More

    VIDEO| ಬ್ಯಾಕ್​ಫ್ಲಿಪ್​ ಮಾಡಲು ಹೋಗಿ ಫೇಲ್​; ಇದರ ಅಗತ್ಯತೆ ಏನಿತ್ತು ಎಂದ ನೆಟ್ಟಿಗರು

    ನವದೆಹಲಿ: ಇತ್ತೀಚಿನ ದಿನಗಳಲ್ಲಿ ದೆಹಲಿ ಮೆಟ್ರೋದ ಸಾಕಷ್ಟು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸದ್ದು ಮಾಡುತ್ತಿದ್ದು, ರೈಲಿನ ಬೋಗಿಯೊಳಗೆ ವಿಡಿಯೋ ಚಿತ್ರೀಕರಣದ ನಿಷೇಧದ ಹೊರಾತಗಿಯೂ ಇದೊಂದು ಪ್ರವೃತ್ತಿಯಾಗಿ ಮಾರ್ಪಟ್ಟಿದೆ.

    ಇದೀಗ ಘಟನೆಯೊಂದರಲ್ಲಿ ವ್ಯಕ್ತಿಯೋರ್ವ ಬ್ಯಾಕ್​ಫ್ಲಿಪ್​ ಸ್ಟಂಟ್​​ ಮಾಡಲು ಹೋಗಿ ವಿಫಲವಾಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ವ್ಯಕ್ತಿಯ ನಡೆಗೆ ಸಾಕಷ್ಟು ಟೀಕೆ ವ್ಯಕ್ತವಾಗಿದ್ದು, ಇದರ ಅವಶ್ಯಕತೆಯಾದರೂ ಏನಿತ್ತು ಎಂದು ಹಲವರು ಪ್ರಶ್ನಿಸಿದ್ದಾರೆ.

    ಈ ವಿಡಿಯೋವನ್ನು ಚಮನ್​ ಬ್ಯಾಕ್​ಫ್ಲಿಪರ್​ ಎಂಬುವವರು ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದು, ಮೆಟ್ರೋ ಮೇ ಚೋಟ್ ಲಗ್ ಗೈ. (ಮೆಟ್ರೋದಲ್ಲಿ ಗಾಯಗೊಂಡಿದ್ದೇನೆ) ಎಂದು ಬರೆದುಕೊಂಡಿದ್ದಾರೆ.

    ಇದನ್ನೂ ಓದಿ: ಕಾಂಗ್ರೆಸ್​ ಅಧಿಕಾರಕ್ಕೆ ಬಂದರೆ ರಾಜ್ಯ ಹಾಳಾಗುವುದು ನಿಶ್ಚಿತ: ಪ್ರಧಾನಿ ನರೇಂದ್ರ ಮೋದಿ

    ಇತ್ತ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್​ ಆಗುತ್ತಿದ್ದಂತೆ ಹಲವರು ವ್ಯಕ್ತಿಯ ನಡೆಯನ್ನು ಟೀಕಿಸಿದ್ದು, ಈ ರೀತಿಯ ಅಧಿಕಪ್ರಸಂಗತನದ ಕೆಲಸಗಳನ್ನು ಮಾಡುವ ಬದಲು ಸುಮ್ಮನೆ ಇರುವುದೇ ಲೇಸು ಎಂದಿದ್ದಾರೆ. ಅದಲ್ಲದೆ ಜನರು ಈ ರೀತಿಯ ವಿಡಿಯೋಗಳನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಏಕೆ ಹರಿಬಿಡುತ್ತಿದ್ದಾರೆ ಎಂದು ಕೆಲವರು ಆಕ್ಷೇಪಿಸಿದ್ದಾರೆ.

    ಇಂತಹ ವ್ಯಕ್ತಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿ. ಸಾರ್ವಜನಿಕ ಸ್ಥಳಗಳಲ್ಲಿ ಈ ರೀತಿ ಮಾಡುವುದು ಅಪಾಯಕಾರಿ. ಈ ರಿತಿಯ ಸಾಹಸಗಳನ್ನು ಹೇಗೆ ಮಾಡಬೇಕೆಂದು ನಿಮಗೆ ಗೊತ್ತಿಲದಿರುವಾಗ ಇದನ್ನು ಮಾಡು ಎಂದು ಹೇಳಿದವರು ಯಾರು ಸುಮ್ಮನೆ ಮೂರ್ಖರಂತೆ ವರ್ತಿಸಬೇಡಿ ಎಂದು ಹಲವರು ವೈರಲ್​ ವಿಡಿಯೋಗೆ ಕಮೆಂಟ್​ ಮಾಡಿ ಕಿಡಿಕಾರಿದ್ಧಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts