More

    ಎಐಎಡಿಎಂಕೆ-ಬಿಜೆಪಿ ಮೈತ್ರಿ ಕಡಿತ; ಕಳ್ಳರು ಯಾವತ್ತಿದ್ದರೂ ಒಂದೇ ಎಂದು ವ್ಯಂಗ್ಯವಾಡಿದ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್

    ಚೆನ್ನೈ: ಬಿಜೆಪಿ ನೇತೃತ್ವದ ಎನ್​ಡಿಎ ಮೈತ್ರಿಕೂಟದಿಂದ ಎಐಎಡಿಎಂಕೆ ಪಕ್ಷವು ಹೊರ ಬಂದ ಬೆನ್ನಲ್ಲೇ ಈ ಕ್ರಮವನ್ನು ಟೀಕಿಸಿರುವ ತಮಿಳುನಾಡು ಸಿಎಂ ಸ್ಟಾಲಿನ್ ಪುತ್ರ, ಸಚಿವ ಉದಯನಿಧಿ ಒಬ್ಬ ಕಳ್ಳ ಮತ್ತೊಬ್ಬ ದರೋಡೆಕೋರ ಇವರೆಲ್ಲರೂ ಯಾವತ್ತಿದ್ದರೂ ಒಂದೇ ಎಂದಿದ್ದಾರೆ.

    ತಮಿಳುನಾಡಿನ ಕೃಷ್ಣಗಿರಿಯಲ್ಲಿ ಡಿಎಂಕೆ ಪಕ್ಷದ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಉದಯನಿಧಿ, ಇವರು ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಚುನಾವಣೆ ಸಮಯದಲ್ಲಿ ಮಾತ್ರ ಈ ರೀತಿ ಮಾಡುವುದರಲ್ಲಿ ಏನು ಪ್ರಯೋಜನವಾಗುವುದಿಲ್ಲ ಎಂದು ಕಿಡಿಕಾರಿದ್ದಾರೆ.

    ಇದನ್ನೂ ಓದಿ: ಪತ್ರಕರ್ತರನ್ನು ಚೆನ್ನಾಗಿ ನೋಡಿಕೊಳ್ಳಿ, ಸಕಾರಾತ್ಮಕ ಪ್ರಚಾರಕ್ಕೆ ಉಪಯೋಗವಾಗುತ್ತದೆ ಎಂದ ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ

    ಈ ಕುರಿತು ಮಾತನಾಡಿರುವ ಸಚಿವ ಉದಯನಿಧಿ ಎಐಎಡಿಎಂಕೆ ನಾಯಕರು ಬಿಜೆಪಿಯೊಂದಿಗಿನ ಮೈತ್ರಿಯನ್ನು ಕಡಿದುಕೊಳ್ಳುವುದಾಘಿ ಘೋಷಿಸಿದ್ದಾರೆ. ಒಂದು ವೇಳೆ ನೀವು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡರೇನು ಬಿಟ್ಟರೇನು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಡಿಎಂಕೆ ಪಕ್ಷವು ಗೆಲ್ಲುವುದು ನಿಶ್ಚಿತ. ನೀವು ಇನ್ನೂ ಮುಂದೆ ಜನರಿಗೆ ಮೋಸ ಮಾಡಲು ಸಾಧ್ಯವಿಲ್ಲ.

    ಬಿಜೆಪಿ ಜೊತೆಗೆ ಎಐಎಡಿಎಂಕೆ ಮೈತ್ರಿ ಕಡಿದುಕೊಂಡಿರುವ ವಿಚಾರ ಸ್ವತಃ ಅವರ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ಹಾಗೂ ನಂಬಲು ಸಿದ್ದರಿಲ್ಲ. ಎಐಎಡಿಂಕೆ ನಾಯಕರು ಈ ರೀತಿ ಹೇಳುತ್ತಿರುವುದು ಇದೇ ಮೊದಲಲ್ಲ. ಅವರ ಪಕ್ಷದ ನಾಯಕರು ಹಾಗೂ ಮಾಜಿ ಸಚಿವೆ ವಿರುದ್ಧ ಗಲವು ಐಟಿ ಹಾಗೂ ಇಡಿ ಪ್ರಕರಣಗಳು ಬಾಕಿಯಿದ್ದು, ಚುನಾವಣೆ ವೇಳೆಗೆ ಮತ್ತ ಒಂದಾಗುತ್ತಾರೆ. ಯಾಕೆಂದರೆ ಒಬ್ಬ ಕಳ್ಳ, ಇನ್ನೊಬ್ಬ ದರೋಡೆಕೋರ ಒಬ್ಬರನ್ನೊಬ್ಬರು ಬಿಟ್ಟಿರಲು ಸಾಧ್ಯವಿಲ್ಲ ಎಂದು ಎಐಎಡಿಎಂಕೆ ಹಾಗೂ ಬಿಜೆಪಿ ಮೈತ್ರಿ ಕಡಿತದ ಕುರಿತು ಸಚಿವ ಉದಯನಿಧಿ ಸ್ಟಾಲಿನ್ ವ್ಯಂಗ್ಯವಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts