೆ ಗೆಲುವಾಗಲಿ, ನಂತರ ತಮಿಳಿನಲ್ಲಿ ನಟಿಸುವ ಬಗ್ಗೆ ಯೋಚಿಸುತ್ತೇನೆ’ ಎನ್ನುತ್ತಾರೆ ಕಾವ್ಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net