More

    ಪ್ಲಾಟ್​​ಫಾರ್ಮ್​ಗೆ ರೈಲು ಡಿಕ್ಕಿ ಪ್ರಕರಣ​; ಸಿಸಿಟಿವಿಯಲ್ಲಿ ಸೆರೆಯಾಯ್ತು ಸಹಾಯಕನ ಎಡವಟ್ಟು

    ಮಥುರಾ: ಮಥುರಾ ಜಂಕ್ಷನ್​ನಲ್ಲಿ ಮಂಗಳವಾರ ನಡೆದಿದ್ದ ಎಲಕ್ಟ್ರಿಕ್​ ಮಲ್ಟಿಪಲ್​ ಯೂನಿಟ್​ (EMU) ಅವಘಡಕ್ಕೆ ಸಂಬಂಧಿಸಿದಂತೆ ತನಿಖೆ ವೇಳೆ ಸ್ಪೋಟಕ ವಿಚಾರ ಒಂದು ಹೊರಬಿದಿದ್ದು, ಈ ಸಂಬಂಧ ಐವರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.

    ಸಿಬ್ಬಂದಿಯ ಅಜಾಗರೂಕತೆಯಿಂದಾಗಿ ರೈಲು ಫ್ಲಾಟ್​ಫಾರ್ಮ್​ ಏರಿ ಹೋಗಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಘಟನೆಗೆ ಸಂಬಂಧಿಸಿದ ಫೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

    ವಿಡಿಯೋದಲ್ಲೇನಿದೆ ?

    ವೈರಲ್ ಆಗಿರುವ ವಿಡಿಯೋದಲ್ಲಿ ರೈಲು ಮಥುರಾ ಜಂಕ್ಷನ್​ ತಲುಪಿದ ಬಳಿಕ ಲೋಕೋಪೈಲಟ್​ ರೈಲನ್ನು ಎಲೆಕ್ಟ್ರಿಕ್​ ಹೆಲ್ಪರ್​ ಸಿಬ್ಬಂದಿಯ ನಿಗಾಕ್ಕೆ ಬಿಟ್ಟು ಕೆಳಗಿಳಿಯುವುದು ಕಂಡುಬರುತ್ತದೆ. ಸಚಿನ್​ ಎಂಬ ಸಿಬ್ಬಂದಿ ಎಲೆಕ್ಟ್ರಿಕ್​ ಹೆಲ್ಪರ್​ ಸಿಬ್ಬಂದಿ ರೈಲಿನ ​ಕ್ಯಾಬಿನ್​ ಪ್ರವೇಶಿಸುವ ವೇಳೆ ಫೋನ್​ ಬಳಸುತ್ತಾ ಬರುತ್ತಿರುವುದು ಕಂಡು ಬರುತ್ತದೆ.

    ಇದನ್ನೂ ಓದಿ: ಫುಟ್​ಬಾಲ್​ ಪಂದ್ಯದ ವೇಳೆ ಮೈದಾನಕ್ಕೆ ಬಡಿದ ಸಿಡಿಲು; ಇಬ್ಬರು ಸಾವು, ಮೂವರು ಚಿಂತಾಜನಕ

    ಬಳಿಕ ಆ ಸಿಬ್ಬಂದಿ ತನ್ನ ಬ್ಯಾಗನ್ನು ರೈಲಿನ ಇಂಜಿನ್​ ಹ್ಯಾಂಡಲ್​ಗೆ ನೇತು ಹಾಕಿ ಮೊಬೈಲ್​ನಲ್ಲಿ ವಿಡಿಯೋ ನೋಡುವುದನ್ನು ಮುಂದುವರೆಸುತ್ತಾನೆ. ಬ್ಯಾಗ್​ನ ಬಾರ್ಕಕೆ ರೈಲಿನ ಇಂಜಿನ್​ ಹ್ಯಾಂಡಲ್​ ಮುಂದಕ್ಕೆ ಜರುಗಿದ್ದು, ಏಕಾಏಕಿ ವೇಗವಾಗಿ ಚಲಿಸಲು ಶುರುವಾಗಿದ್ದು, ಮುಂದೆ ಇದ್ದ ತಡೆಗೋಡೆಗೆ ಡಿಕ್ಕಿ ಹೊಡೆದು ಫ್ಲಾಟ್​ಫಾರ್ಮ್​ ಏರಿ ನಿಂತಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

    ಈ ಕುರಿತು ಪ್ರತಿಕ್ರಿಯಿಸಿರುವ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ತೇಜ್​ಪ್ರಕಾಶ್​ ಅಗರ್​ವಾಲ್, ಸಿಬ್ಬಂದಿಯ ನಿರ್ಲಕ್ಷ್ಯದಿಂದಾಗಿ ಈ ಅವಘಡ ಸಂಭವಿಸಿದ್ದು, ಇಂಜಿನ್​ ಕೋಚ್​ನಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಸಂಪೂರ್ಣ ಘಟನೆ ಸೆರೆಯಾಗಿದೆ. ಈ ಸಂಬಂಧ ಐವರನ್ನು ಅಮಾನತು ಮಾಡಲಾಗಿದ್ದು, ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts