More

    ಸಿನಿಮಾ ಸೆನ್ಸಾರ್​ ಮಾಡಲು ಲಂಚಕ್ಕೆ ಬೇಡಿಕೆ; ನಟ ವಿಶಾಲ್​ ಆರೋಪದ ಬೆನ್ನಲ್ಲೇ ತನಿಖೆಗೆ ಆದೇಶಿಸಿದ MIB

    ಚೆನ್ನೈ: ತಾವು ನಟಿಸಿರುವ ಮಾರ್ಕ್​ ಆಂಟೋನಿ ಚಿತ್ರದ ಹಿಂದಿ ಅವತರಣಿಕೆಯ ಪ್ರಮಾಣಪತ್ರ ಪಡೆಯಲು ಸೆಂಟರ್​ ಬೋರ್ಟ್​ ಆಫ್​ ಫಿಲ್ಮ್​ ಸರ್ಟಿಫಿಕೇಷನ್​ಗೆ 6.5 ಲಕ್ಷ ರೂಪಾಯಿ ಹಣ ಲಂಚ ನೀಡಿರುವುದಾಗಿ ನಟ ವಿಶಾಲ್​ ಆರೋಪಿಸಿರುವ ಬೆನ್ನಲ್ಲೇ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯ ತನಿಖೆಗೆ ಆದೇಶಿಸಿದೆ.

    ಇತ್ತ ನಟ ವಿಶಾಲ್​ ಆರೋಪ ಚಿತ್ರರಂಗದಲ್ಲಿ ಹೊಸ ಸಂಚಲನ ಒಂದನ್ನು ಸೃಷ್ಟಿಸಿದ್ದು, CBFCಯ ಮಾತೃ ಸಂಸ್ಥೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಪ್ರತಿಕ್ರಿಯಿಸಿದೆ. ನಟ ವಿಶಾಲ್​ ಅವರು ಮಾಡಿರುವ ಆರೋಪ ದುರದೃಷ್ಟಕರವಾದದ್ದು, ಈ ಸಂಬಂಧ ತನಿಖೆಗೆ ಆದೇಶಿಸಲಾಗುವುದು ಎಂದು ತಿಳಿಸಿದೆ.

    ಇದನ್ನೂ ಓದಿ: ಹೆಣ್ಣು ಮಗುವಿಗೆ ಜನ್ಮ ನೀಡಿದ ನಟಿ ಸ್ವರಾ ಭಾಸ್ಕರ್; ವಿವಾದ ಸೃಷ್ಟಿಸಿದ ಮಗಳ ಹೆಸರು

    ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಪ್ರತಿಕ್ರಿಯಿಸಿರುವ MIB ಸರ್ಕಾರ ಭ್ರಷ್ಟಾಚಾರದ ವಿರುದ್ಧ ಶೂನ್ಯ ಸಹಿಷ್ಣುತೆಯನ್ನು ಹೊಂದಿದೆ. ಒಂದು ವೇಳೆ ಅಂತಹದ್ದು ಏನಾದರೂ ಕಂಡು ಬಂದರೆ ಅಂತಹವರ ವಿರುದ್ಧ ಕಠಿಣ ಕ್ರಮ ಜರುಗಿಸುತ್ತೇವೆ. ವಿಶಾಲ್​ ಅವರು ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆಗೆ ಆದೇಶಿಲಾಗಿದ್ದು, ಹಿರಿಯ ಅಧಿಕಾರಿಯೊಬ್ಬರನ್ನು ನೇಮಿಸಲಾಗಿದೆ. ಒಂದು ವೇಳೆ CBFC ಅಥವಾ ಅದರ ಹೆಸರಿನಲ್ಲಿ ಯಾರಾದರೂ ಕಿರುಕುಳ ನೀಡಿದರೆ [email protected]ಗೆ ದೂರು ಸಲ್ಲಿಸಬಹುದು ಎಂದು ತಿಳಿಸಿದೆ.

    ಈ ಕುರಿತು ವಿಡಿಯೋ ಹೇಳಿಕೆ ಒಂದನ್ನು ಬಿಡುಗಡೆ ಮಾಡಿರುವ ಅವರು, ತಾವು ಮಾಡುತ್ತಿರುವ ಆರೋಪಗಳಿಗೆ ತಮ್ಮ ಬಳಿ ಪುರಾವೆಗಳಿರುವುದಾಗಿ ನಟ ವಿಶಾಲ್​ ತಿಳಿಸಿದ್ದಾರೆ. ಸೆಪ್ಟೆಂಬರ್​ 15ರಂದು ತಮಿಳು ಹಾಗೂ ತೆಲುಗು ಭಾಷೆಯಲ್ಲಿ ಮಾರ್ಕ್​ ಆಂಟೋನಿ ಬಿಡುಗಡೆಯಾಗಿತ್ತು. ಸೆಪ್ಟೆಂಬರ್​ 28ರಂದು ಹಿಂದಿ ಅವತರಣಿಕೆ ಬಿಡುಗಡೆಯಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts