More

    ಪತ್ರಕರ್ತರನ್ನು ಚೆನ್ನಾಗಿ ನೋಡಿಕೊಳ್ಳಿ, ಸಕಾರಾತ್ಮಕ ಪ್ರಚಾರಕ್ಕೆ ಉಪಯೋಗವಾಗುತ್ತದೆ ಎಂದ ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ

    ಮುಂಬೈ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಬಗ್ಗೆ ಸಕಾರಾತ್ಮಕ ಪ್ರಚಾರವನ್ನು ಮಾಡಬೇಕಾಗಿದ್ದು, ಈ ನಿಟ್ಟಿನಲ್ಲಿ ನಾವು ಪತ್ರಕರ್ತರ ಜೊತೆ ಚೆನ್ನಾಗಿ ಇರಬೇಕಾಗುತ್ತದೆ. ಹಾಗಾಗಿ ಅವರನ್ನು ಢಾಭಾಗಳಿಗೆ ಕರೆದುಕೊಂಡು ಹೋಗಿ ಮತ್ತು ಅವರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಎಂದು ಮಹಾರಾಷ್ಟ್ರ ಬಿಜೆಪಿ ಘಟಕದ ಅಧ್ಯಕ್ಷ ಚಂದ್ರಶೇಖರ್ ಬವಂಕುಲೆ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

    ಇತ್ತೀಚಿಗೆ ಅಹ್ಮದ್​ನಗರ ಜಿಲ್ಲೆಯಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡುವ ವೇಳೆ ಚಂದ್ರಶೇಖರ್​ ಈ ಮಾತುಗಳನ್ನು ಆಡಿದ್ದು, ವಿಪಕ್ಷ ಮಹಾವಿಕಾಸ್​ಅಘಾಡಿ ನಾಯಕರು ದೊಡ್ಡ ಅಸ್ತ್ರವಾಗಿ ಉಪಯೋಗಿಸಿಕೊಂಡಿದ್ದಾರೆ.

    ವೈರಲ್​ ಆಗಿರುವ ಆಡಿಯೋದಲ್ಲಿ ನಿಮ್ಮ ಬೂತ್​ಗಳಲ್ಲಿ ಕೆಲವರು ಪಾರ್ಟ್​ ಟೈಮ್​ ವಿಡಿಯೋ ಜರ್ನಲಿಸ್ಟ್​ಗಳು ವಾಸಿಸುತ್ತಿದ್ದಾರೆ. ಣಿವು ಮೊದಲಿಗೆ ಅಂತಹವರ ಜೊತೆ ಸಂಪರ್ಕ ಸಾಧಿಸಿ ಅವರನ್ನು ಚೆನ್ನಾಗಿ ಇಟ್ಟುಕೊಳ್ಳಿ. ಕೆಲವೊಮ್ಮೆ ಸಣ್ಣ ವಿಚಾರವನ್ನು ಏನೋ ಆಗಿದೆ ಎಂಬಂತೆ ದೊಡ್ಡದಾಗಿ ಬಿಂಬಿಸುತ್ತಾರೆ.

    ಇದನ್ನೂ ಓದಿ: ಘಮಂಡಿಯಾ ಒಕ್ಕೂಟ ಅರ್ಧ ಮನಸ್ಸಿನಿಂದ ಮಹಿಳಾ ಮೀಸಲಾತಿ ಮಸೂದೆಯನ್ನು ಬೆಂಬಲಿಸಿವೆ: ಪ್ರಧಾನಿ ನರೇಂದ್ರ ಮೋದಿ

    ಇಂತಹ ಅಧಿಕಪ್ರಸಂಗತನ ಮಾಡುವವರನ್ನು ಮೊದಲು ನೀವು ಪತ್ತೆ ಹಚ್ಚಿ ಅವರನ್ನು ಢಾಬಾಕ್ಕೆ ಕರೆದುಕೊಂಡು ಹೋಗುತ್ತ ಇರಿ ಮತ್ತು ನಮ್ಮ ಬಗ್ಗೆ ಯಾವುದೇ ತರಹದ ನಕಾರಾತ್ಮಕ ವಿಚಾರಗಳನ್ನು ಬರೆಯದಂತೆ ನೋಡಿಕೊಳ್ಳಿ ಎಂದು ಕಾರ್ಯಕರ್ತರನ್ನು ಉದ್ದೇಶಿಸಿ ಹೇಳಿರುವ ಆಡಿಯೋ ಎಲ್ಲೆಡೆ ವೈರಲ್ ಆಗಿದೆ.

    ನಮ್ಮ ದೇಶದ ಸಂವಿಧಾನವು ನಾಲ್ಕು ಅಂಗಗಳನ್ನು ಹೊಂದಿದ್ದು, ಅವುಗಳಲ್ಲಿ ಪತ್ರಿಕೋದ್ಯಮ ಕೂಡ ಒಂದು. ಆದರೆ, ಬಿಜೆಪಿಯವರು ಪತ್ರಕರ್ತರ ರ್ದವನಿಯನ್ನು ಅಡಗಿಸಲು ಯತ್ನಿಸುತ್ತಿದ್ದಾರೆ. ಅದು ಯಾವ ಕಾರಣಕ್ಕೂ ಸಾಧ್ಯವಾಗುವುದಿಲ್ಲ ಎಂದು ಎನ್​ಸಿಪಿ ಕಾರ್ಯಾಧ್ಯಕ್ಷೆ ಸುಪ್ರಿಯಾ ಸುಲೆ ಕಿಡಿಕಾರಿದ್ದಾರೆ.

    ಇತ್ತ ಆಡಿಯೋ ವೈರಲ್​ ಆಗುತ್ತಿದ್ದಂತೆ ಸಮಾಜಾಯಿಷಿ ನೀಡಿರುವ ಬಿಜೆಪಿ ನಾಯಕರು ಅಧ್ಯಕ್ಷರ ಮಾತನ್ನು ತಪ್ಪಾಗಿ ಅರ್ಥೈಸಲಾಗಿದೆ. ಅವರು ಹೇಳಿರುವುದು ಪತ್ರಕರ್ತರು ನಮಗೆ ಅತಿಮುಖ್ಯವಾಗಿದ್ದು, ಅವರ ಪ್ರತಿಕ್ರಿಯೆಯನ್ನು ಪಡೆಯಬೇಕೆಂದು ಎಂದು ಹೇಳಲು ಹೋಗಿ ಆ ರೀತಿ ಮಾತನಾಡಿದ್ದಾರೆ. ಚಿಕ್ಕ ವಿಚಾರವನ್ನು ದೊಡ್ಡ ವಿವಾದವಾಗಿ ಸೃಷ್ಟಿಸುವುದು ಬೇಡ ಎಂದು ಹಿರಿಯ ಬಿಜೆಪಿ ನಾಯಕರೊಬ್ಬರು ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts