ಈ ಫೋಟೋದಲ್ಲಿರುವ ಬಾಲಕಿ ಯಾರು ಗೊತ್ತಾ? ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಮಿಂಚುತ್ತಿರುವ ಸೌತ್​ ಬ್ಯೂಟಿ ಈಕೆ! Actress Childhood Photo

Actress Childhood Photo
Published on

Actress Childhood Photo : ಸಿನಿಪ್ರಿಯರಿಗೆ ಹೀರೋ ಮತ್ತು ಹೀರೋಯಿನ್​ಗಳ ವೈಯಕ್ತಿಕ ಮಾಹಿತಿ ತಿಳಿದುಕೊಳ್ಳುವ ಕುತೂಹಲ ಇದ್ದೇ ಇರುತ್ತದೆ. ಅವರು ಬಳಸುವ ಕಾರುಗಳು, ದಿನನಿತ್ಯ ಜೀವನದಲ್ಲಿ ಅವರ ಹವ್ಯಾಸಗಳು, ಧರಿಸುವ ಬಟ್ಟೆ, ಮೊಬೈಲ್​ ಹಾಗೂ ವಾಚ್​ ಬೆಲೆ ಎಷ್ಟು? ವಾಸಿಸುವ ಮನೆ ಎಷ್ಟು ಬೆಲೆ ಬಾಳುತ್ತದೆ? ಮತ್ತು ಯಾವ ಯಾವ ವಸ್ತುಗಳನ್ನು ಆಗಾಗ ಬಳಕೆ ಮಾಡುತ್ತಾರೆ? ಎಂಬಿತ್ಯಾದಿ ವಿಚಾರಗಳನ್ನು ತಿಳಿದುಕೊಳ್ಳಲು ಬಯಸುತ್ತಾರೆ. ಇದಿಷ್ಟೇ ಅಲ್ಲದೆ, ಬಾಲ್ಯದಲ್ಲಿ ಹೇಗಿದ್ದರು? ಸಿನಿಮಾಗೆ ಬರುವ ಮುಂಚೆ ಹೇಗೆ ಕಾಣುತ್ತಿದ್ದರು ಎಂದು ತಿಳಿದುಕೊಳ್ಳುವ ಕುತೂಹಲವೂ ಜಾಸ್ತಿ ಇರುತ್ತದೆ.

ಪ್ರಸ್ತುತ ನಾವೊಂದು ಫೋಟೋವನ್ನು ನಿಮ್ಮ ಮುಂದೆ ಹಂಚಿಕೊಳ್ಳುತ್ತಿದ್ದೇವೆ. ಆ ಫೋಟೋವನ್ನು ನೀವು ಮೇಲೆ ನೋಡಬಹುದು. ಬಿಳಿ ಬಣ್ಣದ ಉಡುಗೆ ಧರಿಸಿ, ಹುಡುಗರ ಹೇರ್​ಸ್ಟೈಲ್​ನಲ್ಲಿ ಕ್ಯಾಮೆರಾಗೆ ಪೋಸ್​ ನೀಡುತ್ತಿರುವ ಪುಟ್ಟ ಬಾಲೆ ಇಂದು ಇಂದು ಪ್ಯಾನ್​ ಇಂಡಿಯಾ ನಟಿ. ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಬಿಜಿಯಾಗಿದ್ದಾರೆ. ನಟ ದುಲ್ಕರ್​ ಸಲ್ಮಾನ್​, ವಿಕ್ಟರಿ ವೆಂಕಟೇಶ್​, ಇಳಯದಳಪತಿ ವಿಜಯ್ ಹಾಗೂ ಅಡಿವಿ ಶೇಷಾ ಮುಂತಾದ ಸ್ಟಾರ್​ ನಟರೊಂದಿಗೆ ನಟಿಸಿರುವ ಈ ಚೆಲುವೆ. ಸಾಲು ಸಾಲು ಹಿಟ್​ ಸಿನಿಮಾಗಳನ್ನು ನೀಡಿದ್ದಾರೆ. ತಮ್ಮ ಗ್ಲಾಮರ್​ನಿಂದಲೇ ಸಿಕ್ಕಾಪಟ್ಟೆ ಸದ್ದು ಮಾಡಿದ್ದಾರೆ. ಅಲ್ಲದೆ, ನಟನೆಯಲ್ಲೂ ಸೈ ಎನಿಸಿಕೊಂಡಿದ್ದಾರೆ. 2018ರಲ್ಲಿ ಮಿಸ್​ ಇಂಡಿಯಾ ಫೆಮಿನಾ ಸ್ಪರ್ಧೆಯಲ್ಲಿ ಮೊದಲ ರನ್ನರ್​ ಅಪ್​ ಎನಿಸಿಕೊಂಡರು. ಇಷ್ಟೆಲ್ಲ ಸುಳಿವು ನೀಡಿದರೂ ಅವರು ಯಾರೆಂದು ಗೊತ್ತಾಗುತ್ತಿಲ್ಲವೇ? ಹಾಗಾದರೆ, ಮುಂದೆ ಓದಿ ಉತ್ತರ ಸಿಗಲಿದೆ.

ಅಂದಹಾಗೆ, ಈ ಮೇಲಿನ ಫೋಟೋದಲ್ಲಿರುವುದು ಬೇರೆ ಯಾರೂ ಅಲ್ಲ ಅವರೇ ಸೌತ್​ ಬ್ಯೂಟಿ ಮೀನಾಕ್ಷಿ ಚೌಧರಿ.

ಅಂದಹಾಗೆ, ನಟಿ ಮೀನಾಕ್ಷಿ ಚೌಧರಿ ಅವರು 1997ರ ಮಾರ್ಚ್ 5ರಂದು ಹರ್ಯಾಣದ ಪಂಚಕುಲದಲ್ಲಿ ಗುರ್ಜರ್ ಹಿಂದೂ ಕುಟುಂಬದಲ್ಲಿ ಜನಿಸಿದರು. ಅವರ ತಂದೆ ಬಿ.ಆರ್. ಚೌಧರಿ ಭಾರತೀಯ ಸೇನೆಯಲ್ಲಿ ಕರ್ನಲ್ ಆಗಿದ್ದರು. ಸದ್ಯ ದಿವಂಗತರಾಗಿದ್ದಾರೆ. ಚಂಡೀಗಢದ ಸೇಂಟ್ ಸೈನಿಕ್ ಅಂತಾರಾಷ್ಟ್ರೀಯ ಕಾನ್ವೆಂಟ್ ಸ್ಕೂಲ್‌ನಲ್ಲಿ ಶಿಕ್ಷಣ ಪಡೆದ ಮೀನಾಕ್ಷಿ, ಪಂಜಾಬ್‌ನ ಡೇರಾ ಬಸ್ಸಿಯ ನ್ಯಾಷನಲ್ ಡೆಂಟಲ್ ಕಾಲೇಜ್ ಮತ್ತು ಆಸ್ಪತ್ರೆಯಲ್ಲಿ ಡೆಂಟಲ್ ಸರ್ಜರಿ ಬಿ.ಡಿ.ಎಸ್. ಪದವಿ ಪಡೆದಿದ್ದಾರೆ. 2018ಲ್ಲಿ ಫೆಮಿನಾ ಮಿಸ್ ಹರ್ಯಾಣಾ ಪ್ರಶಸ್ತಿ ಗೆದ್ದ ಮೀನಾಕ್ಷಿ ಅದೇ ವರ್ಷ ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಮೊದಲ ರನ್ನರ್​ ಅಪ್​ ಆದರು. ಅದೇ ವರ್ಷ ಮಿಸ್ ಗ್ರ್ಯಾಂಡ್ ಇಂಡಿಯಾ ಆಗಿ ಆಯ್ಕೆಯಾಗಿ, ಮ್ಯಾನ್ಮಾರ್‌ನಲ್ಲಿ ನಡೆದ ಮಿಸ್ ಗ್ರ್ಯಾಂಡ್ ಇಂಟರ್ನ್ಯಾಷನಲ್‌ನಲ್ಲಿ ಮೊದಲ ರನ್ನರ್​ ಅಪ್​ ಆದರು.

