ಮುಂಬೈ: ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಸೆಪ್ಟೆಂಬರ್ 23ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ಧಾರೆ. ತಾಯಿ-ಮಗು ಇಬ್ಬರು ಆರೋಗ್ಯವಾಗಿದ್ದಾರೆ ಎಂದು ಸ್ವರಾ ಅವರ ಪತಿ ಫಹಾದ್ ಅಹ್ಮದ್ ತಿಳಿಸಿದ್ಧಾರೆ.
ಮಗುವಿನ ಜೊತೆ ಇರುವ ಫೋಟೋವನ್ನು ನಟಿ ಸ್ವರಾ ಭಾಸ್ಕರ್ ಹಂಚಿಕೊಂಡಿದ್ದಾರೆ. ನಮ್ಮ ಪ್ರಾರ್ಥನೆಗಳು ಕೇಳಿಬಂದಿದ್ದು, ನಮ್ಮ ಮಗಳು 23 ಸೆಪ್ಟೆಂಬರ್ 2023 ರಂದು ಜನಿಸಿದ್ದಾರೆ. ಇದು ನಮ್ಮಿಬ್ಬರಿಗೂ ಹೊಸ ಪ್ರಪಂಚ ಎಂದು ನಟಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಸ್ವರಾ ಭಾಸ್ಕರ್ ಮತ್ತು ಫಹಾದ್ ಅಹ್ಮದ್ ತಮ್ಮ ಮಗಳಿಗೆ ರಬಿಯಾ ಎಂದು ಹೆಸರಿಟ್ಟಿದ್ದಾರೆ. ಇತ್ತ ಸ್ವರಾ ದಂಪತಿಗಳು ತಮ್ಮ ಮಗಳ ಹೆಸರನ್ನೂ ರಿವೀಲ್ ಮಾಡುತ್ತಿದ್ದಂತೆ ಹಲವರು ಆಕ್ಷೇಪ ವ್ಯಜ್ತಪಡಿಸಿದ್ದು, ನಿಮ್ಮಗೆ ತಾಕತ್ ಇದ್ದರೆ ಹಿಂದೂ ಹೆಸರಿಡಿ ಎಂದು ಸವಾಲೆಸೆದಿದ್ದಾರೆ.
ಇದನ್ನೂ ಓದಿ: ಮಜಾಫರ್ನಗರ ಶಾಲಾ ಪ್ರಕರಣ; ಉತ್ತರಪ್ರದೇಶ ಸರ್ಕಾರಕ್ಕೆ ಚಾಟಿ ಬೀಸಿದ ಸುಪ್ರೀಂ ಕೋರ್ಟ್
ಈಗಾಗಲೇ ಹಿಂದೂ ಯುವತಿಯರನ್ನು ವಿವಾಹವಾಗಿರುವ ಮುಸ್ಲಿಂ ನಟರನ್ನು ಈ ಕೇಸ್ನಲ್ಲಿಯೂ ಎಳೆದುತಂದಿರುವ ಟ್ರೋಲಿಗರು, ಹೇಗೆ ತಮ್ಮ ಮಕ್ಕಳನ್ನು ಖಾನ್ ಮಾಡಿದರೋ ಹಾಗೆಯೇ ನೀವೂ ಮಾಡಿದಿರಿ ಬಿಡಿ ಎನ್ನುತ್ತಿದ್ದಾರೆ. ಒಟ್ಟಿನಲ್ಲಿ, ನಟಿ ಅಮ್ಮನಾದ ಖುಷಿಯಲ್ಲಿದ್ದರೂ ಟ್ರೋಲಿಗರು ಸುಮ್ಮನಿರಲು ಬಿಡುತ್ತಿಲ್ಲ.
ನಟಿ ಸ್ವರಾ ಭಾಸ್ಕರ್ 2023ರ ಫೆಬ್ರವರಿ 16ರಂದು ಸಮಾಜವಾದಿ ಪಕ್ಷದ ನಾಯಕ ಫಹಾದ್ ಅಹ್ಮದ್ ಅವರನ್ನು ವಿವಾಹವಾದರು. ಇದೀಗ ನಟಿ ಸ್ವರಾ ಭಾಸ್ಕರ್ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.