ಮಾಡೆಲಿಂಗ್​ನಿಂದ ಬಣ್ಣದ ಜಗತ್ತಿಗೆ ಪ್ರವೇಶಿಸಿದ ಮೀನಾಕ್ಷಿ, 2019ರಲ್ಲಿ ಹಿಂದಿ ಚಿತ್ರ 'ಅಪ್‌ಸ್ಟಾರ್ಟ್ಸ್'ನಲ್ಲಿ ಸಣ್ಣ ಪಾತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಡಿಸ್ನೀ+ ಹಾಟ್‌ಸ್ಟಾರ್‌ನ ವೆಬ್ ಸೀರಿಸ್ 'ಔಟ್ ಆಫ್ ಲವ್' (2019-2021)ನಲ್ಲಿ ಅಲಿಯಾ ಕಶ್ಯಪ್ ಕಪೂರ್ ಪಾತ್ರದಲ್ಲಿ ನಟಿಸಿ ಗಮನ ಸೆಳೆದರು. 2020ರಲ್ಲಿ 'ಇಚತ ವಹನಮುಲು ನಿಲುಪರಾಡು' (2021) ಸಿನಿಮಾ ಮೂಲಕ ತೆಲುಗು ಚಿತ್ರರಂಗಕ್ಕೆ ಪ್ರವೇಶಿಸಿದರು. 'ಖಿಲಾಡಿ' (2022) ಮತ್ತು 'ಹಿಟ್: ದಿ ಸೆಕೆಂಡ್ ಕೇಸ್' (2022) ಚಿತ್ರಗಳಲ್ಲಿ ಮುಖ್ಯ ಪಾತ್ರಗಳನ್ನು ಮಾಡಿ ಯಶಸ್ಸು ಸಾಧಿಸಿದರು. 2023ರಲ್ಲಿ ತಮಿಳು ಚಿತ್ರ 'ಕೊಲೈ'ಯಲ್ಲಿ ಲೈಲಾ ಬೋರ್ಕರ್ ಪಾತ್ರದೊಂದಿಗೆ ತಮಿಳು ರಂಗಕ್ಕೆ ಎಂಟ್ರಿ ಕೊಟ್ಟರು. ಈ ಚಿತ್ರಗಳಲ್ಲಿ ತಮ್ಮ ಅಭಿನಯ ಸಾಮರ್ಥ್ಯವನ್ನು ತೋರಿಸಿದರು. ಇದರಿಂದ ದಕ್ಷಿಣ ಭಾರತೀಯ ಸಿನಿಮಾ ಉದ್ಯಮದಲ್ಲಿ ಉತ್ತಮ ನೆಲೆ ಕಂಡುಕೊಂಡರು.

2024ರಲ್ಲಿ 'ಗುಂಟೂರ್ ಖಾರಂ', 'ಸಿಂಗಾಪುರ್ ಸಲೂನ್', 'ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್', 'ಲಕ್ಕಿ ಭಾಸ್ಕರ್​', 'ಮಟ್ಕಾ' ಮತ್ತು 'ಮೆಕ್ಯಾನಿಕ್ ರಾಕಿ' ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿ ಹಲವು ಬಾಕ್ಸ್ ಆಫೀಸ್ ಹಿಟ್‌ಗಳನ್ನು ನೀಡಿದರು. ವಿಶೇಷವಾಗಿ 'ಲಕ್ಕಿ ಭಾಸ್ಕರ್​'ನಲ್ಲಿ ಸುಮತಿ ಕುಮಾರ್ ಪಾತ್ರಕ್ಕಾಗಿ 2025ರ 13ನೇ ಸೌತ್ ಇಂಡಿಯನ್ ಇಂಟರ್ನ್ಯಾಷನಲ್ ಮೂವಿ ಅವಾರ್ಡ್ಸ್‌ನಲ್ಲಿ ಬೆಸ್ಟ್ ಆಕ್ಟ್ರೆಸ್ ಕ್ರಿಟಿಕ್ಸ್ – ತೆಲುಗು ಪ್ರಶಸ್ತಿ ಗೆದ್ದರು. 2025ರಲ್ಲಿ 'ಸಂಕ್ರಾಂತಿಕಿ ವಸ್ತುನಾಂ' ಚಿತ್ರದಲ್ಲಿ ಎಸಿ‌ಪಿ ಸಿ. ಮೀನಾಕ್ಷಿ ಐಪಿಎಸ್ 'ಮೀನು' ಪಾತ್ರದಲ್ಲಿ ನಟಿಸಿ ಮಿಂಚಿದರು. 2026ರಲ್ಲಿ ನಟ ನವೀನ್ ಪೊಲಿಶೆಟ್ಟಿ ಅಭಿನಯದ 'ಅನಗನಗ ಒಕಾ ರಾಜು' ಚಿತ್ರದಲ್ಲಿ ನಟಿಸುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net